ಮಾಜಿ ಪ್ರಧಾನಿ ಮಕ್ಕಳಾದ ಮಾತ್ರಕ್ಕೆ ಹೇಳಿದ್ದೆಲ್ಲಾ ಕೇಳಬೇಕಾ?

, ಮಾಜಿ ಪ್ರಧಾನಿ ಮಕ್ಕಳಾದ ಮಾತ್ರಕ್ಕೆ ಹೇಳಿದ್ದೆಲ್ಲಾ ಕೇಳಬೇಕಾ?

ಮಂಡ್ಯ: ಮಾಜಿ ಪ್ರಧಾನಿ ಮಕ್ಕಳಾದ ಮಾತ್ರಕ್ಕೆ ಹೇಳಿದ್ದೆಲ್ಲಾ ಕೇಳಬೇಕಾ? ಎಂದು ದೇವೇಗೌಡ್ರ ಕುಟುಂಬದ ವಿರುದ್ಧ ಸಚಿವ ರಾಮುಲು ವಾಗ್ದಾಳಿ ನಡೆಸಿದ್ದಾರೆ. ಡಿಸೆಂಬರ್ 5ರಂದು ಕೆ.ಆರ್​.ಪೇಟೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಪ್ರಚಾರದ ವೇಳೆ ಆರೋಗ್ಯ ಸಚಿವ ಶ್ರೀರಾಮುಲು ಈ ರೀತಿಯಾಗಿ ಹೇಳಿದ್ದಾರೆ.

ಮಾಜಿಪ್ರಧಾನಿ ಮಕ್ಕಳಾದ ಮಾತ್ರಕ್ಕೆ ನೀವು ಹೇಳಿದ್ದೆಲ್ಲಾ ಕೇಳಬೇಕಾ? ಏನ್ರಿ ನೀವು ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡ್ತೀರಾ? K.R​.ಪೇಟೆ ಕಾಮಾಟಿಪುರ ಮಾಡ್ತಾರೆಂದು ಮಹಿಳೆಯರಿಗೆ ಅವಮಾನಿಸ್ತೀರಾ? ಹೀಗೆ ಮಹಿಳೆಯರ ಬಗ್ಗೆ ಮಾತಾಡಿದ್ದಕ್ಕೆ ಈಗಾಗ್ಲೇ ಫಲ ಉಂಡಿದ್ದೀರ. ಸುಮಲತಾ ವಿರುದ್ಧ ಸೋಲಲು ಮಹಿಳೆಯರ ಶಾಪವೇ ಕಾರಣ. ಮಹಿಳೆಯರ ಶಾಪ ನಿಮಗೆ ತಟ್ಟದೇ ಇರಲಾರದು ಮಹಿಳೆಯರನ್ನ ಅವಮಾನಿಸುತ್ತೀರಾ ಎಂದು ರಾಮುಲು ಕಿಡಿಕಾಡಿದ್ದಾರೆ.

ಬಿಜೆಪಿ ಸದೃಢವಾದ ಪಕ್ಷ:
ಈಗ ಮತ್ತೆ ಮೈತ್ರಿ ಸರ್ಕಾರ ಬರುತ್ತೆ ಅನ್ನುವುದು ತಿರುಕನ ಕನಸು. ಕಾಂಗ್ರೆಸ್, ಜೆಡಿಎಸ್ ಎರಡೂ ಅವಧಿ ಮುಗಿದ ಪಕ್ಷಗಳು. ಅವು ಮತ್ತೆಂದೂ ಅಧಿಕಾರಕ್ಕೆ ಬರಲಾರವು. ಬಿಜೆಪಿ ಒಂದೇ ಸದೃಢವಾದ ಪಕ್ಷ. ಬಿಜೆಪಿ ಬಿಟ್ಟು ಇನ್ಯಾವುದೇ ಪಕ್ಷ ಶಾಶ್ವತವಲ್ಲ. ಬಿಜೆಪಿ ಗೆಲ್ಲಿಸಿ ಅವರಿಗೆ ತಕ್ಕ ಪಾಠ ಕಲಿಸಿ. ನಾರಾಯಣಗೌಡರು ನನ್ನ ಸೋದರ ಸಮಾನರು.

ಇವತ್ತು ರಾಜ್ಯದಲ್ಲಿ ಬಿಜೆಪಿಗೆ ಅಗ್ನಿ ಪರೀಕ್ಷೆ ನಡೆಯುತ್ತಿದೆ. ನಾರಾಯಣಗೌಡರ ತ್ಯಾಗದಿಂದ ನಮ್ಮ ಸರ್ಕಾರ ನಡೆಯುತ್ತಿದೆ. ರಕ್ತದಲ್ಲಿ ಬರೆದುಕೊಡ್ತೀನಿ ನಮ್ಮ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗಲು ನಾನು ಬಿಡಲ್ಲ. ತಳವಾರ, ಪರಿವಾರ ಸಮುದಾಯಕ್ಕೆ ಸರ್ಟಿಫಿಕೇಟ್, ಏಳೂವರೆ ಪರ್ಸೆಂಟು ಮೀಸಲಾತಿ ಕೊಟ್ಟೇ ಕೊಡ್ತೀನಿ. ಕೈ ಮುಗಿದು ಮನವಿ ಮಾಡ್ತೀನಿ ನಾರಾಯಣಗೌಡರಿಗೆ ಮತ ನೀಡಿ. ನಮ್ಮ ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಇದಾಗಿದೆ ಎಂದು ಹೇಳಿದರು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!