ಪ್ರೋ ಕಬಡ್ಡಿ ಲೀಗ್ನ 44ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ದ ಯುಪಿ ಯೋಧಾ ಭರ್ಜರಿ ಜಯ ಸಾಧಿಸಿದೆ. ಸ್ಟಾರ್ ಆಟಗಾರರಾದ ಪರ್ದೀಪ್ ನರ್ವಾಲ್ ಹಾಗೂ ಪವನ್ ಕುಮಾರ್ ಶೆಹ್ರಾವತ್ ನಡುವಣ ಮುಖಾಮುಖಿಯಾಗಿದ್ದ ಕಾರಣ ಈ ಪಂದ್ಯವು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಪಂದ್ಯದ ಆರಂಭದಲ್ಲೇ ಭರ್ಜರಿ ರೈಡಿಂಗ್ ಮೂಲಕ ಪವನ್ ಕುಮಾರ್ ಶೆಹ್ರಾವತ್ ಬೆಂಗಳೂರು ತಂಡದ ಅಂಕ ಖಾತೆ ತೆರೆದಿದ್ದರು. ಇದಾದ ಬಳಿಕ ಡಿಫೆನ್ಸ್ನಲ್ಲೂ ಮಿಂಚಿದ ಬೆಂಗಳೂರು ಬುಲ್ಸ್ ಆರಂಭದಲ್ಲೇ ಸಂಪೂರ್ಣ ಹಿಡಿತ ಸಾಧಿಸಿದ್ದರು.
ಆದರೆ ಹತ್ತು ಅಂಕಗಳ ಬಳಿಕ ಯುಪಿ ಯೋಧಾ ಸಂಪೂರ್ಣ ಟ್ರ್ಯಾಕ್ಗೆ ಬಂದರು. ಅದರಲ್ಲೂ ಯುಪಿ ಯೋಧಾ ತಂಡದ ಡಿಫೆಂಡರ್ಗಳು ಬೆಂಗಳೂರು ಬುಲ್ಸ್ ರೈಡರ್ಗಳನ್ನು ಬಂಧಿಸುವ ಮೂಲಕ ಬ್ಯಾಕ್ ಟು ಬ್ಯಾಕ್ ಅಂಕಗಳನ್ನು ಪಡೆಯುತ್ತಾ ಹೋದರು. ಅಷ್ಟೇ ಅಲ್ಲದೆ ಎರಡು ಬ್ಯಾರಿ ಸೂಪರ್ ಟ್ಯಾಕಲ್ ಮಾಡುವ ಪಾಯಿಂಟ್ನಲ್ಲಿ ಬೆಂಗಳೂರು ತಂಡವನ್ನು ಹಿಂದಿಕ್ಕಿದರು. ಪರಿಣಾಮ ಮೊದಲಾರ್ಧದ ಮುಕ್ತಾಯದ ವೇಳೆಗೆ ಯುಪಿ ಯೋಧಾ 19 ಅಂಕ ಪಡೆದರೆ, ಬೆಂಗಳೂರು ಬುಲ್ಸ್ 14 ಅಂಕ ಪಡೆಯಿತು.
ಮೊದಲಾರ್ಧದ ಮೇಲುಗೈಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಯುಪಿ ಯೋಧಾ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಪರಿಣಾಮ ಯುಪಿ ಯೋಧಾ 29 ಅಂಕಗಳಿಸಿದ್ದ ವೇಳೆ ಬೆಂಗಳೂರು ಕಲೆಹಾಕಿದ್ದು 20 ಅಂಕಗಳನ್ನು ಮಾತ್ರ. ಇನ್ನು ಅಂತಿಮ ಕ್ಷಣದಲ್ಲಿ ಭರ್ಜರಿ ಡಿಫೆನ್ಸ್ ಪ್ರದರ್ಶಿಸಿದ ಯುಪಿ ಯೋಧಾ 39 ಅಂಕಗಳನ್ನು ಗಳಿಸಿತು. ಆದರೆ ಈ ವೇಳೆ ಬೆಂಗಳುರು ಅಂಕ 25.
ಕೊನೆಯ 1 ನಿಮಿಷಗಳಿರುವಾಗ 13 ಅಂಕಗಳ ಮುನ್ನಡೆ ಪಡೆದಿದ್ದ ಯುಪಿ ಯೋಧಾ ಗೆಲುವನ್ನು ಖಚಿತಪಡಿಸಿದ್ದರು. ಅಂತಿಮವಾಗಿ ಯುಪಿ ಯೋಧಾ 42 ಅಂಕಗಳಿಸಿದರೆ, ಬೆಂಗಳೂರು ಬುಲ್ಸ್ ತಂಡವು 27 ಅಂಕಗಳಿಸಿತು. ಇದರೊಂದಿಗೆ 15 ಅಂಕಗಳ ಮುನ್ನಡೆಯೊಂದಿಗೆ ಯುಪಿ ಯೋಧಾ ಭರ್ಜರಿ ಜಯ ಸಾಧಿಸಿತು. ಯುಪಿ ಯೋಧಾ ಪರ ಶ್ರೀಕಾಂತ್ ಜಾಧವ್ 12 ರೈಡಿಂಗ್ ಪಾಯಿಂಟ್ಗಳಿಸಿ ಯಶಸ್ವಿ ರೈಡರ್ ಎನಿಸಿಕೊಂಡರು. ನಾಲ್ಕು ಟ್ಯಾಕಲ್ಸ್ ಪಡೆಯುವ ಮೂಲಕ ಯುಪಿ ಯೋಧಾ ಪರ ಸುಮಿತ್ ಅತ್ಯುತ್ತಮ ಡಿಫೆಂಡರ್ ಆಗಿ ಹೊರಹೊಮ್ಮಿದರು.
ಈ ಸೋಲಿನೊಂದಿಗೆ ಬೆಂಗಳೂರು ಬುಲ್ಸ್ ತಂಡವು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ. ಸದ್ಯ ಅಗ್ರಸ್ಥಾನದಲ್ಲಿ ದಬಾಂಗ್ ಡೆಲ್ಲಿ ಇದ್ದು, 2ನೇ ಸ್ಥಾನದಲ್ಲಿ ಪಟ್ನಾ ಪೈರೇಟ್ಸ್ ತಂಡವಿದೆ. ಇನ್ನು ಮೂರನೇ ಸ್ಥಾನವನ್ನು ಬೆಂಗಳೂರು ಬುಲ್ಸ್ ಅಲಂಕರಿಸಿದರೆ, ಈ ಜಯದೊಂದಿಗೆ ಯುಪಿ ಯೋಧಾ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.
ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್
ಇದನ್ನೂ ಓದಿ: Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(Pro Kabaddi League 2021-22: UP Yoddha Beat Bengaluru Bulls)