Pro Kabaddi League 2021-22: ಪುಣೇರಿ ಪಲ್ಟನ್ ವಿರುದ್ದ ಪಲ್ಟಿ ಹೊಡೆದ ಬೆಂಗಳೂರು ಬುಲ್ಸ್

Pro Kabaddi League 2021-22: ಪುಣೇರಿ ಪಲ್ಟನ್ ವಿರುದ್ದ ಪಲ್ಟಿ ಹೊಡೆದ ಬೆಂಗಳೂರು ಬುಲ್ಸ್
PKL 8

ಪುಣೇರಿ ಪಲ್ಟನ್ ಪರ ಮೋಹಿತ್ ಗೋಯಟ್ ಕೂಡ ಬೆಂಗಳೂರು ಬುಲ್ಸ್ ಡಿಫೆನ್ಸ್ ಅನ್ನು ವಂಚಿಸುವಲ್ಲಿ ಯಶಸ್ವಿಯಾದರು. ಅದರಂತೆ ಮೊದಲಾರ್ಧದಲ್ಲಿ ಪುಣೇರಿ ಪಲ್ಟನ್ 16 ಪಾಯಿಂಟ್ ಕಲೆಹಾಕಿದರೆ, ಬೆಂಗಳೂರು ಬುಲ್ಸ್ ತಂಡ 15 ಅಂಕಗಳಿಸಿತು. 1 ಅಂಕಗಳ ಮುನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಪುಣೇರಿ ತಂಡವು ಆರಂಭದಲ್ಲೇ ಮೇಲುಗೈ ಸಾಧಿಸಿತು.

TV9kannada Web Team

| Edited By: Zahir PY

Jan 22, 2022 | 9:02 PM

ಪ್ರೋ ಕಬಡ್ಡಿ ಲೀಗ್​ನ 70ನೇ ಪಂದ್ಯದಲ್ಲಿಬೆಂಗಳೂರು ಬುಲ್ಸ್ ವಿರುದ್ದ ಪುಣೇರಿ ಪಲ್ಟನ್ ರೋಚಕ ಜಯ ಸಾಧಿಸಿದೆ. ಆರಂಭದಿಂದಲೇ ಭರ್ಜರಿ ಪೈಪೋಟಿಗೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಪುಣೇರಿ ಪಲ್ಟನ್ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದರು. ಅದರಂತೆ ಮೊದಲಾರ್ಧದಲ್ಲೇ ಬೆಂಗಳೂರು ಬುಲ್ಸ್ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಆದರೆ ಇತ್ತ ಪವನ್ ಕುಮಾರ್ ಶೆಹ್ರಾವತ್ ಬೋನಸ್ ಅಂಕಗಳೊಂದಿಗೆ ತಂಡದ ಪಾಯಿಂಟ್ ಹೆಚ್ಚಿಸಿದರು. ಇದರಿಂದಾಗಿ ಮೊದಲಾರ್ಧದ ಮುಕ್ತಾಯದೊಳಗೆ ಉಭಯ ತಂಡಗಳು 13 ಅಂಕಗಳೊಂದಿಗೆ ಸಮಬಲ ಸಾಧಿಸಿತು. ಈ ಹಂತದಲ್ಲಿ ಅತ್ಯುತ್ತಮ ರೈಡ್ ಮಾಡಿದ ಪವನ್ ಕುಮಾರ್ ಬ್ಯಾಕ್ ಟು ಬ್ಯಾಕ್ ಪಾಯಿಂಟ್​ಗಳನ್ನು ಕಲೆಹಾಕಿದರು.

ಆದರೆ ಮತ್ತೊಂದೆಡೆ ಪುಣೇರಿ ಪಲ್ಟನ್ ಪರ ಮೋಹಿತ್ ಗೋಯಟ್ ಕೂಡ ಬೆಂಗಳೂರು ಬುಲ್ಸ್ ಡಿಫೆನ್ಸ್ ಅನ್ನು ವಂಚಿಸುವಲ್ಲಿ ಯಶಸ್ವಿಯಾದರು. ಅದರಂತೆ ಮೊದಲಾರ್ಧದಲ್ಲಿ ಪುಣೇರಿ ಪಲ್ಟನ್ 16 ಪಾಯಿಂಟ್ ಕಲೆಹಾಕಿದರೆ, ಬೆಂಗಳೂರು ಬುಲ್ಸ್ ತಂಡ 15 ಅಂಕಗಳಿಸಿತು. 1 ಅಂಕಗಳ ಮುನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಪುಣೇರಿ ತಂಡವು ಆರಂಭದಲ್ಲೇ ಮೇಲುಗೈ ಸಾಧಿಸಿತು.

