Super Sunday: ಕ್ರೀಡಾಲೋಕದಲ್ಲಿ ಈ ದಿನ ಅಚ್ಚಾಗಿ ಉಳಿಯಲಿದೆ

ಪ್ರೀಮಿಯರ್ ಲೀಗ್​ನ ಬಲಿಷ್ಠ ತಂಡಗಳಾದ ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಲಿವರ್‌ಪೂಲ್ ಭಾನುವಾರ ಪರಸ್ಪರ ಮುಖಾಮುಖಿಯಾಗಲಿವೆ.

Super Sunday: ಕ್ರೀಡಾಲೋಕದಲ್ಲಿ ಈ ದಿನ ಅಚ್ಚಾಗಿ ಉಳಿಯಲಿದೆ
Super Sunday

ಕ್ರೀಡಾಲೋಕದಲ್ಲಿ ಇಂದು ಸೂಪರ್ ಸಂಡೆ…ಇದಕ್ಕೆ ಕಾರಣ ಭಾರತ-ಪಾಕಿಸ್ತಾನ್ ಮ್ಯಾಚ್ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಕ್ರಿಕೆಟ್ ಕ್ರೇಜ್ ಇರೋದು ಏಷ್ಯಾ ದೇಶಗಳಲ್ಲಿ. ಆದರೆ ಅತ್ತ ಯುರೋಪ್​ ದೇಶಗಳಲ್ಲಿ ಭಾನುವಾರ ಫುಟ್​ಬಾಲ್ ಕಾವೇರಿದೆ. ಹೌದು, ಒಂದೆಡೆ ಕ್ರಿಕೆಟ್ ಕ್ರೇಜ್​ ಇದ್ದರೆ ಮತ್ತೊಂದೆಡೆ ಫುಟ್​ಬಾಲ್ ಅಂಗಳ ರಂಗೇರಲು ಸಜ್ಜಾಗಿದೆ. ಇನ್ನೊಂದೆಡೆ ಬೇಸ್​ ಬಾಲ್​ ಹವಾ ಶುರುವಾಗಿದೆ. ಅದರಂತೆ ಕ್ರೀಡಾ ಲೋಕದಲ್ಲಿ ಭಾನುವಾರ 10 ಪ್ರಮುಖ ಪಂದ್ಯಗಳು ನಡೆಯುತ್ತಿರುವುದು ವಿಶೇಷ.

ICC ಪುರುಷರ T20 ವಿಶ್ವಕಪ್, ಪ್ರೀಮಿಯರ್ ಲೀಗ್, ಸೀರಿ A, Ligue 1, ಮೇಜರ್ ಲೀಗ್ ಬೇಸ್‌ಬಾಲ್ (MLB), ಮತ್ತು ನ್ಯಾಷನಲ್ ಫುಟ್‌ಬಾಲ್ ಲೀಗ್ (NFL) ನಂತಹ ಪ್ರಮುಖ ಪಂದ್ಯಾವಳಿಗಳು ಒಂದೇ ದಿನ ನಡೆಯುತ್ತಿದೆ.  ಈ ಪಂದ್ಯಾವಳಿಗಳಲ್ಲಿ ಬದ್ದ ವೈರಿಗಳೇ ಮುಖಾಮುಖಿಯಾಗುತ್ತಿರುವುದು ಮತ್ತೊಂದು ವಿಶೇಷ. ಹಾಗಿದ್ರೆ ಯಾವೆಲ್ಲಾ ಪಂದ್ಯಗಳು ನಡೆಯಲಿದೆ ನೋಡೋಣ.

ಐಸಿಸಿ ಟಿ20 ವಿಶ್ವಕಪ್​: ಟಿ20 ವಿಶ್ವಕಪ್​ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗುತ್ತಿದೆ. ಈ ಪಂದ್ಯವು ವಿರಾಟ್ ಕೊಹ್ಲಿ ಹಾಗೂ ಬಾಬರ್ ಆಜಂ ನಡುವಣ ಪ್ರತಿಷ್ಠಿತ ಕದನವಾಗಿ ಮಾರ್ಪಟ್ಟಿದೆ.

ಪ್ರೀಮಿಯರ್ ಲೀಗ್: ಪ್ರೀಮಿಯರ್ ಲೀಗ್​ನ ಬಲಿಷ್ಠ ತಂಡಗಳಾದ ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಲಿವರ್‌ಪೂಲ್ ಭಾನುವಾರ ಪರಸ್ಪರ ಮುಖಾಮುಖಿಯಾಗಲಿವೆ. ಲಿವರ್‌ಪೂಲ್ ಪ್ರಸ್ತುತ ಪ್ರೀಮಿಯರ್ ಲೀಗ್ 2021-22 ಅಂಕಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಈ ಪಂದ್ಯವು ಮ್ಯಾಜೆಂಸ್ಟರ್​ ಯುನೈಟೆಡ್​ನ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿವರ್​ಪೂಲ್​ನ ಮೊಹಮದ್ ಸಲಾಹ್ ನಡುವಿನ ಜಿದ್ದಾಜಿದ್ದಿನ ಹೋರಾಟವಾಗಲಿದೆ.

