Sania Mirza: ವಿಂಬಲ್ಡನ್​ ಮಿಶ್ರ ಡಬಲ್ಸ್​ನಲ್ಲಿ ಸಾನಿಯಾ ಮಿರ್ಜಾ ಹೋರಾಟ ಅಂತ್ಯ

Wimbledon 2022: ಸಾನಿಯಾ ಮಿರ್ಜಾ 2009 ರ ಆಸ್ಟ್ರೇಲಿಯನ್ ಓಪನ್ ಮತ್ತು 2012 ರ ಫ್ರೆಂಚ್ ಓಪನ್‌ನಲ್ಲಿ ಮಹೇಶ್ ಭೂಪತಿ ಮತ್ತು 2014 ರ ಯುಎಸ್ ಓಪನ್‌ನಲ್ಲಿ ಬ್ರೆಜಿಲಿಯನ್ ಬ್ರೂನೋ ಸೋರೆಸ್ ಅವರೊಂದಿಗೆ ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದರು.

Sania Mirza: ವಿಂಬಲ್ಡನ್​ ಮಿಶ್ರ ಡಬಲ್ಸ್​ನಲ್ಲಿ ಸಾನಿಯಾ ಮಿರ್ಜಾ ಹೋರಾಟ ಅಂತ್ಯ
sania mirza
TV9kannada Web Team

| Edited By: Zahir PY

Jul 07, 2022 | 12:33 PM

ಲಂಡನ್​ನಲ್ಲಿ ನಡೆಯುತ್ತಿರುವ ವಿಂಬಲ್ಡನ್‌ (Wimbledon 2022) ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್​ನಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಅವರ ಹೋರಾಟ ಅಂತ್ಯಗೊಂಡಿದೆ. ಈ ಬಾರಿ ಕ್ರೊಯೇಷಿಯಾದ ಆರನೇ ಶ್ರೇಯಾಂಕದ ಮೇಟ್ ಪಾವಿಕ್ ಜೊತೆ ಕಣಕ್ಕಿಳಿದಿದ್ದ ಸಾನಿಯಾ ಹಾಲಿ ಚಾಂಪಿಯನ್‌ಗಳಾದ ನೀಲ್ ಸ್ಕುಪ್ಸ್ಕಿ ಮತ್ತು ಡೇಸಿರೇ ಕ್ರಾವ್‌ಜಿಕ್ ವಿರುದ್ಧ ವಿರುದ್ದ ಸೋಲನುಭವಿಸಿದರು. ಬುಧವಾರ ರಾತ್ರಿ ನಡೆದ ಸೆಮಿಫೈನಲ್​ ಪಂದ್ಯವು ಎರಡು ಗಂಟೆ 16 ನಿಮಿಷಗಳ ಕಾಲದ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಅದರಂತೆ ಮೊದಲ ಸೆಟ್​ನಲ್ಲಿ ಜಯ ಸಾಧಿಸಿದ ಸಾನಿಯಾ-ಪಾವಿಕ್ ಜೋಡಿ ವಿರುದ್ದ ಬ್ರಿಟನ್‌ನ ಸ್ಕುಪ್ಸ್ಕಿ ಮತ್ತು ಅಮೆರಿಕನ್ ಕ್ರಾವ್ಜಿಕ್ ವಿರುದ್ಧ 2ನೇ ಸೆಟ್​ನಲ್ಲಿ ಕಂಬ್ಯಾಕ್ ಮಾಡಿದರು. ಇದರ ಬೆನ್ನಲ್ಲೇ ಮೂರನೇ ಸೆಟ್​ ಅನ್ನು ಸಹ ಗೆಲ್ಲುವ ಮೂಲಕ 6-4 5-7 4-6 ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ಸ್ಕುಪ್ಸ್ಕಿ-ಕ್ರಾವ್ಜಿಕ್ ಜೋಡಿ ಫೈನಲ್ ಪ್ರವೇಶಿಸಿದ್ದಾರೆ.