ತಂಡದ ಪರ ಅತ್ಯುತ್ತಮ ರೈಡಿಂಗ್ ಪ್ರದರ್ಶಿಸಿ ಮೋಹಿತ್ ಪಾಯಿಂಟ್​ಗಳನ್ನು ಕಲೆಹಾಕುತ್ತಾ ಸಾಗಿದರು. ಪರಿಣಾಮ ಬೆಂಗಳೂರು ಬುಲ್ಸ್ ತಂಡವು 24 ಅಂಕಗಳಿಸುವಷ್ಟರಲ್ಲಿ ಪುಣೇರಿ ಪಲ್ಟನ್ 30 ಪಾಯಿಂಟ್ ಪಡೆಯಿತು. ಇತ್ತ ಪವನ್ ಕುಮಾರ್ ಹೊರತುಪಡಿಸಿ ಉಳಿದ ಆಟಗಾರರಿಂದ ಉತ್ತಮ ಪ್ರದರ್ಶನ ಮೂಡಿಬರುತ್ತಿರಲಿಲ್ಲ. ಇದಾಗ್ಯೂ ಕೊನೆಯ ಐದು ನಿಮಿಷಗಳಿರುವಾಗ ಬೆಂಗಳೂರು ಬುಲ್ಸ್ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದರು. ಅಂತಿಮ 5 ನಿಮಿಷಗಳ ಆಟ ಬಾಕಿಯಿದ್ದ ವೇಳೆ ಪುಣೇರಿ ಪಲ್ಟನ್ 32 ಅಂಕ ಪಡೆದಿದ್ದರೆ, ಬೆಂಗಳೂರು ಬುಲ್ಸ್ ತಂಡವು 29 ಅಂಕ ಪಡೆದಿತ್ತು.

ಅಂತಿಮ ಹಂತದಲ್ಲಿ ಕೇವಲ 3 ಪಾಯಿಂಟ್ ಮುನ್ನಡೆ ಪಡೆದಿದ್ದ ಪುಣೇರಿ ಪಲ್ಟನ್​ಗೆ ಪೈಪೋಟಿ ನೀಡುವಲ್ಲಿ ಬೆಂಗಳೂರು ಬುಲ್ಸ್ ಹಿಂದೆ ಬಿದ್ದರು. ಅದರಲ್ಲೂ ಈ ಹಂತದಲ್ಲಿ ಪವನ್ ಕುಮಾರ್ ಶೆಹ್ರಾವತ್ ಹೊರಗುಳಿದಿದ್ದು ಬುಲ್ಸ್ ಪಾಲಿಗೆ ದುಬಾರಿಯಾಯಿತು. ಕೊನೆಯ 2 ನಿಮಿಷಗಳಿರುವಾಗ ಹೋರಾಟ ಮುಂದುವರೆಸಿದ ಬೆಂಗಳೂರು ಬುಲ್ಸ್ ತಂಡವು ಪಾಯಿಂಟ್​ ಅನ್ನು 33-34 ಹಂತಕ್ಕೆ ತಂದು ನಿಲ್ಲಿಸಿದರು. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಅಂತಿಮ ಕ್ಷಣಗಳ ಹೋರಾಟದಲ್ಲಿ 37 ಪಾಯಿಂಟ್ ಕಲೆಹಾಕುವ ಮೂಲಕ ಪುಣೇರಿ ಪಲ್ಟನ್ 2 ಅಂಕಗಳಿಂದ ಬೆಂಗಳೂರು ಬುಲ್ಸ್ (35) ವಿರುದ್ದ ರೋಚಕ ಜಯ ಸಾಧಿಸಿತು.

ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!

(Pro Kabaddi League 2021-22: Puneri Paltan Beat Bengaluru Bulls)

Follow us on

Most Read Stories

Click on your DTH Provider to Add TV9 Kannada