ಬಟ್ಟೆ ಹೊಲಿಸಲು ಬರುವವರ ಜೊತೆ ಅಸಭ್ಯ ವರ್ತನೆ, ಶ್ರೀರಾಮಸೇನೆ ಕಾರ್ಯಕರ್ತರಿಂದ ಥಳಿತ

ಬೆಳಗಾವಿ: ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಶ್ರೀರಾಮಸೇನೆ ಕಾರ್ಯಕರ್ತರು ವ್ಯಕ್ತಿಗೆ ಹಿಗ್ಗಾಮಗ್ಗಾ ಥಳಿಸಿರುವ ಘಟನೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ. ಹುಕ್ಕೇರಿ ಪಟ್ಟಣದ ನಿವಾಸಿ ಮುಬಾರಕ್ ಅತ್ತಾರ್ ಟೇಲರಿಂಗ್ ಮಾಡುತ್ತಿದ್ದ. ಈತ ತನ್ನ ಬಳಿ ಬಟ್ಟೆ ಹೊಲಿಸಲು ಬರುವ ಬಾಲಕಿಯರು, ಮಹಿಳೆಯರಿಗೆ ಕಾಡಿಸುವುದು, ಚುಡಾಯಿಸುವುದು ಮಾಡುತ್ತಿದ್ದ.

ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಮುದಿ ವಯಸ್ಸಿನಲ್ಲಿ ಈ ರೀತಿ ವರ್ತಿಸದಿರಲು ಹಲವು ಬಾರಿ ಶ್ರೀರಾಮಸೇನೆ ಕಾರ್ಯಕರ್ತರು ವಾರ್ನ್ ಮಾಡಿದ್ರು. ಆದ್ರು ಈತ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ. ಹೀಗಾಗಿ ಮಹಿಳೆಯನ್ನು ಚುಡಾಯಿಸಿದ್ದಕ್ಕೆ ಟೇಲರಿಂಗ್ ಅಂಗಡಿಯಲ್ಲೇ ಹಿಗ್ಗಾಮಗ್ಗಾ ಥಳಿಸಿದ್ದಾರೆ. ಹುಕ್ಕೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Posts :

Category:

error: Content is protected !!