Prasidh Krishna IPL 2021 KKR Team Player: ಕೆಕೆಆರ್​ ತಂಡದ ಡೆತ್ ಓವರ್‌ ಸ್ಪೆಷಲಿಸ್ಟ್ ಕನ್ನಡಿಗ ಪ್ರಸಿದ್ಧ್ ಕೃಷ್ಣ!​

pruthvi Shankar

pruthvi Shankar | Edited By: Ayesha Banu

Updated on: Apr 11, 2021 | 1:21 PM

prasidh krishna profile: ಇದು ಕೃಷ್ಣ ಅವರ ನಾಲ್ಕನೇ ಐಪಿಎಲ್ ಆಗಲಿದೆ. ಈವರೆಗೆ ಅವರು ಮೂರು ಐಪಿಎಲ್‌ಗಳಲ್ಲಿ ಒಟ್ಟು 24 ಪಂದ್ಯಗಳನ್ನು ಆಡಿದ್ದಾರೆ ಮತ್ತು 18 ವಿಕೆಟ್‌ಗಳನ್ನು ಪಡೆದಿದ್ದಾರೆ.

Prasidh Krishna IPL 2021 KKR Team Player: ಕೆಕೆಆರ್​ ತಂಡದ ಡೆತ್ ಓವರ್‌ ಸ್ಪೆಷಲಿಸ್ಟ್ ಕನ್ನಡಿಗ ಪ್ರಸಿದ್ಧ್ ಕೃಷ್ಣ!​
ಪ್ರಸಿದ್ಧ್ ಕೃಷ್ಣ


ಕೋಲ್ಕತಾ ನೈಟ್ ರೈಡರ್ಸ್ ತಂಡವು ಐಪಿಎಲ್‌ನಲ್ಲಿ ತಮ್ಮ ಬೌಲಿಂಗ್ ಬಗ್ಗೆ ಯಾವಾಗಲೂ ಚರ್ಚೆಯ ವಿಷಯವಾಗಿದೆ. ತಂಡದ ಬೌಲಿಂಗ್ ಪ್ರಬಲವಾಗಿರಲು ಕಾರಣ ತಂಡದ ಅನುಭವಿ ಬೌಲರ್‌ಗಳ ಜೊತೆಗೆ ಯುವ ಬೌಲರ್‌ಗಳ ಉತ್ಸಾಹ. ತಂಡವು ಅಂತಹ ಯುವ ಭಾರತದ ವೇಗದ ಬೌಲರ್‌ಗಳನ್ನು ಹೊಂದಿದ್ದು, ಟೀಂ ಇಂಡಿಯಾಕ್ಕೆ ಉತ್ತಮ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಅಂತಹ ಒಬ್ಬ ಯುವ ಬೌಲರ್ ಪ್ರಸಿದ್ಧ್ ಕೃಷ್ಣ. ಪ್ರಸಿದ್ಧ್ ಕೃಷ್ಣ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಏಕದಿನ ಚೊಚ್ಚಲ ಪಂದ್ಯವನ್ನಾಡಿದರು ಮತ್ತು ಅವರ ಮೊದಲ ಪಂದ್ಯದಲ್ಲಿಯೇ ಅವರು ಎಷ್ಟು ಪ್ರಭಾವಶಾಲಿ ಬೌಲರ್​ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ
ಕೆಕೆಆರ್ ಅವರ ಬೌಲಿಂಗ್‌ ವಿಭಾಗದಲ್ಲಿ ಕೃಷ್ಣ ಮುಖ್ಯ ದಾಳವಾಗಿದ್ದಾರೆ. ಟೀಂ ಇಂಡಿಯಾದಲ್ಲಿ ಆಡಿದ ನಂತರ ತಂಡವು ಅವರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಈ ಕರ್ನಾಟಕ ಬೌಲರ್ ಕೂಡ ತಂಡ ನಿರೀಕ್ಷಿಸುವ ರೀತಿಯಲ್ಲಿ ತನ್ನ ಸಾಮರ್ಥ್ಯ ತೋರಲು ಕಾತುರದಲ್ಲಿದ್ದಾರೆ. ಇದು ಕೃಷ್ಣ ಅವರ ನಾಲ್ಕನೇ ಐಪಿಎಲ್ ಆಗಲಿದೆ. ಈವರೆಗೆ ಅವರು ಮೂರು ಐಪಿಎಲ್‌ಗಳಲ್ಲಿ ಒಟ್ಟು 24 ಪಂದ್ಯಗಳನ್ನು ಆಡಿದ್ದಾರೆ ಮತ್ತು 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಸಮಯದಲ್ಲಿ, ಅವರ ಆರ್ಥಿಕತೆಯು 9.33 ಆಗಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕೃಷ್ಣ ಮೂರು ಪಂದ್ಯಗಳನ್ನು ಆಡಿದ್ದು, ಒಟ್ಟು ಆರು ವಿಕೆಟ್ ಪಡೆದರು. ತಮ್ಮ ಮೊದಲ ಪಂದ್ಯದಲ್ಲಿಯೇ ಅವರು ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಇತಿಹಾಸ ನಿರ್ಮಿಸಿದ್ದರು. ಭಾರತದ ಏಕದಿನ ಚೊಚ್ಚಲ ಪಂದ್ಯದಲ್ಲಿ ಕೃಷ್ಣ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೃಷ್ಣ ಇಂಗ್ಲೆಂಡ್ ವಿರುದ್ಧ ಪ್ರದರ್ಶಿಸಿದ ಆಟವನ್ನ ಕೆಕೆಆರ್ ಕೂಡ ಐಪಿಎಲ್‌ನಲ್ಲೂ ಅದೇ ಪ್ರದರ್ಶನವನ್ನು ಮುಂದುವರಿಸಬೇಕೆಂದು ನಿರೀಕ್ಷಿಸುತ್ತಿದೆ.

