WPL 2026: ಡಬ್ಲ್ಯುಪಿಎಲ್​​ಗೆ ವೇದಿಕೆ ಸಜ್ಜು; ಎಲ್ಲಾ 5 ತಂಡಗಳು, ವೇಳಾಪಟ್ಟಿ, ನಿಯಮಗಳ ಪೂರ್ಣ ವಿವರ ಇಲ್ಲಿದೆ

Women's Premier League 2026: ಮಹಿಳಾ ಪ್ರೀಮಿಯರ್ ಲೀಗ್‌ನ ನಾಲ್ಕನೇ ಸೀಸನ್ ಜನವರಿ 9 ರಿಂದ ನವಿ ಮುಂಬೈನಲ್ಲಿ ಪ್ರಾರಂಭವಾಗಲಿದೆ. ಈ ಬಾರಿ ಲೀಗ್ ಜನವರಿ-ಫೆಬ್ರವರಿಯಲ್ಲಿ ನಡೆಯುತ್ತಿದ್ದು, 22 ಪಂದ್ಯಗಳು ನವಿ ಮುಂಬೈ ಮತ್ತು ವಡೋದರಾದಲ್ಲಿ ನಡೆಯಲಿವೆ. ಹೊಸ ನಾಯಕಿಯರು, ಆಟಗಾರರ ಬದಲಾವಣೆ ಮತ್ತು ಸ್ಟಾರ್ ಸ್ಪೋರ್ಟ್ಸ್, ಜಿಯೋಸಿನಿಮಾದಲ್ಲಿ ಲೈವ್ ವೀಕ್ಷಣೆ ಮುಂತಾದ ಪ್ರಮುಖ ಮಾಹಿತಿಗಳು ಲಭ್ಯವಿವೆ. ವಿಜೇತ ತಂಡಕ್ಕೆ 6 ಕೋಟಿ ರೂ. ಬಹುಮಾನವಿದೆ.

WPL 2026: ಡಬ್ಲ್ಯುಪಿಎಲ್​​ಗೆ ವೇದಿಕೆ ಸಜ್ಜು; ಎಲ್ಲಾ 5 ತಂಡಗಳು, ವೇಳಾಪಟ್ಟಿ, ನಿಯಮಗಳ ಪೂರ್ಣ ವಿವರ ಇಲ್ಲಿದೆ
Wpl 2026

Updated on: Jan 08, 2026 | 7:27 PM

ಮಹಿಳಾ ಪ್ರೀಮಿಯರ್ ಲೀಗ್​ನ (Women’s Premier League 2026) ನಾಲ್ಕನೇ ಸೀಸನ್ ನಾಳೆಯಿಂದ ಅಂದರೆ ಜನವರಿ 9 ರಿಂದ ಪ್ರಾರಂಭವಾಗುತ್ತಿದೆ. ಮೆಗಾ ಹರಾಜಿನ ನಂತರ ಎಲ್ಲಾ ತಂಡಗಳು ಪ್ರಮುಖ ಬದಲಾವಣೆಗಳಾಗಿದ್ದು ಕೆಲವು ತಂಡಗಳು ಹೊಸ ನಾಯಕಿಯರನ್ನು ನೇಮಿಸಿವೆ. ಇದರೊಂದಿಗೆ ಈ ಸೀಸನ್ ಹಲವು ವಿಧಗಳಲ್ಲಿ ವಿಶೇಷವಾಗಿದ್ದು, ಅದರಲ್ಲಿ ಪ್ರಮುಖವಾಗಿ ಇದೇ ಮೊದಲ ಬಾರಿಗೆ ಜನವರಿ-ಫೆಬ್ರವರಿಯಲ್ಲಿ ನಡೆಯುತ್ತಿದೆ. ಲೀಗ್​ನ ಮೊದಲ ಪಂದ್ಯ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ತಂಡವನ್ನು ಎದುರಿಸಲಿದೆ.

ಈ ಸೀಸನ್‌ನಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿದ್ದು, ಮೊದಲ 11 ಪಂದ್ಯಗಳು ನವಿ ಮುಂಬೈನಲ್ಲಿ ಮತ್ತು ಎಲಿಮಿನೇಟರ್ ಮತ್ತು ಫೈನಲ್ ಸೇರಿದಂತೆ ಉಳಿದ 11 ಪಂದ್ಯಗಳು ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಫೆಬ್ರವರಿ 5 ರಂದು ವಡೋದರಾದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿ, ಜನವರಿ 10 ಮತ್ತು 17 ರಂದು ನವಿ ಮುಂಬೈನಲ್ಲಿ ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ.

