Pro Kabaddi League (PKL) 2021: ದಬಾಂಗ್ ಡೆಲ್ಲಿಯನ್ನು ಮಕಾಡೆ ಮಲಗಿಸಿದ ಬೆಂಗಳೂರು ಬುಲ್ಸ್​

Pro Kabaddi League (PKL) 2021: ಅತ್ಯುತ್ತಮ ರೈಡಿಂಗ್ ಮತ್ತು ಡಿಫೆನ್ಸ್​ ಮೂಲಕ ಬೆಂಗಳೂರು ಬುಲ್ಸ್​ 35 ಪಾಯಿಂಟ್​ ಕಲೆಹಾಕಿದರೆ, ಈ ಹಂತದಲ್ಲಿ ದಬಾಂಗ್ ಡೆಲ್ಲಿ ಪಡೆದಿದ್ದು ಕೇವಲ 1 ಪಾಯಿಂಟ್​. ಅಷ್ಟೇ ಅಲ್ಲದೆ 4ನೇ ಬಾರಿ ದಬಾಂಗ್ ಡೆಲ್ಲಿಯನ್ನು ಆಲೌಟ್ ಮಾಡುವ ಮೂಲಕ ಬೆಂಗಳೂರು ಬುಲ್ಸ್ ತನ್ನ ಪಾಯಿಂಟ್​ ಅನ್ನು 50ಕ್ಕೇರಿಸಿತು.

Pro Kabaddi League (PKL) 2021: ದಬಾಂಗ್ ಡೆಲ್ಲಿಯನ್ನು ಮಕಾಡೆ ಮಲಗಿಸಿದ ಬೆಂಗಳೂರು ಬುಲ್ಸ್​
Bengaluru Bulls

ಪ್ರೋ ಕಬಡ್ಡಿ ಲೀಗ್​ನ 50ನೇ ಪಂದ್ಯದಲ್ಲಿ ಬಲಿಷ್ಠ ದಬಾಂಗ್ ಡೆಲ್ಲಿ ತಂಡದ ವಿರುದ್ದ ಬೆಂಗಳೂರು ಬುಲ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡದ ಸ್ಟಾರ್ ಆಟಗಾರ ನವೀನ್ ಕುಮಾರ್ ಹೊರಗುಳಿದಿದ್ದರು. ಇತ್ತ ಆರಂಭದಿಂದಲೇ ದಬಾಂಗ್ ಡೆಲ್ಲಿ ವಿರುದ್ದ ಮೇಲುಗೈ ಸಾಧಿಸಿದ ಬೆಂಗಳೂರು ಬುಲ್ಸ್​ ಬ್ಯಾಕ್ ಟು ಬ್ಯಾಕ್ ಪಾಯಿಂಟ್ ಗಳಿಸಿದರು. ಅದರಲ್ಲೂ ತಂಡದ ನಾಯಕ ಪವನ್ ಕುಮಾರ್ ಶೆಹ್ರಾವತ್ ದಬಾಂಗ್ ತಂಡದ ಅನುಭವಿ ಆಟಗಾರಾದ ಅಜಯ್ ಕುಮಾರ್, ಮಂಚೀತ್ ಚಿಲ್ಲರ್ ಅವರ ಡಿಫೆನ್ಸ್​ ಅನ್ನು ನಿರಾಯಾಸವಾಗಿ ಬೇಧಿಸುವ ಮೂಲಕ ಗಮನ ಸೆಳೆದರು.

ಮೊದಲ ಸುತ್ತಿನಲ್ಲೇ ಸೂಪರ್ 10 ಪಾಯಿಂಟ್ ಕಲೆಹಾಕುವ ಮೂಲಕ ಪವನ್ ಕುಮಾರ್ ಶೆಹ್ರಾವತ್ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಪರಿಣಾಮ ಮೊದಲಾರ್ಧ ಮುಕ್ತಾಯದ ವೇಳೆಗೆ ದಬಾಂಗ್ ಡೆಲ್ಲಿ ಕಲೆಹಾಕಿದ್ದು ಕೇವಲ 11 ಪಾಯಿಂಟ್ ಆಗಿದ್ದರೆ, ಬೆಂಗಳೂರು ಬುಲ್ಸ್​ ಬರೋಬ್ಬರಿ 27 ಅಂಕಗಳಿಸಿ 16 ಪಾಯಿಂಟ್​ಗಳ ಮುನ್ನಡೆ ಪಡೆಯಿತು. ಮೊದಲಾರ್ಧದ ಮುನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಬೆಂಗಳೂರು ಬುಲ್ಸ್ ಯಾವುದೇ ಹಂತದಲ್ಲೂ ಡೆಲ್ಲಿಗೆ ಪಾಯಿಂಟ್​ಗಳಿಸಲು ಅವಕಾಶ ನೀಡಲಿಲ್ಲ.

