Pro Kabaddi 2021-22: ಬೆಂಗಳೂರು ಬುಲ್ಸ್​ಗೆ ದಬಾಂಗ್ ಡೆಲ್ಲಿ ಸವಾಲು: ಯಾರು ಬಲಿಷ್ಠ?

Bengaluru Bulls vs Dabang Delhi Head to Head: ಪರಿಣಾಮ ಅಂತಿಮವಾಗಿ ಪಂದ್ಯವು 39-39 ಪಾಯಿಂಟ್​ನೊಂದಿಗೆ ಟೈ ಆಯಿತು. ವಿಶೇಷ ಅಂದರೆ ಬೆಂಗಳೂರು ಬುಲ್ಸ್​ ಹಾಗೂ ದಬಾಂಗ್ ಡೆಲ್ಲಿ ನಡುವಣ 14 ಪಂದ್ಯಗಳಲ್ಲಿ ಈ ಒಂದು ಪಂದ್ಯ ಮಾತ್ರ ಟೈನಲ್ಲಿ ಅಂತ್ಯ ಕಂಡಿದೆ.

Pro Kabaddi 2021-22: ಬೆಂಗಳೂರು ಬುಲ್ಸ್​ಗೆ ದಬಾಂಗ್ ಡೆಲ್ಲಿ ಸವಾಲು: ಯಾರು ಬಲಿಷ್ಠ?
Bengaluru Bulls vs Dabang Delhi

ಪ್ರೋ ಕಬಡ್ಡಿ ಲೀಗ್​ನಲ್ಲಿ ಬುಧವಾರ ನಡೆಯಲಿರುವ 50ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ಡೆಲ್ಲಿ ಮುಖಾಮುಖಿಯಾಗಲಿದೆ. ಉಭಯ ತಂಡಗಳು ಈ ಬಾರಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದು, ಹೀಗಾಗಿ ಬಲಿಷ್ಠರ ನಡುವಣ ಕದನ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಈ ಬಾರಿಯ ಸ್ಟಾರ್​ ರೈಡರ್ ಪಟ್ಟಿಯಲ್ಲಿ ದಬಾಂಗ್ ಡೆಲ್ಲಿ ತಂಡದ ನವೀನ್ ಕುಮಾರ್ 130 ಪಾಯಿಂಟ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 95 ಅಂಕಗಳಿಸಿ ಅಗ್ರಸ್ಥಾನದತ್ತ ಬೆಂಗಳೂರು ಬುಲ್ಸ್ ತಂಡದ ನಾಯಕ ಪವನ್ ಕುಮಾರ್ ಶೆಹ್ರಾವತ್ ಅವರು ಕೂಡ ಮುನ್ನುಗ್ಗುತ್ತಿದ್ದಾರೆ. ಇದೇ ಕಾರಣದಿಂದ ಈ ಪಂದ್ಯವು ನವೀನ್ ಕುಮಾರ್ ವರ್ಸನ್ ಪವನ್ ಕುಮಾರ್ ಆಗಿ ಮಾರ್ಪಟ್ಟಿದೆ.

