Syed Modi Tournament: ಪಿವಿ ಸಿಂಧು- ಮಾಳವಿಕಾ ನಡುವೆ ಟೈಟಲ್ ಕದನ; ಪುರುಷರ ವಿಭಾಗದಲ್ಲಿ ಭಾರತದ ಸವಾಲು ಅಂತ್ಯ

Syed Modi Tournament: ಪಿವಿ ಸಿಂಧು- ಮಾಳವಿಕಾ ನಡುವೆ ಟೈಟಲ್ ಕದನ; ಪುರುಷರ ವಿಭಾಗದಲ್ಲಿ ಭಾರತದ ಸವಾಲು ಅಂತ್ಯ
ಪಿವಿ ಸಿಂಧು

Syed Modi Tournament: ಬಿಡಬ್ಲ್ಯುಎಫ್ ಸೂಪರ್ 350 ಸೈಯದ್ ಮೋದಿ ಇಂಟರ್‌ನ್ಯಾಶನಲ್ ಟೂರ್ನಮೆಂಟ್‌ನಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಫೈನಲ್‌ಗೆ ಸ್ಥಾನವನ್ನು ಖಚಿತಪಡಿಸಿದ್ದಾರೆ. ಮತ್ತೊಂದೆಡೆ ಮಾಳವಿಕಾ ಬನ್ಸೋಡ್ ಕೂಡ ಮುಂದಿನ ಸುತ್ತಿಗೆ ತಲುಪಿದ್ದಾರೆ.

TV9kannada Web Team

| Edited By: pruthvi Shankar

Jan 22, 2022 | 8:05 PM

ಬಿಡಬ್ಲ್ಯುಎಫ್ ಸೂಪರ್ 350 ಸೈಯದ್ ಮೋದಿ ಇಂಟರ್‌ನ್ಯಾಶನಲ್ ಟೂರ್ನಮೆಂಟ್‌ನಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಫೈನಲ್‌ಗೆ ಸ್ಥಾನವನ್ನು ಖಚಿತಪಡಿಸಿದ್ದಾರೆ. ಮತ್ತೊಂದೆಡೆ ಮಾಳವಿಕಾ ಬನ್ಸೋಡ್ ಕೂಡ ಮುಂದಿನ ಸುತ್ತಿಗೆ ತಲುಪಿದ್ದಾರೆ. ಈಗ ಈ ಇಬ್ಬರು ತಾರೆಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಇಂಡಿಯಾ ಓಪನ್‌ನಲ್ಲಿ ಮಾಳವಿಕಾ ಅವರು ಸೈನಾ ನೆಹ್ವಾಲ್ ಅವರನ್ನು ಸೋಲಿಸಿದರು. ಇದಕ್ಕೂ ಮುನ್ನ ಅಗ್ರ ಶ್ರೇಯಾಂಕದ ಪಿವಿ ಸಿಂಧು ಒಂದು ಗಂಟೆ ಐದು ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್‌ನ ಆರನೇ ಶ್ರೇಯಾಂಕದ ಪ್ರತಿಸ್ಪರ್ಧಿಯನ್ನು 11-21 21-12 21-17 ರಿಂದ ಸೋಲಿಸಿದರು. ಮತ್ತೊಂದೆಡೆ, ಮಾಳವಿಕಾ ಅಲ್ಲಿಯೂ 21-11 21-11 ರಲ್ಲಿ ದೇಶದವರೇ ಆದ ಆಕರ್ಷಿ ಕಶ್ಯಪ್ ಅವರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು.

