ವಿಶ್ವಕಪ್ ಮ್ಯಾಚ್​ ಫಿಕ್ಸಿಂಗ್ ತನಿಖೆ ಕೈಬಿಟ್ಟ ಶ್ರೀಲಂಕಾ ಪೊಲೀಸರು.. ಯಾಕೆ?

ಶ್ರೀಲಂಕಾ ಪೊಲೀಸರು 2011ರ ವಿಶ್ವಕಪ್ ಫೈನಲ್ ಪಂದ್ಯದ ಮ್ಯಾಚ್​ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಪಟ್ಟಂತೆ ನಡೆಸುತ್ತಿದ್ದ ತನಿಖೆಯನ್ನ ಕೈ ಬಿಟ್ಟಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದ ತನಿಖೆಯನ್ನ ಕೈ ಬಿಡುತ್ತಿರೋದಾಗಿ ಶ್ರೀಲಂಕಾ ಪೊಲೀಸರು ತಿಳಿಸಿದ್ದಾರೆ.

ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತಗಮಗೆ ಈ ಹಿಂದೆ ಮುಂಬೈನ ವಾಂಖೆಡೆಯಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಅಂತಾ ಗಂಭೀರವಾದ ಆರೋಪವನ್ನು ಮಾಡಿದ್ದರು. ಹೀಗಾಗಿ ಶ್ರೀಲಂಕಾ ಸರ್ಕಾರ ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ವಿಚಾರಣೆ ನಡೆಸಲು ವಿಶೇಷ ತನಿಖಾ ತಂಡವನ್ನ ರಚಿಸಿದ್ದರು.

ತನಿಖೆ ಆರಂಭಿಸಿದ್ದ ಸ್ಪೆಷಲ್​ ತಂಡವು ಅಂದಿನ ಕ್ಯಾಪ್ಟನ್ ಕುಮಾರ್ ಸಂಗಕ್ಕಾರ, ಉಪುಲ್ ತರಂಗ, ಮಹೇಲಾ ಜಯವರ್ಧನೆ ಹಾಗೂ ತಂಡದ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಅರವಿಂದ್ ಡಿಸಿಲ್ವಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಅದರಲ್ಲೂ ಸಂಗಕ್ಕಾರನ 10 ಗಂಟೆಗೂ ಹೆಚ್ಚಿನ ಕಾಲ ವಿಚಾರಣೆ ಮಾಡಲಾಗಿತ್ತು.

ಅದರೆ, ತನಿಖೆ ವೇಳೆ ಮ್ಯಾಚ್ ಫಿಕ್ಸಿಂಗ್ ಆಗಿರುವ ಬಗ್ಗೆ ಯಾವುದೇ ಸಾಕ್ಷಿಗಳು ದೊರೆತಿಲ್ಲ. ಜೊತೆಗೆ ಅಂದಿನ ಆಟಗಾರರು ಮತ್ತು ಅಧಿಕಾರಿಗಳು ನೀಡಿದ ಉತ್ತರ ತೃಪ್ತಿ ತಂದಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ತನಿಖೆಯನ್ನ ಕೈಬಿಟ್ಟಿದ್ದೇವೆ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ.

Related Tags:

Related Posts :

Category:

error: Content is protected !!