ಇನ್ನು ಈ ಹಿಂದಿನ ಅಂಕಿ ಅಂಶಗಳನ್ನು ಗಮನಿಸಿದರೆ ಉಭಯ ತಂಡಗಳು ಇದುವರೆಗೆ 14 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಬೆಂಗಳೂರು ಬುಲ್ಸ್ ಕೇವಲ 5 ಬಾರಿ ಮಾತ್ರ ಗೆಲುವು ದಾಖಲಿಸಿದೆ. ಅತ್ತ ಡೆಲ್ಲಿ ತಂಡವು 8 ಗೆಲುವಿನೊಂದಿಗೆ ಬೆಂಗಳೂರು ವಿರುದ್ದ ಮೇಲುಗೈ ಹೊಂದಿದೆ. ಇನ್ನು ಕಳೆದ ಬಾರಿಯ ಮುಖಾಮುಖಿಯಲ್ಲಿನ ಫಲಿತಾಂಶವನ್ನು ನೋಡುವುದಾದರೆ, ಪ್ರೋ ಕಬಡ್ಡಿ ಸೀಸನ್ 7 ನಲ್ಲಿ ಬೆಂಗಳೂರು ಬುಲ್ಸ್ ತಂಡವು ದಬಾಂಗ್​ ಡೆಲ್ಲಿಗೆ ಭರ್ಜರಿ ಪೈಪೋಟಿ ನೀಡಿತ್ತು. ಇದಾಗ್ಯೂ ಅಂತಿಮವಾಗಿ 31-33 ಪಾಯಿಂಟ್​ ಗಳಿಸಿ, ಕೇವಲ 2 ಅಂಕಗಳ ಅಂತರದೊಂದಿಗೆ ಬೆಂಗಳೂರು ಬುಲ್ಸ್ ಸೋಲೋಪ್ಪಿಕೊಂಡಿತ್ತು.

ಹಾಗೆಯೇ ಎರಡನೇ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ಮೂಡಿಬಂದಿತ್ತು. ಈ ವೇಳೆ ದಬಾಂಗ್ ಡೆಲ್ಲಿ ಗೆಲ್ಲುವ ಫೇವರೇಟ್ ತಂಡವಾಗಿದ್ದರೂ, ಬೆಂಗಳೂರು ಬುಲ್ಸ್ ತಂಡವು ರಣ ರೋಚಕವಾಗಿ ಆಡಿತ್ತು. ಪರಿಣಾಮ ಅಂತಿಮವಾಗಿ ಪಂದ್ಯವು 39-39 ಪಾಯಿಂಟ್​ನೊಂದಿಗೆ ಟೈ ಆಯಿತು. ವಿಶೇಷ ಅಂದರೆ ಬೆಂಗಳೂರು ಬುಲ್ಸ್​ ಹಾಗೂ ದಬಾಂಗ್ ಡೆಲ್ಲಿ ನಡುವಣ 14 ಪಂದ್ಯಗಳಲ್ಲಿ ಈ ಒಂದು ಪಂದ್ಯ ಮಾತ್ರ ಟೈನಲ್ಲಿ ಅಂತ್ಯ ಕಂಡಿದೆ.

ಹೀಗಾಗಿ ಪ್ರೋ ಕಬಡ್ಡಿ ಲೀಗ್ ಸೀಸನ್ 8 ರ 50ನೇ ಪಂದ್ಯದಲ್ಲಿ ಫಲಿತಾಂಶವನ್ನಂತು ನಿರೀಕ್ಷಿಸಬಹುದು. ಅದರಲ್ಲೂ ಬೆಂಗಳೂರು ಬುಲ್ಸ್ ನಾಯಕ ಪವನ್ ಕುಮಾರ್ ಶೆಹ್ರಾವತ್ ಹಾಗೂ ದಬಾಂಗ್ ಡೆಲ್ಲಿ ಕ್ಯಾಪ್ಟನ್ ನವೀನ್ ಕುಮಾರ್ ನಡುವಣ ಕದನ ಕುತೂಹಲವನ್ನು ಕಣ್ತುಂಬಿಕೊಳ್ಳಬಹುದು.

ಬುಧವಾರದ ಪಂದ್ಯಗಳು:

ಸಮಯ: 7.30 ಕ್ಕೆ- ಹರ್ಯಾಣ ಸ್ಟೀಲರ್ಸ್ vs ಯುಪಿ ಯೋಧಾ

8.30 ಕ್ಕೆ- ಬೆಂಗಳೂರು ಬುಲ್ಸ್ vs ದಬಾಂಗ್ ಡೆಲ್ಲಿ

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Pro Kabaddi 2021-22: Bengaluru Bulls vs Dabang Delhi Head to Head)

Published On - 9:49 pm, Tue, 11 January 22

Click on your DTH Provider to Add TV9 Kannada