ಪಿವಿ ಸಿಂಧು ಎದುರಾಳಿಗೆ ಗಾಯ ಪಿವಿ ಸಿಂಧು ಮತ್ತು ಆಸಾಮಿ ನಡುವಿನ ಪಂದ್ಯ ಕೇವಲ 14 ನಿಮಿಷಗಳ ಕಾಲ ನಡೆಯಿತು. ಇದಾದ ನಂತರ ಆಸಾಮಿ ಗಾಯದಿಂದ ಹಿಂದೆ ಸರಿಯಲು ನಿರ್ಧರಿಸಿದ ಕಾರಣ ಸಿಂಧು ಫೈನಲ್‌ಗೆ ನೇರ ಪ್ರವೇಶ ಪಡೆದರು. ಮತ್ತೊಂದೆಡೆ ಒಂದು ಗಂಟೆ 06 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮಾಳವಿಕಾ 19-21, 2119, 21-7ರಲ್ಲಿ ಅನುಪಮಾ ಉಪಾಧ್ಯಾಯ ಅವರನ್ನು ಸೋಲಿಸಿ ಅಂತಿಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಸಿಂಧು ಅವರ ಲಯ, ವಿಶ್ವ ಶ್ರೇಯಾಂಕ ಮತ್ತು ಎದುರಾಳಿ ವಿರುದ್ಧದ ಗೆಲುವಿನ ದಾಖಲೆಯನ್ನು ಪರಿಗಣಿಸಿ ಈ ಪಂದ್ಯವು ಸುಲಭವಾಗಿದೆ ಎಂದು ನಿರೀಕ್ಷಿಸಲಾಗಿತ್ತು. ಬಿಡಬ್ಲ್ಯುಎಫ್ ಶ್ರೇಯಾಂಕದಲ್ಲಿ ಏಳನೇ ಶ್ರೇಯಾಂಕದ ಸಿಂಧು, ಶನಿವಾರದ ಪಂದ್ಯಕ್ಕೆ ಮೊದಲು ಎರಡು ಬಾರಿ ವಿಶ್ವದ 28 ನೇ ಶ್ರೇಯಾಂಕದ ಕೊಸೆಟ್ಸ್‌ಕಾಯಾ ಅವರನ್ನು ಸೋಲಿಸಿದ್ದರು ಮತ್ತು ಅಗ್ರ ಭಾರತೀಯ ಆಟಗಾರ್ತಿ ವಿರುದ್ಧ ಮತ್ತೆ ತಮ್ಮ ಪ್ರಾಬಲ್ಯ ದಾಖಲೆಯನ್ನು ಉಳಿಸಿಕೊಂಡರು.

ಪ್ರಣಯ್ ಸೋಲಿನ ಸುಳಿಗೆ ಆದಾಗ್ಯೂ, ಪುರುಷರ ಸಿಂಗಲ್ಸ್‌ನಲ್ಲಿ, ಎಚ್‌ಎಸ್ ಪ್ರಣಯ್ ಕ್ವಾರ್ಟರ್‌ಫೈನಲ್‌ನಲ್ಲಿ ಫ್ರಾನ್ಸ್‌ನ ಅರ್ನಾಡ್ ಮರ್ಕೆಲ್ ವಿರುದ್ಧ ನೇರ ಗೇಮ್‌ಗಳಲ್ಲಿ ಸೋತ ನಂತರ ಪಂದ್ಯಾವಳಿಯಿಂದ ಹೊರಬಿದ್ದರು. ಐದನೇ ಶ್ರೇಯಾಂಕದ ಭಾರತೀಯ ಪ್ರಣಯ್ ಅವರು 59 ನಿಮಿಷಗಳ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತಮ್ಮ ಫ್ರೆಂಚ್ ಪ್ರತಿಸ್ಪರ್ಧಿ ವಿರುದ್ಧ 19-21 16-21 ಅಂತರದಿಂದ ಸೋತರು. ಆದರೆ ಮಿಥುನ್ ಮಂಜುನಾಥ್ ಕ್ವಾರ್ಟರ್ ಫೈನಲ್ ನಲ್ಲಿ ರಷ್ಯಾದ ಸರ್ಗೆ ಸಿರಾಂತ್ ಅವರನ್ನು 11-21 21-12 21-18 ಸೆಟ್ ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿದರು. ಏಳನೇ ಶ್ರೇಯಾಂಕದ ಭಾರತದ ಜೋಡಿ ತ್ರಿಶಾ ಜಾಲಿ ಮತ್ತು ಗಾಯತ್ರಿ ಪುಲ್ಲೇಲ ಗೋಪಿಚಂದ್ ಅವರು ಮತ್ತೊಂದು ಮಹಿಳಾ ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ರಷ್ಯಾದ ಜೋಡಿ ಅನಸ್ತಾಸಿಯಾ ಅಕ್ಚುರಿನಾ ಮತ್ತು ಓಲ್ಗಾ ಮೊರೊಜೊವಾ ಅವರನ್ನು 24-22 21-10 ರಿಂದ ಸೋಲಿಸಿದರು.

Follow us on

Related Stories

Most Read Stories

Click on your DTH Provider to Add TV9 Kannada