ಪ್ರೋ ಕಬಡ್ಡಿ ಲೀಗ್ನ 44ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯುಪಿ ಯೋಧಾ ಮುಖಾಮುಖಿಯಾಗಲಿದೆ. ಈ ಪಂದ್ಯವು ಬೆಂಗಳೂರು ಬುಲ್ಸ್ ಹಾಗೂ ಯುಪಿ ಯೋಧಾ ನಡುವಣ ಪಂದ್ಯಕ್ಕಿಂತ ಇಬ್ಬರು ಸ್ಟಾರ್ ಆಟಗಾರರ ನಡುವಣ ಕದನವಾಗಿ ಮಾರ್ಪಟ್ಟಿದೆ. ಹೌದು, ಈ ಪಂದ್ಯದ ಮೂಲಕ ಪರ್ದೀಪ್ ನರ್ವಾಲ್ ಹಾಗೂ ಪವನ್ ಕುಮಾರ್ ಶೆಹ್ರಾವತ್ ಮುಖಾಮುಖಿಯಾಗುತ್ತಿದ್ದಾರೆ. ಇಬ್ಬರೂ ಪ್ರೋ ಕಬಡ್ಡಿ ಲೀಗ್ನ ಅತ್ಯುತ್ತಮ ಆಟಗಾರರು ಎಂಬುದು ಡೌಟೇ ಇಲ್ಲ.
ಅದರಲ್ಲೂ ಪರ್ದೀಪ್ ನರ್ವಾಲ್ ಪ್ರೋ ಕಬಡ್ಡಿ ಲೀಗ್ನಲ್ಲಿ ಕಳೆದ 7 ಸೀಸನ್ಗಳಿಂದ ಸಾವಿರಕ್ಕೂ ಅಧಿಕ ರೈಡಿಂಗ್ ಪಾಯಿಂಟ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಆದರೆ ಕಳೆದೆರಡು ಸೀಸನ್ಗಳನ್ನು ಗಮನಿಸಿದರೆ ಪವನ್ ಕುಮಾರ್ ಶೆಹ್ರಾವತ್ ಪರ್ದೀಪ್ ನರ್ವಾಲ್ಗಿಂತ ಮುಂದಿದ್ದಾರೆ. ಹೌದು, ಕಳೆದ ಸೀಸನ್ನಲ್ಲಿ ಪಟ್ನಾ ಪೈರೇಟ್ಸ್ ಪರ ಆಡಿದ್ದ ಪರ್ದೀಪ್ ನರ್ವಾಲ್ 452 ಪಾಯಿಂಟ್ ಗಳಿಸಿದ್ದರು.
ಆದರೆ ಪವನ್ ಕುಮಾರ್ ಶೆಹ್ರಾವತ್ 463 ಪಾಯಿಂಟ್ಗಳಿಸುವ ಮೂಲಕ ನಂಬರ್ 1 ಆಟಗಾರ ಎನಿಸಿಕೊಂಡಿದ್ದರು. ಈ ಬಾರಿ ಕೂಡ ಪರ್ದೀಪ್ ನರ್ವಾಲ್ಗಿಂತ ಶೆಹ್ರಾವತ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. 7 ಪಂದ್ಯಗಳಿಂದ ಪರ್ದೀಪ್ 44 ಸಕ್ಸಸ್ ರೈಡ್ ಪಾಯಿಂಟ್ ಪಡೆದರೆ ಪವನ್ ಕುಮಾರ್ ಶೆಹ್ರಾವತ್ 74 ಸಕ್ಸಸ್ಫುಲ್ ರೈಡಿಂಗ್ ಪಾಯಿಂಟ್ ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಈ ಬಾರಿ ಪರ್ದೀಪ್ ನರ್ವಾಲ್ ಒಟ್ಟಾರೆ 53 ಪಾಯಿಂಟ್ಗಳನ್ನು ಕಲೆಹಾಕಿದ್ದರೆ, ಪವನ್ ಕುಮಾರ್ ಶೆಹ್ರಾವತ್ 90 ಪಾಯಿಂಟ್ಗಳನ್ನು ಗಳಿಸಿದ್ದಾರೆ. ಈ ಮೂಲಕ ಬೆಂಗಳೂರು ಬುಲ್ಸ್ ತಂಡ ಗೆಲುವಿನಲ್ಲಿ ಪವನ್ ಕುಮಾರ್ ಶೆಹ್ರಾವತ್ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇಲ್ಲಿ ಪ್ರೋ ಕಬಡ್ಡಿ ಲೀಗ್ ಇತಿಹಾಸದ ಅತ್ಯುತ್ತಮ ರೈಡರ್ಗಳಲ್ಲಿ ಪರ್ದೀಪ್ ನರ್ವಾಲ್ ಅಗ್ರಸ್ಥಾನದಲ್ಲಿದ್ದರೂ, ಪ್ರಸ್ತುತ ಅತ್ಯುತ್ತಮ ಆಟಗಾರನಾಗಿ ಪವನ್ ಶೆಹ್ರಾವತ್ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಪ್ರಸ್ತುತ ಫಾರ್ಮ್ನಂತೆ ಪರ್ದೀಪ್ಗಿಂತ ಪವನ್ ಕುಮಾರ್ ಶೆಹ್ರಾವತ್ ಬೆಸ್ಟ್ ರೈಡರ್ ಎಂದೇ ಹೇಳಬಹುದು.
ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್
ಇದನ್ನೂ ಓದಿ: Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!