ಎರಡು ನಗರಗಳಲ್ಲಿ ಪಂದ್ಯಾವಳಿ

ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ ಕೇವಲ ಎರಡು ನಗರಗಳಲ್ಲಿ ಮಾತ್ರ ನಡೆಯಲಿದೆ. ಏಕೆಂದರೆ ಉಳಿದ ಕ್ರೀಡಾಂಗಣಗಳು ಟಿ20 ವಿಶ್ವಕಪ್ ಮತ್ತು ರಣಜಿ ಟ್ರೋಫಿಯಂತಹ ಪಂದ್ಯಾವಳಿಗಳಿಗಾಗಿ ಕಾಯ್ದಿರಿಸಲ್ಪಟ್ಟಿವೆ.

ಈ ತಂಡಗಳ ನಾಯಕಿಯರ ಬದಲಾವಣೆ

ಮೇಲೆ ಹೇಳಿದಂತೆ ಈ ಆವೃತ್ತಿಯಲ್ಲಿ ತಂಡಗಳಲ್ಲಿ ಹಲವಾರು ಬದಲಾವಣೆಗಳನ್ನು ನೋಡಲಾಗಿದೆ. ಜೆಮಿಮಾ ರೊಡ್ರಿಗಸ್ ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿಯಾಗಿದ್ದಾರೆ. ಏತನ್ಮಧ್ಯೆ, ಮೆಗ್ ಲ್ಯಾನಿಂಗ್ ಅವರನ್ನು ಯುಪಿ ವಾರಿಯರ್ಸ್ ತಂಡದ ನಾಯಕಿಯಾಗಿ ನೇಮಿಸಲಾಗಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಯತ್ನಿಸಲಿದೆ. ಏತನ್ಮಧ್ಯೆ, ಎಲಿಸ್ ಪೆರ್ರಿ ಮತ್ತು ಅನ್ನಾಬೆಲ್ ಸದರ್ಲ್ಯಾಂಡ್‌ರಂತಹ ಸ್ಟಾರ್ ಆಟಗಾರ್ತಿಯರು ವೈಯಕ್ತಿಕ ಕಾರಣಗಳಿಂದಾಗಿ ಈ ಋತುವಿನಿಂದ ಹೊರಗುಳಿದಿದ್ದಾರೆ. ಇದರೊಂದಿಗೆ ಇತ್ತೀಚಿನ ಡಬ್ಲ್ಯೂಬಿಬಿಎಲ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ನ ಲಿಜೆಲ್ಲೆ ಲೀ, ಮುಂಬೈ ತಂಡದಲ್ಲಿರುವ ಮಿಲ್ಲಿ ಇಲಿಂಗ್‌ವರ್ತ್ ಮತ್ತು 16 ವರ್ಷದ ಅನ್‌ಕ್ಯಾಪ್ಡ್ ಬ್ಯಾಟರ್ ದಿಯಾ ಯಾದವ್ ಸೇರಿದಂತೆ ಕೆಲವು ಹೊಸ ಆಟಗಾರ್ತಿಯರು ಈ ಲೀಗ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲೀಗ್​ನ ಪಂದ್ಯಗಳನ್ನು ಎಲ್ಲಿ ವೀಕ್ಷಿಸಬಹುದು?

ಮಹಿಳಾ ಪ್ರೀಮಿಯರ್ ಲೀಗ್ 2026 ಪಂದ್ಯಗಳನ್ನು ಭಾರತದಲ್ಲಿನ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ.

ಪ್ಲೇಯಿಂಗ್ 11 ರ ನಿಯಮಗಳು

ನಿಯಮಗಳ ಪ್ರಕಾರ, ಒಂದು ತಂಡದ ಪ್ಲೇಯಿಂಗ್ 11 ರಲ್ಲಿ ಗರಿಷ್ಠ ನಾಲ್ಕು ವಿದೇಶಿ ಆಟಗಾರ್ತಿಯರು ಇರಬಹುದು. ಒಂದು ತಂಡವು ಆಡುವ 11 ರಲ್ಲಿ ಅಸೋಸಿಯೇಟ್ ದೇಶದ ಆಟಗಾರ್ತಿಯನ್ನು ಹೊಂದಿದ್ದರೆ, ಅವರು ಐದು ವಿದೇಶಿ ಆಟಗಾರ್ತಿಯರನ್ನು ಕಣಕ್ಕಿಳಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

ವಿಜೇತ ತಂಡಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು?

ಮಹಿಳಾ ಪ್ರೀಮಿಯರ್ ಲೀಗ್‌ನ ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ತಂಡಕ್ಕೆ 6 ಕೋಟಿ ರೂ. ಬಹುಮಾನವನ್ನು ನೀಡಲಾಯಿತು. ಪರಿಣಾಮವಾಗಿ, ಈ ಬಾರಿ ವಿಜೇತ ತಂಡವು ಅದೇ ಬಹುಮಾನದ ಹಣವನ್ನು ಪಡೆಯುವ ನಿರೀಕ್ಷೆಯಿದೆ. ರನ್ನರ್-ಅಪ್ ತಂಡವು 3 ಕೋಟಿ ರೂ. ಪಡೆಯುತ್ತದೆ. ಅತ್ಯುತ್ತಮ ಬ್ಯಾಟರ್, ಅತ್ಯುತ್ತಮ ಬೌಲರ್, ಟೂರ್ನಮೆಂಟ್‌ನ ಆಟಗಾರ್ತಿ, ಹೆಚ್ಚಿನ ಸಿಕ್ಸರ್‌ಗಳು ಮತ್ತು ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರ್ತಿಗೆ ಬಹುಮಾನದ ಹಣವನ್ನು ನೀಡಲಾಗುತ್ತದೆ.

ಎಲ್ಲಾ ಐದು ತಂಡಗಳು

ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸಿವರ್-ಬ್ರಂಟ್, ಹೇಲಿ ಮ್ಯಾಥ್ಯೂಸ್, ಅಮನ್‌ಜೋತ್ ಕೌರ್, ಜಿ. ಕಮಲಿನಿ, ಅಮೆಲಿಯಾ ಕೆರ್, ಶಬ್ನಿಮ್ ಇಸ್ಮಾಯಿಲ್, ಸಂಸ್ಕೃತಿ ಗುಪ್ತಾ, ಸಜನಾ ಸಜೀವನ್, ರಾಹಿಲಾ ಫಿರ್ದೌಸ್, ನಿಕೋಲಾ ಕ್ಯಾರಿ, ಪೂನಂ ಖೆಮ್ನಾರ್, ತ್ರಿವೇಣಿ ವಸಿಷ್ಟ, ನಲ್ಲ ರೆಡ್ಡಿ, ಸೈಕಾ ಇಶಾಕ್, ಮಿಲ್ಲಿ ಇಲ್ಲಿಂಗ್‌ವರ್ತ್

ಡೆಲ್ಲಿ ಕ್ಯಾಪಿಟಲ್ಸ್: ಜೆಮಿಮಾ ರೋಡ್ರಿಗಸ್ (ನಾಯಕಿ), ಶಫಾಲಿ ವರ್ಮಾ, ಮಾರ್ಜಿಯಾನ್ನೆ ಕಪ್, ನಿಕಿ ಪ್ರಸಾದ್, ಲಾರಾ ವೊಲ್ವಾರ್ಡ್ಟ್, ಚಿನೆಲ್ಲೆ ಹೆನ್ರಿ, ಶ್ರೀ ಚರಣಿ, ಸ್ನೇಹ ರಾಣಾ, ಲಿಜೆಲ್ಲೆ ಲೀ, ದೀಯಾ ಯಾದವ್, ತನಿಯಾ ಭಾಟಿಯಾ, ಮಮತಾ ಮಡಿವಾಲಾ, ನಂದಿನಿ ಶರ್ಮಾ, ಲೂಸಿ ಹ್ಯಾಮಿಲ್ಟನ್, ಮಿನ್ನು ಮಣಿ, ಅಲಾನಾ ಕಿಂಗ್ (ಅನ್ನಾಬೆಲ್ ಸದರ್ಲ್ಯಾಂಡ್ ಬದಲಿಗೆ).

ಆರ್​ಸಿಬಿ: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್, ಡಿ. ಹೇಮಲತಾ, ಸಯಾಲಿ ಸತ್ಘರೆ (ಎಲ್ಲಿಸ್ ಪೆರಿ ಬದಲಿಗೆ)

ಗುಜರಾತ್ ಜೈಂಟ್ಸ್: ಆಶ್ಲೀಗ್ ಗಾರ್ಡ್ನರ್ (ನಾಯಕಿ), ಬೆತ್ ಮೂನಿ, ಸೋಫಿ ಡಿವೈನ್, ರೇಣುಕಾ ಸಿಂಗ್ ಠಾಕೂರ್, ಭಾರತಿ ಫುಲ್ಮಾಲಿ, ಟಿಟಾಸ್ ಸಾಧು, ಕಾಶೀ ಗೌತಮ್, ಕನಿಕಾ ಅಹುಜಾ, ತನುಜಾ ಕನ್ವರ್, ಜಾರ್ಜಿಯಾ ವೇರ್ಹ್ಯಾಮ್, ಅನುಷ್ಕಾ ಶರ್ಮಾ, ಹ್ಯಾಪಿ ಕುಮಾರಿ, ಕಿಮ್ ಗಾರ್ತ್, ಯಾಸ್ತಿಕಾ ಭಾಟಿಯಾ, ಶಿವಾನಿ ಸಿಂಗ್, ಡ್ಯಾನಿ ವ್ಯಾಟ್-ಹಾಡ್ಜ್, ರಾಜೇಶ್ವರಿ ಗಾಯಕ್ವಾಡ್, ಆಯುಷಿ ಸೋನಿ.

ಯುಪಿ ವಾರಿಯರ್ಸ್​: ಮೆಗ್ ಲ್ಯಾನಿಂಗ್ (ನಾಯಕಿ), ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಫೋಬೆ ಲಿಚ್‌ಫೀಲ್ಡ್, ಕಿರಣ್ ನವಗಿರೆ, ಹರ್ಲೀನ್ ಡಿಯೋಲ್, ಕ್ರಾಂತಿ ಗೌಡ್, ಆಶಾ ಸೋಭಾನ, ಡಿಯಾಂಡ್ರಾ ಡಾಟಿನ್, ಶಿಖಾ ಪಾಂಡೆ, ಶಿಪ್ರಾ ಗಿರಿ, ಸಿಮ್ರಾನ್ ಶೇಖ್, ಕ್ಲೋಯ್ ಟ್ರಯಾನ್, ಸುಮನ್ ಮೀನಾ, ಜಿ. ತ್ರಿಶಾ, ಪ್ರತೀಕಾ ರಾವಲ್, ಚಾರ್ಲಿ ನಾಟ್ (ತಾರಾ ನಾರ್ರಿಸ್ ಬದಲಿಗೆ).

WPL 2026: ಇನ್ನೇರಡು ದಿನಗಳಲ್ಲಿ ಡಬ್ಲ್ಯುಪಿಎಲ್ ಆರಂಭ; ಇಲ್ಲಿದೆ ಪೂರ್ಣ ವೇಳಾಪಟ್ಟಿ

ಪೂರ್ಣ ವೇಳಾಪಟ್ಟಿ

ದಿನಾಂಕ ಮುಖಾಮುಖಿ ಸ್ಥಳ
09-01-2026 ಮುಂಬೈ ಇಂಡಿಯನ್ಸ್ vs ಆರ್​ಸಿಬಿ ನವಿ ಮುಂಬೈ
10-01-2026 ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
10-01-2026 ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ ನವಿ ಮುಂಬೈ
11-01-2026 ದೆಹಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
12-01-2026 ಆರ್​ಸಿಬಿ vs ಯುಪಿ ವಾರಿಯರ್ಸ್ ನವಿ ಮುಂಬೈ
13-01-2026 ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
14-01-2026 ಯುಪಿ ವಾರಿಯರ್ಸ್ vs ದೆಹಲಿ ಕ್ಯಾಪಿಟಲ್ಸ್ ನವಿ ಮುಂಬೈ
15-01-2026 ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್ ನವಿ ಮುಂಬೈ
16-01-2026 ಆರ್​ಸಿಬಿ vs ಗುಜರಾತ್ ಜೈಂಟ್ಸ್ ನವಿ ಮುಂಬೈ
17-01-2026 ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್ ನವಿ ಮುಂಬೈ
17-01-2026 ದೆಹಲಿ ಕ್ಯಾಪಿಟಲ್ಸ್ vs ಆರ್​ಸಿಬಿ ನವಿ ಮುಂಬೈ
19-01-2026 ಗುಜರಾತ್ ಜೈಂಟ್ಸ್ vs ಆರ್​ಸಿಬಿ ವಡೋದರಾ
20-01-2026 ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ ವಡೋದರಾ
22-01-2026 ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್ ವಡೋದರಾ
24-01-2026 ಆರ್​ಸಿಬಿ vs ದೆಹಲಿ ಕ್ಯಾಪಿಟಲ್ಸ್ ವಡೋದರಾ
26-01-2026 ಆರ್​ಸಿಬಿ vs ಮುಂಬೈ ಇಂಡಿಯನ್ಸ್ ವಡೋದರಾ
27-01-2026 ಗುಜರಾತ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್ ವಡೋದರಾ
29-01-2026 ಯುಪಿ ವಾರಿಯರ್ಸ್ vs ಆರ್​ಸಿಬಿ ವಡೋದರಾ
30-01-2026 ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ ವಡೋದರಾ
01-02-2026 ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್ ವಡೋದರಾ
03-02-2026 ಎಲಿಮಿನೇಟರ್ ವಡೋದರಾ
05-02-2026 ಫೈನಲ್ ವಡೋದರಾ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