ಅದರಂತೆ ಅತ್ಯುತ್ತಮ ರೈಡಿಂಗ್ ಮತ್ತು ಡಿಫೆನ್ಸ್​ ಮೂಲಕ ಬೆಂಗಳೂರು ಬುಲ್ಸ್​ 35 ಪಾಯಿಂಟ್​ ಕಲೆಹಾಕಿದರೆ, ಈ ಹಂತದಲ್ಲಿ ದಬಾಂಗ್ ಡೆಲ್ಲಿ ಪಡೆದಿದ್ದು ಕೇವಲ 1 ಪಾಯಿಂಟ್​. ಅಷ್ಟೇ ಅಲ್ಲದೆ 4ನೇ ಬಾರಿ ದಬಾಂಗ್ ಡೆಲ್ಲಿಯನ್ನು ಆಲೌಟ್ ಮಾಡುವ ಮೂಲಕ ಬೆಂಗಳೂರು ಬುಲ್ಸ್ ತನ್ನ ಪಾಯಿಂಟ್​ ಅನ್ನು 50ಕ್ಕೇರಿಸಿತು. ಇದೇ ವೇಳೆ ದಬಾಂಗ್ ಡೆಲ್ಲಿಯ ಕಲೆಹಾಕಿದ್ದು ಕೇವಲ 17 ಪಾಯಿಂಟ್ ಮಾತ್ರ ಎಂಬುದೇ ವಿಶೇಷ. ಅಂದರೆ ದಬಾಂಗ್ ಡೆಲ್ಲಿ ಯಾವುದೇ ಹಂತದಲ್ಲೂ ಬೆಂಗಳೂರು ಬುಲ್ಸ್​ಗೆ ಸರಿಸಾಟಿಯಾದ ಪ್ರದರ್ಶನ ನೀಡಿರಲಿಲ್ಲ.

ಇನ್ನು ಕೊನೆಯ ಐದು ನಿಮಿಷಕ್ಕೂ ಮುನ್ನ ನೀಡಲಾದ ವಿರಾಮದ ವೇಳೆಗೆ ಬೆಂಗಳೂರು ಬುಲ್ಸ್ 55 ಪಾಯಿಂಟ್​ಗಳಿಸಿದ್ದರೆ, ದಬಾಂಗ್ ಡೆಲ್ಲಿ 17 ಪಾಯಿಂಟ್​ನಲ್ಲೇ ಉಳಿದುಕೊಂಡಿತ್ತು. ಅಂದರೆ 38 ಅಂಕಗಳ ಮುನ್ನಡೆಯೊಂದಿಗೆ ಅದಾಗಲೇ ಬೆಂಗಳೂರು ಬುಲ್ಸ್ ತಂಡವು ಗೆಲುವನ್ನು ಖಚಿತಪಡಿಸಿಕೊಂಡಿತ್ತು. ಅಷ್ಟೇ ಅಲ್ಲದೆ ಅಂತಿಮ ಹಂತದಲ್ಲಿ ಮತ್ತೊಮ್ಮೆ ದಬಾಂಗ್ ಡೆಲ್ಲಿಯ ಎಲ್ಲರನ್ನು ಔಟ್ ಮಾಡಿ 5ನೇ ಬಾರಿ ಆಲೌಟ್ ಮಾಡುವಲ್ಲಿ ಬೆಂಗಳೂರು ಬುಲ್ಸ್ ಯಶಸ್ವಿಯಾಯಿತು.

ಅಂತಿಮವಾಗಿ 61-22 ಅಂಕಗಳೊಂದಿಗೆ ಬೆಂಗಳೂರು ಬುಲ್ಸ್ ತಂಡವು 39 ಪಾಯಿಂಟ್​ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಇನ್ನು ಈ ಪಂದ್ಯದಲ್ಲಿ 27 ಪಾಯಿಂಟ್ ಮೂಲಕ ಪವನ್​ ಕುಮಾರ್ ಶೆಹ್ರಾವತ್ ಈ ಬಾರಿಯ ಪ್ರೋ ಕಬಡ್ಡಿ ಲೀಗ್​ನಲ್ಲಿ 100 ಅಂಕಗಳನ್ನು ಪೂರೈಸಿ ಮುನ್ನುಗ್ಗಿದ್ದಾರೆ. ಅಷ್ಟೇ ಈ ಬಾರಿಯ ಪಂದ್ಯದಲ್ಲಿ ಅತೀ ಹೆಚ್ಚು ಪಾಯಿಂಟ್ ಕಲೆಹಾಕಿದ (27) ಆಟಗಾರ ಎಂಬ ದಾಖಲೆಯನ್ನು ಪವನ್ ಕುಮಾರ್ ಬರೆದಿದ್ದಾರೆ.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Pro Kabaddi League (PKL) 2021: Bengaluru Bulls Beat Dabang Delhi)

Published On - 9:48 pm, Wed, 12 January 22

Click on your DTH Provider to Add TV9 Kannada