ತಾಜಾ ಸುದ್ದಿ

ಕೃಷ್ಣ ಐಪಿಎಲ್ ಇತಿಹಾಸ
ಕೃಷ್ಣ ಅವರು 2018 ರಲ್ಲಿ ತಮ್ಮ ಮೊದಲ ಐಪಿಎಲ್ ಆಡಿದರು. ದೇಶೀಯ ಕ್ರಿಕೆಟ್‌ನಲ್ಲಿ ಪ್ರಬಲ ಪ್ರದರ್ಶನ ನೀಡಿದ ನಂತರ ಕೃಷ್ಣ ಕೆಕೆಆರ್‌ಗೆ ಸೇರ್ಪಡೆಗೊಂಡರು. ತಮ್ಮ ಮೊದಲ ಐಪಿಎಲ್‌ನಲ್ಲಿ ಕೃಷ್ಣ ಏಳು ಪಂದ್ಯಗಳನ್ನು ಆಡಿ ಅವರ ಹೆಸರಿನಲ್ಲಿ 10 ವಿಕೆಟ್ ಪಡೆದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಾಲ್ಕು ಓವರ್‌ಗಳಲ್ಲಿ 30 ರನ್‌ಗಳಿಗೆ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಎಲ್ಲರನ್ನೂ ಮೆಚ್ಚಿಸಿದರು. ಇಲ್ಲಿಂದ ಕೃಷ್ಣ ಅವರು ತಂಡದ ಬೌಲಿಂಗ್ ದಾಳಿಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆಂದು ಎಂಬುದನ್ನು ಸಾಭೀತುಪಡಿಸಿದರು. 2019 ರಲ್ಲಿ ಕೃಷ್ಣ 11 ಪಂದ್ಯಗಳನ್ನು ಆಡಿ, ಕೇವಲ ನಾಲ್ಕು ವಿಕೆಟ್‌ಗಳನ್ನು ಕಬಳಿಸಲು ಸಾಧ್ಯವಾಯಿತು. ಕಳೆದ ಐಪಿಎಲ್‌ನಲ್ಲೂ ಕೃಷ್ಣ ಕೇವಲ ಆರು ಪಂದ್ಯಗಳನ್ನು ಮಾತ್ರ ಆಡಲು ಸಾಧ್ಯವಾಯಿತು ಆದರೆ ಕಡಿಮೆ ಪಂದ್ಯಗಳನ್ನು ಆಡಿದ ನಂತರವೂ ಅವರು ತಂಡಕ್ಕಾಗಿ ಪರಿಣಾಮಕಾರಿಯಾಗಿ ಆಡಿದರು. ಆರು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಪಡೆದರು. ಕ್ಯಾಪ್ಟನ್ ದಿನೇಶ್ ಕಾರ್ತಿಕ್ ಅವರ ಮೇಲೆ ಎಷ್ಟು ನಂಬಿಕೆ ಇತ್ತು ಎಂದರೆ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಸೂಪರ್ ಓವರ್‌ನಲ್ಲಿ ಬೌಲಿಂಗ್ ಮಾಡಲು ಕೃಷ್ಣ ಅವರಿಗೆ ನೀಡಿದ್ದರು.

ಕೃಷ್ಣ ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿ
ಈ ಬೌಲರ್‌ಗೆ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವೂ ಇದೆ. ಕೃಷ್ಣ ಹೊಸ ಚೆಂಡಿನೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿ ಕಾಣುತ್ತಾರೆ. ಡೆತ್ ಓವರ್‌ಗಳಲ್ಲಿ ರನ್ ನಿಲ್ಲಿಸುವುದು ಕೃಷ್ಣನ ವಿಶೇಷತೆ ಮತ್ತು ಇದರಲ್ಲಿ ಅವರ ಮುಖ್ಯ ಆಯುಧವೆಂದರೆ ಯಾರ್ಕರ್ ಬಾಲ್. ಅವರ ವೇಗ ಮತ್ತು ನಿಖರವಾದ ಯಾರ್ಕರ್ ಅವರನ್ನು ಡೆತ್ ಓವರ್‌ಗಳಲ್ಲಿ ಮಾರಕ ಬೌಲರ್‌ನನ್ನಾಗಿ ಮಾಡಿದೆ. ರನ್ ನಿಲ್ಲಿಸುವುದರ ಜೊತೆಗೆ, ವಿಕೆಟ್ ತೆಗೆದುಕೊಳ್ಳುವ ಶಕ್ತಿಯೂ ಇದೆ. ಕೆಕೆಆರ್ ಅಂತರರಾಷ್ಟ್ರೀಯ ಮಟ್ಟದ ಬೌಲರ್‌ಗಳಾದ ಪ್ಯಾಟ್ ಕಮ್ಮಿನ್ಸ್ ಮತ್ತು ಲಾಕಿ ಫರ್ಗುಸನ್ ಅವರನ್ನೂ ಸಹ ಹೊಂದಿದೆ.

ಇದನ್ನೂ ಓದಿ: Rahul Dravid: ವೆಂಕಟೇಶ್​ ಪ್ರಸಾದ್​ ಕೂಡ ಇಂದಿರಾ ನಗರದ ಗೂಂಡಾ! ದ್ರಾವಿಡ್​ ಬಳಿಕ ಇನ್ನೊಂದು ವಿಡಿಯೋ ವೈರಲ್​


ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada