ಐಸಿಸಿ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ; ಕನ್ನಡತಿ ಶ್ರೇಯಾಂಕ ಪಾಟೀಲ್ ನಾಮನಿರ್ದೇಶನ

Shreyanka Patil: ಪ್ರತಿ ವರ್ಷದಂತೆ, ಹೊಸ ವರ್ಷ ಪ್ರಾರಂಭವಾಗುವ ಮೊದಲು ವರ್ಷದ ಅತ್ಯುತ್ತಮ ಕ್ರಿಕೆಟಿಗರನ್ನು ಐಸಿಸಿ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ. ಇದಕ್ಕಾಗಿ ಅನೇಕ ಸ್ಪರ್ಧಿಗಳ ಹೆಸರನ್ನು ವಿವಿಧ ವಿಭಾಗಗಳಲ್ಲಿ ಪ್ರಕಟಿಸಲಾಗುತ್ತದೆ. ಅದರಂತೆ ಈ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕನ್ನಡತಿ ಶ್ರೇಯಾಂಕ ಪಾಟೀಲ್ ಅವರ ಹೆಸರು ನಾಮನಿರ್ದೇಶನಗೊಂಡಿದೆ.

ಪೃಥ್ವಿಶಂಕರ
|

Updated on: Dec 28, 2024 | 9:59 PM

2024 ಮುಗಿಯುತ್ತಾ ಬಂದಿದೆ. ಇದರೊಂದಿಗೆ ಈ ವರ್ಷದ ಕ್ರಿಕೆಟ್ ಆಕ್ಷನ್ ಕೂಡ ಬಹುತೇಕ ಅಂತ್ಯಗೊಂಡಿದೆ. ಹೀಗಾಗಿ ಪ್ರತಿ ವರ್ಷದಂತೆ ಈ ಬಾರಿಯೂ ವಿವಿಧ ವಿಭಾಗಗಳಲ್ಲಿ ವರ್ಷದ ಅತ್ಯುತ್ತಮ ಆಟಗಾರರಿಗೆ ನೀಡಲಾಗುವ ಐಸಿಸಿ ಪ್ರಶಸ್ತಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಇದೀಗ ಐಸಿಸಿ ಮೊದಲ ವಿಭಾಗದಲ್ಲಿ ಸ್ಪರ್ಧಿಗಳ ಹೆಸರನ್ನು ಪ್ರಕಟಿಸಿದೆ.

1 / 7
ವರ್ಷದ ಉದಯೋನ್ಮುಖ ಆಟಗಾರ ಹಾಗೂ ಆಟಗಾರ್ತಿ ಪ್ರಶಸ್ತಿಗಾಗಿ ಐಸಿಸಿ ಶಾರ್ಟ್​ ಲಿಸ್ಟ್ ಬಿಡುಗಡೆ ಮಾಡಿದ್ದು, ಇದರಲ್ಲಿ ಟೀಂ ಇಂಡಿಯಾದಿಂದ ಏಕೈಕ ಪ್ಲೇಯರ್ ಮಾತ್ರ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಈ ಪಟ್ಟಿಯಲ್ಲಿರುವ ಪ್ಲೇಯರ್ ಒಬ್ಬ ಕನ್ನಡತಿ ಎಂಬುದು ಹೆಮ್ಮೆಯ ವಿಚಾರವಾಗಿದೆ.

2 / 7
ಹೌದು ಐಸಿಸಿ ಬಿಡುಗಡೆ ಮಾಡಿರುವ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಯ ಶಾರ್ಟ್​ ಲಿಸ್ಟ್​ನಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್ ಅವರು ಹೆಸರು ಸೇರಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶ್ರೇಯಾಂಕಾಗೆ ಈ ವರ್ಷ ಉತ್ತಮವಾಗಿತ್ತು.

3 / 7
ಟೀಂ ಇಂಡಿಯಾ ಪರ ಇದುವರೆಗೆ 13 ಟಿ20 ಪಂದ್ಯಗಳನ್ನಾಡಿರುವ ಶ್ರೇಯಾಂಕ 15 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರ ಜೊತೆಗೆ 2 ಏಕದಿನ ಪಂದ್ಯಗಳನ್ನೂ ಆಡಿರುವ ಶ್ರೇಯಾಂಕ 4 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಈ ವರ್ಷ ಆಡಿದ 15 ಪಂದ್ಯಗಳಲ್ಲಿ ಶ್ರೇಯಾಂಕ ಕೇವಲ 2 ಪಂದ್ಯಗಳಲ್ಲಿ ಮಾತ್ರ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಉಳಿದಂತೆ ಎಲ್ಲಾ ಪಂದ್ಯಗಳು ಶ್ರೇಯಾಂಕಗೆ ವಿಕೆಟ್​ ಸಿಕ್ಕಿದೆ.

4 / 7
ಇನ್ನು ಈ ಪ್ರಶಸ್ತಿಗಾಗಿ ಶ್ರೇಯಾಂಕ ಪಾಟೀಲ್​ರನ್ನು ಹೊರತುಪಡಿಸಿ ಐರ್ಲೆಂಡ್‌ನ ಫ್ರೇಯಾ ಸಾರ್ಜೆಂಟ್, ದಕ್ಷಿಣ ಆಫ್ರಿಕಾದ ಅನ್ನೇರಿ ಡೆರ್ಕ್ಸೆನ್ ಮತ್ತು ಸ್ಕಾಟ್ಲೆಂಡ್‌ನ ಸಾಸ್ಕಿಯಾ ಹಾರ್ಲೆ ಕೂಡ ಸ್ಪರ್ಧಿಗಳಾಗಿದ್ದಾರೆ.

5 / 7
ಮಹಿಳಾ ಆಟಗಾರ್ತಿಯರಲ್ಲಿ ಶ್ರೇಯಾಂಕರನ್ನು ಹೊರತುಪಡಿಸಿ ಭಾರತದ ಪುರುಷರ ತಂಡದಿಂದ ಯಾರೊಬ್ಬರು ಆಯ್ಕೆಯಾಗಿಲ್ಲ. ವಾಸ್ತವವಾಗಿ ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಯಶಸ್ವಿ ಜೈಸ್ವಾಲ್ ಅಥವಾ ಅಭಿಷೇಕ್ ಶರ್ಮಾ ಆಯ್ಕೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು ಆದರೆ ಅದು ಆಗಲಿಲ್ಲ. ಕಳೆದ ವರ್ಷ ಜೈಸ್ವಾಲ್ ಶಾರ್ಟ್ ಲಿಸ್ಟ್​ನಲ್ಲಿದ್ದರೂ ಆಗ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ.

6 / 7
ಇನ್ನು ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಶಾರ್ಟ್​ ಲಿಸ್ಟ್ ಆಗಿರುವ ಆಟಗಾರರಲ್ಲಿ ಪಾಕಿಸ್ತಾನದ ಯುವ ಆರಂಭಿಕ ಆಟಗಾರ ಸೈಮ್ ಅಯೂಬ್, ಶ್ರೀಲಂಕಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕಮಿಂದು ಮೆಂಡಿಸ್, ವೆಸ್ಟ್ ಇಂಡೀಸ್‌ನ ಯುವ ವೇಗದ ಬೌಲರ್ ಶಮರ್ ಜೋಸೆಫ್ ಹಾಗೂ ಇಂಗ್ಲೆಂಡ್ ವೇಗಿ ಗಸ್ ಅಟ್ಕಿನ್ಸನ್ ಸೇರಿದ್ದಾರೆ.

7 / 7
Follow us