ಪ್ರೋ ಕಬಡ್ಡಿ ಲೀಗ್ನ 37ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗಲಿದೆ. ಆರು ಪಂದ್ಯಗಳಲ್ಲಿ ನಾಲ್ಕು ಗೆಲುವು, ಒಂದು ಸೋಲು ಮತ್ತು ಒಂದು ಟೈ ಪಂದ್ಯದೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ಇಂದು ಕೂಡ ಗೆಲ್ಲುವ ಫೇವರೇಟ್ ತಂಡವೆನಿಸಿಕೊಂಡಿದೆ. ಮತ್ತೊಂದೆಡೆ, ಜೈಪುರ ಪಿಂಕ್ ಪ್ಯಾಂಥರ್ಸ್ ಈ ಸೀಸನ್ನಲ್ಲಿ ಇದುವರೆಗೆ ಕಠಿಣ ಹಾದಿಯನ್ನು ಕ್ರಮಿಸುತ್ತಿದೆ. ಐದು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಮೂರು ಸೋಲುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ. ಹೀಗಾಗಿ ಇಂದು ಪ್ಯಾಂಥರ್ಸ್ಗೆ ಗೆಲುವು ಅನಿವಾರ್ಯ.
ಉಭಯ ತಂಡಗಳು ಬಲಿಷ್ಠವಾಗಿದ್ದು, ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಶೆಹ್ರಾವತ್, ಚಂದ್ರನ್ ರಂಜಿತ್, ಭರತ್ ಟಾಪ್ ರೈಡರ್ಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಪ್ಯಾಂಥರ್ಸ್ ಪರ ಕೂಡ ರೈಡರ್ಸ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದಾಗ್ಯೂ ಡಿಫೆಂಡರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರುತ್ತಿಲ್ಲ. ತಂಡದಲ್ಲಿ ಸ್ಟಾರ್ ಆಟಗಾರರಾದ ಅರ್ಜುನ್ ದೇಶ್ವಾಲ್ (ರೈಡರ್) ದೀಪಕ್ ಹೂಡಾ (ರೈಡರ್) ನವೀನ್ ಬಜಾದ್ (ರೈಡರ್) ಇದ್ದು, ಬುಲ್ಸ್ಗೆ ಸವಾಲೆಸೆಯುವ ಸಾಮರ್ಥ್ಯ ಹೊಂದಿದ್ದಾರೆ.
ಇನ್ನು ಉಭಯ ತಂಡಗಳ ಇದುವರೆಗಿನ ಮುಖಾಮುಖಿಯನ್ನು ಗಮನಿಸಿದರೆ, ಬುಲ್ಸ್-ಪ್ಯಾಂಥರ್ಸ್ 12 ಬಾರಿ ಕಾದಾಡಿದೆ. ಇದರಲ್ಲಿ ಜೈಪುರ ಪ್ಯಾಂಥರ್ಸ್ 7 ಬಾರಿ ಗೆದ್ದರೆ, ಬೆಂಗಳೂರು ಬುಲ್ಸ್ 4 ಬಾರಿ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯವು ಟೈನಲ್ಲಿ ಅಂತ್ಯ ಕಂಡಿದೆ. ಅಂದರೆ ಹಳೆಯ ಅಂಕಿ ಅಂಶಗಳ ಪ್ರಕಾರ ಇಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಮೇಲುಗೈ ಹೊಂದಿದೆ. ಇದಾಗ್ಯೂ ಪ್ರಸ್ತುತ ಫಾರ್ಮ್ ಗಮನಿಸಿದರೆ ಬೆಂಗಳೂರು ಬುಲ್ಸ್ ಬಲಿಷ್ಠ ಎಂದೇ ಹೇಳಬಹುದು.
ಬೆಂಗಳೂರು ಬುಲ್ಸ್ ಸಂಭಾವ್ಯ ಸೆವೆನ್: ಪವನ್ ಕುಮಾರ್ ಶೆಹ್ರಾವತ್ (ರೈಡರ್), ಚಂದ್ರನ್ ರಂಜಿತ್ (ರೈಡರ್), ಭರತ್ (ರೈಡರ್), ಮಹೇಂದರ್ ಸಿಂಗ್ (ಎಡ ಕವರ್) ಮಯೂರ್ ಕದಮ್ (ಬಲ ಕವರ್) ಅಮನ್ (ಎಡ ಮೂಲೆ) ಸೌರಭ್ ನಂದಲ್ (ಬಲ ಮೂಲೆ)
ಜೈಪುರ ಪಿಂಕ್ ಪ್ಯಾಂಥರ್ಸ್ ಸಂಭಾವ್ಯ ಸೆವೆನ್: ಅರ್ಜುನ್ ದೇಶ್ವಾಲ್ (ರೈಡರ್) ದೀಪಕ್ ಹೂಡಾ (ರೈಡರ್) ನವೀನ್ ಬಜಾದ್ (ರೈಡರ್) ವಿಶಾಲ್ ಲಾಥರ್ (ಎಡ ಕವರ್) ಅಮಿತ್ ಖಾರ್ಬ್ (ಬಲ ಕವರ್) ನಿತಿನ್ ರಾವಲ್ (ಎಡ ಮೂಲೆ) ಸಾಹುಲ್ ಕುಮಾರ್ (ಬಲ ಮೂಲೆ)
ಬೆಂಗಳೂರು ಬುಲ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ ಪಂದ್ಯದ ಸಮಯ: 6ನೇ ಜನವರಿ 2022, ಗುರುವಾರ, 8:30 PM IST ಸ್ಥಳ: ಶೆರಟನ್ ಗ್ರ್ಯಾಂಡ್, ವೈಟ್ಫೀಲ್ಡ್, ಬೆಂಗಳೂರು
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್..!
ಇದನ್ನೂ ಓದಿ: Ravindra Jadeja: ಸ್ಟಾರ್ ಆಲ್ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!
ಇದನ್ನೂ ಓದಿ: Rohit Sharma: ಫಿಟ್ನೆಸ್ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(Pro Kabaddi 2021, Bengaluru Bulls vs Jaipur Pink Panthers: Head To Head Records)