ಪ್ರೋ ಕಬಡ್ಡಿ ಲೀಗ್ನ 74ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ತೆಲುಗು ಟೈಟನ್ಸ್ ವಿರುದ್ದ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಆರಂಭದಲ್ಲೇ ಮೇಲುಗೈ ಸಾಧಿಸಿದ ಬೆಂಗಳೂರು ಬುಲ್ಸ್ ಸತತ ಪಾಯಿಂಟ್ಗಳನ್ನು ಕಲೆಹಾಕಿತು. ಮತ್ತೊಂದೆಡೆ ಒತ್ತಡಕ್ಕೆ ಸಿಲುಕಿದ ತೆಲುಗು ಟೈಟನ್ಸ್ ತಂಡದಲ್ಲಿ ಹೊಂದಾಣಿಕೆ ಆಟದ ಕೊರತೆ ಕಂಡು ಬಂತು. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ಬೆಂಗಳೂರು ಬುಲ್ಸ್ ತಂಡದ ನಾಯಕ ಪವನ್ ಕುಮಾರ್ ಶೆಹ್ರಾವತ್ 6 ಬೋನಸ್ ಅಂಕಗಳನ್ನು ಕಲೆಹಾಕಿದರು. ಅಷ್ಟೇ ಅಲ್ಲದೆ ಮೊದಲಾರ್ಧದಲ್ಲಿ 5 ರೈಡಿಂಗ್ ಪಾಯಿಂಟ್ ಪಡೆದರು. ಪರಿಣಾಮ ಮೊದಲಾರ್ಧದಲ್ಲೇ ಬೆಂಗಳೂರು ಬುಲ್ಸ್ ತಂಡವು ಭರ್ಜರಿ ಮುನ್ನಡೆ ಪಡೆಯಿತು.
ಅದರಂತೆ ಮೊದಲಾರ್ಧದ ಮುಕ್ತಾಯದ ವೇಳೆ ಬೆಂಗಳೂರು ಬುಲ್ಸ್ ತಂಡವು 22 ಅಂಕ ಕಲೆಹಾಕಿದರೆ, ತೆಲುಗು ಟೈಟನ್ಸ್ ತಂಡವು ಕೇವಲ 11 ಅಂಕಗಳನ್ನು ಮಾತ್ರಗಳಿಸಿತ್ತು. 11 ಪಾಯಿಂಟ್ಗಳ ಮುನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಬೆಂಗಳೂರು ಬುಲ್ಸ್ಗೆ ತೆಲುಗು ಟೈಟನ್ಸ್ ಪೈಪೋಟಿ ನೀಡುವ ಪ್ರಯತ್ನ ಮಾಡಿತು.
ಅದರಂತೆ ದ್ವಿತಿಯಾರ್ಧದಲ್ಲಿ ಬೆಂಗಳೂರು ಬುಲ್ಸ್ 5 ಪಾಯಿಂಟ್ ಕಲೆಹಾಕುವಷ್ಟರಲ್ಲಿ ತೆಲುಗು ಟೈಟನ್ಸ್ 9 ಪಾಯಿಂಟ್ಗಳಿಸಿತು. ಟೈಟನ್ಸ್ ಪರ ಅತ್ಯುತ್ತಮ ರೈಡಿಂಗ್ ಪ್ರದರ್ಶಿಸಿದ ಅಂಕಿತ್ 5 ಪಾಯಿಂಟ್ ಕಲೆಹಾಕಿ ಗಮನ ಸೆಳೆದರು. ಅಷ್ಟೇ ಅಲ್ಲದೆ ಬೆಂಗಳೂರು ಬುಲ್ಸ್ ತಂಡವನ್ನು ಆಲೌಟ್ ಮಾಡಿ ಪಾಯಿಂಟ್ ಅಂತರವನ್ನು 4ಕ್ಕೆ ಇಳಿಸಿದರು. ಇದಾಗ್ಯೂ ಅಂತಿಮ ಹಂತದಲ್ಲಿ ಎಚ್ಚರಿಕೆಯ ಆಟವಾಡಿದ ಬೆಂಗಳೂರು ಬುಲ್ಸ್ ತಂಡವು 36 ಅಂಕಗಳಿಸುವ ಮೂಲಕ 5 ಪಾಯಿಂಟ್ಗಳ ಅಂತರದಿಂದ (36-31) ಜಯ ಸಾಧಿಸಿತು.
ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(Pro Kabaddi League (PKL) 2022: Bengaluru Bulls Beat Telugu Titans)