ಲಾ ಲೀಗಾ: ಸ್ಪೇನ್​ನ ಲಾ ಲಿಗಾದಲ್ಲಿ ಬಾರ್ಸಿಲೋನಾ ಮತ್ತು ರಿಯಲ್ ಮ್ಯಾಡ್ರಿಡ್ ಭಾನುವಾರ ಮುಖಾಮುಖಿಯಾಗಲಿವೆ. ಈ “ಲೆ ಕ್ಲಾಸಿಕ್” ಎನ್ನಲಾಗುವ ಈ ಪಂದ್ಯದಲ್ಲಿ ಬಾರ್ಸಿಲೋನಾದ ಗೆರಾರ್ಡ್ ಪಿಕ್ ಹಾಗೂ ಮ್ಯಾಡ್ರಿಡ್​ನ ಕರೀಮ್ ಬೆಂಝಿಮಾ ನಡುವಣ ಕದನ ಕುತೂಹಲವಾಗಿ ಮಾರ್ಪಟ್ಟಿದೆ.

ಸೀರಿ ಎ: ಇಟಲಿಯ ಪ್ರತಿಷ್ಠಿತ ಫುಟ್​ಬಾಲ್​ ಕ್ಲಬ್​ಗಳಾದ ಯುವೆಂಟಸ್ ಮತ್ತು ಇಂಟರ್ ಮಿಲನ್ ಕೂಡ ಭಾನುವಾರವೇ ಮುಖಾಮುಖಾಗುತ್ತಿದೆ. ಇನ್ನೊಂದೆಡೆ ನಾಪೋಲಿ ಮತ್ತು ರೋಮನ್ ತಂಡಗಳು ಕೂಡ ಇಂದು ಸೆಣಸಾಡಲಿದೆ.

ಲೀಗ್ 1: ಪ್ಯಾರಿಸ್ ಸೇಂಟ್ ಜರ್ಮೈನ್ vs ಮಾರ್ಸಿಲ್ಲೆ ಇಂದು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಪರ ಲಿಯೋನೆಲ್ ಮೆಸ್ಸಿ ಹಾಗೂ ನೇಮರ್ ಆಡುಲಿದ್ದಾರೆ. ಹೀಗಾಗಿಯೇ ಈ ಪಂದ್ಯವನ್ನೂ ಕೂಡ ಫುಟ್​ಬಾಲ್ ಪ್ರೇಮಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

ಇದಲ್ಲದೆ ಫಾರ್ಮುಲಾ ಒನ್, ಯುನೈಟೆಡ್ ಸ್ಟೇಟ್ಸ್ ಗ್ರ್ಯಾಂಡ್ ಪ್ರಿಕ್ಸ್ ಮತ್ತು MotoGP ಯ ಎಮಿಲಿಯಾ ರೊಮ್ಯಾಗ್ನಾ ಗ್ರ್ಯಾಂಡ್ ಪ್ರಿಕ್ಸ್ ಫಾರ್ಮುಲಾ ಒನ್ 2021 ಕೂಡ ಭಾನುವಾರ ನಡೆಯಲಿದೆ.

ಇನ್ನು ಬೇಸ್​ಬಾಲ್ ನ್ಯಾಷನಲ್ ಲೀಗ್ ಚಾಂಪಿಯನ್‌ಶಿಪ್ ಸರಣಿಯ (NLCS) 6 ನೇ ಪಂದ್ಯದಲ್ಲಿ ಅಟ್ಲಾಂಟಾ ಬ್ರೇವ್ಸ್ ಮತ್ತು ಲಾಸ್ ಏಂಜಲೀಸ್ ಡಾಡ್ಜರ್ಸ್ ನಡುವೆ ಕಾದಾಟ ನಡೆಯಲಿದೆ. ಇದರ ಜೊತೆಗೆ ಅಮೆರಿಕಾದಲ್ಲಿ ನ್ಯಾಷನಲ್​ ಫುಟ್​ಬಾಲ್ ಲೀಗ್ (NFL) ಕೂಡ ಇಂದಿನಿಂದ ಶುರುವಾಗುತ್ತಿದೆ. ಒಟ್ಟಿನಲ್ಲಿ ಕ್ರೀಡಾಲೋಕದಲ್ಲಿ ಈ ಭಾನುವಾರ ಸೂಪರ್ ಸಂಡೆಯಾಗಿ ಮಾರ್ಪಟ್ಟಿದ್ದು, ಕ್ರೀಡಾ ಪ್ರೇಮಿಗಳು ಈ ದಿನವನ್ನು ಸದಾಕಾಲ ನೆನಪಿಟ್ಟುಕೊಳ್ಳಲಿದ್ದಾರೆ.

ಇದನ್ನೂ ಓದಿ: India vs Pakistan: 2007ರ ಟಿ20 ವಿಶ್ವಕಪ್ ಫೈನಲ್ ಆಡಿದ್ದ ಇಬ್ಬರು ಆಟಗಾರರ ಮುಖಾಮುಖಿ

ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(Super Sunday: Major cricket, football matches on October 24)

 

 

 

 

Click on your DTH Provider to Add TV9 Kannada