35 ವರ್ಷದ ಮಿರ್ಜಾ ಹಿಂದೆ ಮೂರು ಮಿಶ್ರ ಡಬಲ್ಸ್ ಟ್ರೋಫಿಗಳನ್ನು ಒಳಗೊಂಡಂತೆ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದರು. ಈ ಬಾರಿ ಮಿಶ್ರ ಡಬಲ್ಸ್‌ನಲ್ಲಿ ಕೆರಿಯರ್ ಸ್ಲಾಮ್ ಪೂರ್ಣಗೊಳಿಸುವ ಗುರಿ ಹೊಂದಿದ್ದರು. ಆದರೆ ಸೆಮಿಫೈನಲ್​ನಲ್ಲಿ ಸೋಲುವ ಮೂಲಕ ಮತ್ತೊಮ್ಮೆ ಕಿರೀಟಕ್ಕೆ ಮುತ್ತಿಕ್ಕುವ ಅವಕಾಶವನ್ನು ತಪ್ಪಿಸಿಕೊಂಡಿದ್ದಾರೆ.

ಸಾನಿಯಾ ಮಿರ್ಜಾ 2009 ರ ಆಸ್ಟ್ರೇಲಿಯನ್ ಓಪನ್ ಮತ್ತು 2012 ರ ಫ್ರೆಂಚ್ ಓಪನ್‌ನಲ್ಲಿ ಮಹೇಶ್ ಭೂಪತಿ ಮತ್ತು 2014 ರ ಯುಎಸ್ ಓಪನ್‌ನಲ್ಲಿ ಬ್ರೆಜಿಲಿಯನ್ ಬ್ರೂನೋ ಸೋರೆಸ್ ಅವರೊಂದಿಗೆ ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದರು. ಈ ಬಾರಿ ಕೂಡ ಪಾವಿಕ್ ಜೊತೆಗೂಡಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದರು. ಆದರೆ 2ನೇ ಮತ್ತು 3ನೇ ಸೆಟ್​ಗಳಲ್ಲಿ ಎಡವಿ ಪಂದ್ಯವನ್ನು ಕೈಚೆಲ್ಲಿಕೊಂಡರು.

ವಿಶೇಷ ಎಂದರೆ ಇದು ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಸಾನಿಯಾ ಮಿರ್ಜಾ ಅವರ ಅತ್ಯುತ್ತಮ ಮಿಶ್ರ ಡಬಲ್ಸ್ ಪ್ರದರ್ಶನವಾಗಿದೆ. ಈ ಹಿಂದೆ 2011, 2013 ಮತ್ತು 2015ರಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಈ ಬಾರಿ ಸೆಮಿಫೈನಲ್​ಗೆ ಎಂಟ್ರಿ ಕೊಡುವ ಮೂಲಕ ಗಮನ ಸೆಳೆದಿದ್ದರು. ಅಲ್ಲದೆ ಮಿಶ್ರ ಡಬಲ್ಸ್​ನಲ್ಲಿ ಚೊಚ್ಚಲ ಬಾರಿ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಗುರಿಯಿಟ್ಟುಕೊಂಡಿದ್ದರು. ಆದರೆ ಸೆಮಿಫೈನಲ್​ನಲ್ಲಿ ಮುಗ್ಗರಿಸುವುದರೊಂದಿಗೆ ಆ ಕನಸು ಕೂಡ ಕಮರಿದೆ. ಅಂದಹಾಗೆ ಈ ಹಿಂದೆ ಸಾನಿಯಾ ವಿಂಬಲ್ಡನ್ ಮಹಿಳಾ ಡಬಲ್ಸ್​ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಮಾರ್ಟಿನಾ ಹಿಂಗಿಸ್ ಜೋಡಿಯೊಂದಿಗೆ 2015 ರಲ್ಲಿ ಸಾನಿಯಾ ಮಹಿಳಾ ಡಬಲ್ಸ್​ನಲ್ಲಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.

ಇದನ್ನೂ ಓದಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada