T. Natrajan IPL 2021 SRH Team Player: ಯಾರ್ಕರ್​ ಕಿಂಗ್ ನಟರಾಜನ್​ ಹೈದರಾಬಾದ್​ ತಂಡದ ಡೆತ್​ ಓವರ್ ಸ್ಪೆಷಲಿಸ್ಟ್​!

pruthvi Shankar

pruthvi Shankar | Edited By: Ayesha Banu

Updated on: Apr 11, 2021 | 9:46 AM

T. Natrajan profile: 2017 ಮತ್ತು 2020 ರಲ್ಲಿ ಐಪಿಎಲ್ ಆವೃತ್ತಿಗಳಲ್ಲಿ ಆಡಿದ ನಟರಾಜನ್ 22 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ಐಪಿಎಲ್ 2020 ರ ಯಶಸ್ಸು ಟಿ.ನಟರಾಜನ್ ಅವರನ್ನು ಉದಯೋನ್ಮುಖ ತಾರೆಯನ್ನಾಗಿ ಮಾಡಿದೆ.

T. Natrajan IPL 2021 SRH Team Player: ಯಾರ್ಕರ್​ ಕಿಂಗ್ ನಟರಾಜನ್​ ಹೈದರಾಬಾದ್​ ತಂಡದ ಡೆತ್​ ಓವರ್ ಸ್ಪೆಷಲಿಸ್ಟ್​!
ಟಿ.ನಟರಾಜನ್


ಅನೇಕ ಆಟಗಾರರು ಐಪಿಎಲ್ ಮೂಲಕ ಮಿಂಚಿದ್ದಾರೆ. ಈ ಟಿ 20 ಲೀಗ್ ಟೀಮ್ ಇಂಡಿಯಾಕ್ಕೆ ಅನೇಕ ಸ್ಟಾರ್ ಆಟಗಾರರನ್ನ ನೀಡಿದೆ. ಆದರೆ, ಟಿ.ನಟರಾಜನ್ ಇಷ್ಟು ವೇಗದಲ್ಲಿ ಮಾಡಿದಷ್ಟು ಹೆಸರು ಮತ್ತು ಯಶಸ್ಸನ್ನು ಬೇರೆ ಯಾರಿಗೂ ಸಿಕ್ಕಿಲ್ಲ. ಟೀಮ್ ಇಂಡಿಯಾ ಪರ ಕ್ರಿಕೆಟ್​ನ ಎಲ್ಲಾ ಮೂರು ಸ್ವರೂಪಗಳಲ್ಲಿ ನಟರಾಜನ್ ಪಾದಾರ್ಪಣೆ ಮಾಡಿದ್ದಾರೆ. ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ, ಅವರು ಮೂರು ಆವೃತ್ತಿಗಳಿಗೆ ಒಂದೇ ಪ್ರವಾಸದಲ್ಲಿ ಪಾದಾರ್ಪಣೆ ಮಾಡಿದರು ಮತ್ತು ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಿ.ನಟರಾಜನ್ ಪಡೆದ ಯಶಸ್ಸು ಸಂಪೂರ್ಣವಾಗಿ ಐಪಿಎಲ್‌ನ ಫಲಿತಾಂಶವಾಗಿದೆ.

ನಟರಾಜನ್ ಅವರ ಪ್ರತಿಭೆ ಎಂದರೆ ಅವರು ಎಡಗೈ ವೇಗದ ಬೌಲರ್ ಮತ್ತು ಅವರು 6 ಕ್ಕೂ ಹೆಚ್ಚು ಯಾರ್ಕರ್‌ಗಳ 6 ಎಸೆತಗಳನ್ನು ಬೌಲ್ ಮಾಡುವ ಸಾಮಥ್ರ್ಯ ಹೊಂದಿದ್ದಾರೆ. ಟೀಮ್ ಇಂಡಿಯಾ ಬಯಸಿದ್ದು ಇದನ್ನೇ. ಭಾರತಕ್ಕೆ ಎಡಗೈ ವೇಗದ ಬೌಲರ್ ಕೊರತೆ ಇತ್ತು. ಹೀಗಾಗಿ ಎಡಗೈ ವೇಗದ ಬೌಲರ್ ನಟರಾಜನ್ ಇಷ್ಟು ಬೇಗ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲುಡಲು ಇದೇ ಕಾರಣ.

ತಾಜಾ ಸುದ್ದಿ

ಐಪಿಎಲ್‌ನಲ್ಲಿ ತಂಡ ಬದಲಾದಂತೆ ಅದೃಷ್ಟ ಬದಲಾಗಿದೆ
ಟಿ.ನಟರಾಜನ್ ಐಪಿಎಲ್‌ಗೆ ಪ್ರವೇಶಿಸಿದ್ದು ಕಿಂಗ್ಸ್ ಇಲೆವೆನ್ ಪಂಜಾಬ್ ಮೂಲಕ, 2017 ರಲ್ಲಿ 3 ಕೋಟಿ ಬಿಡ್‌ನೊಂದಿಗೆ ನಟರಾಜನ್ ಪಂಜಾಬ್​ ಪರ ಆಡಿದ್ದರು. ಈ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪರ ಆಡಿದ 6 ಪಂದ್ಯಗಳಲ್ಲಿ ನಟರಾಜನ್ ಕೇವಲ 2 ವಿಕೆಟ್ ಪಡೆದರು. ನಟರಾಜನ್ 2018 ರ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಸೇರಿದರು. ಆದಾಗ್ಯೂ, ಐಪಿಎಲ್ 2020 ರಲ್ಲಿ ಆರೆಂಜ್ ಆರ್ಮಿ ಆಡುವ ಇಲೆವೆನ್‌ನಲ್ಲಿ ಅವರು ಪ್ರಥಮ ಸ್ಥಾನ ಪಡೆದರು. ಎಡಗೈ ವೇಗದ ಬೌಲರ್, ತನ್ನ ಯಾರ್ಕರ್​ನಿಂದಾಗಿ 16 ಪಂದ್ಯಗಳಲ್ಲಿ 16 ವಿಕೆಟ್ ಪಡೆದರು

22 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ
2017 ಮತ್ತು 2020 ರಲ್ಲಿ ಐಪಿಎಲ್ ಆವೃತ್ತಿಗಳಲ್ಲಿ ಆಡಿದ ನಟರಾಜನ್ 22 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ಐಪಿಎಲ್ 2020 ರ ಯಶಸ್ಸು ಟಿ.ನಟರಾಜನ್ ಅವರನ್ನು ಉದಯೋನ್ಮುಖ ತಾರೆಯನ್ನಾಗಿ ಮಾಡಿದೆ. ಈಗ ಅದನ್ನು ಹಾಗೇ ಉಳಿಸಿಕೊಳ್ಳುವ ಅವಶ್ಯಕತೆಯಿದೆ. ಐಪಿಎಲ್ 2021 ರಲ್ಲಿ, ಅವರು ಈ ಭರವಸೆಯೊಂದಿಗೆ ಕಣಕ್ಕಿಳಿಯಲ್ಲಿದ್ದಾರೆ.

ಇದನ್ನೂ ಓದಿ: Rashid Khan IPL 2021 SRH Team Player: ಗೂಗ್ಲಿ ಮಾಸ್ಟರ್​ ರಶೀದ್​ ಖಾನ್​ ಐಪಿಎಲ್​ನ ಬಹುಬೇಡಿಕೆಯ ಆಟಗಾರ

(T. Natrajan ipl 2021 SRH team player profile stats icc ranking photos videos indian cricket players latest news in kannada)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada