ನಿರ್ಮಾಪಕನ ‘ಸಾಲದಾಟ’ ಬಿಚ್ಚಿಟ್ಟ ರಾಘವೇಂದ್ರ ಬ್ಯಾಂಕ್ ಮಾಜಿ CEO ಡೆತ್‌ನೋಟ್‌

ಬೆಂಗಳೂರು: ನಿನ್ನೆ ಆತ್ಮಹತ್ಯೆ ಮಾಡಿಕೊಂಡಿರುವ ಶ್ರೀ ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಮಾಜಿ ಸಿಇಒ ಎಂ ವಾಸುದೇವ ಮಯ್ಯ ಅವರು ಬರೆದಿಟ್ಟಿದ್ದರೆನ್ನಲಾದ ಡೆತ್‌ ನೋಟ್‌ ಸಿಕ್ಕಿದ್ದು, ಅದ್ರಲ್ಲಿ ಕೆಲ ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ.

ಆತ್ಮಹತ್ಯೆಗೂ ಮುನ್ನ ತಮ್ಮ ಕಾರ್‌ನಲ್ಲಿ ವಾಸುದೇವ ಮಯ್ಯ 12 ಪುಟಗಳ ಡೆತ್‌ ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ಅವರ ಸಾವಿಗೆ ಕುಮಾರೇಶ್, ರಘುನಾಥ್, ಜಸ್ವಂತ್ ರೆಡ್ಡಿ, ಶ್ರೀನಿವಾಸ್, ರಂಜಿತ್, ತಲ್ಲಂ ಸೇರಿ ಆರು ಜನರ ಹೆಸರನ್ನು ಉಲ್ಲೇಖಿಸಿದ್ದಾರೆ. ಇದರ ಜೊತೆಗೆ ಇವರೆಲ್ಲಾ ನನ್ನಿಂದ ಪ್ರಯೋಜನ ಪಡೆದು ನನಗೆ ಮೋಸಮಾಡಿದ್ರು ಎಂದು ಬರೆದಿದ್ದಾರೆ.

ನಾನು ಯಾವುದೇ ಆಸ್ತಿ ಸಂಪಾದನೆ ಮಾಡಿಲ್ಲ, ಆದ್ರೆ ಎಲ್ಲವನ್ನೂ ಕಳೆದುಕೊಂಡೆ. ಎಲ್ಲರೂ ನನಗೆ ಮೋಸ ಮಾಡಿದ್ರು. ಒತ್ತಡಕ್ಕೆ ನಾನು ಬಲಿಪಶುವಾದೆ. ಬಡ್ಡಿಗೆ ಹಣ ಕೊಟ್ಟು ತಪ್ಪು ಮಾಡಿದೆ. ಇಲ್ಲಿ ಲಾಭ ಪಡೆವರಾರೋ? ಎಂಜಾಯ್ ಮಾಡಿದವರಾರೋ? ಆದ್ರೆ ಬಲಿಪಶುವಾಗಿದ್ದು ಮಾತ್ರ ನಾನು ಎಂದು ಅವಲತ್ತುಕೊಂಡಿದ್ದಾರೆ.

ಡೆತ್‌ ನೋಟ್‌ ಪ್ರಕಾರ ಖ್ಯಾತ ಸ್ಯಾಂಡಲ್‌ವುಡ್‌ ನಿರ್ಮಾಪಕ ರಘುನಾಥ್‌ 143 ಕೋಟಿ ಸಾಲ ಪಡೆದಿದ್ದಾರೆ. ಹಾಗೇನೇ ಬೆಂಗಳೂರಿನ ಖ್ಯಾತ ರಿಯಲ್‌ ಎಸ್ಟೇಟ್‌ ಉದ್ಯಮಿ ಜಸ್ವಂತ್‌ ರೆಡ್ಡಿ 150 ಕೋಟಿ ಸಾಲ ಪಡೆದಿದ್ದಾರೆ. ಇವರ ಜೊತೆಗೆ ಇನ್ನೂ ಹಲವಾರು ಮಂದಿ ಭಾರಿ ಮೊತ್ತದ ಸಾಲ ಪಡಿದಿದ್ದಾರೆನ್ನಲಾಗಿದೆ.

Related Tags:

Related Posts :

Category:

error: Content is protected !!