ಮಂಡ್ಯದ DHO ಕಚೇರಿಗೇ ನುಗ್ಗಿತು ಕೊರೊನಾ, ಕಂಗಾಲಾದ ಸಿಬ್ಬಂದಿಯಿಂದ ಕಚೇರಿ ಸೀಲ್‌ಡೌನ್‌

  • TV9 Web Team
  • Published On - 11:53 AM, 30 Jun 2020

ಮಂಡ್ಯ: ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರೋದು ವೈದ್ಯರು ಮತ್ತು ಸರ್ಕಾರಿ ವೈದ್ಯಕೀಯ ಸಂಸ್ಥೆಗಳು. ಈ ಕೊರೊನಾ ಹೆಮ್ಮಾರಿ ಎಂಥಾ ಖತರ್‌ನಾಕ್‌ ಅಂದ್ರೆ, ಸಾರ್ವಜನಿಕರ ಜತೆಗೆ ಈಗ ಕೋವಿಡ್‌ ವಾರಿಯರ್ಸ್‌ ವಾರ್‌ ರೂಮ್‌ಗೇನೇ ನುಗ್ಗಿದೆ.

ಹೌದು ಕೊರೊನಾ ವಿರುದ್ಧ ಅದರ ತಡೆ ಮತ್ತು ಚಿಕಿತ್ಸೆಗಾಗಿ ಜಿಲ್ಲೆಯಾದ್ಯಂತ ನಿರಂತರವಾಗಿ ಹೋರಾಡುತ್ತಿರುವ ಮಂಡ್ಯದ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ ಮೇಲೆನೇ ಕೊರೊನಾ ವೈರಸ್‌ ಅಟ್ಯಾಕ್‌ ಮಾಡಿದೆ. ಡಿಹೆಚ್‌ಓ ಕಚೇರಿಯ ನೌಕರನೊಬ್ಬನಿಗೆ ಈಗ ಸೋಂಕು ತಗುಲಿರೋದು ಕನ್‌ಫರ್ಮ್‌ ಆಗಿದೆ. ಈ ನೌಕರ ಕಚೇರಿಯಲ್ಲಿ ವೈದ್ಯಾಧಿಕಾರಿಗಳ ಸಭೆಯಲ್ಲಿ ಕಾಫಿ, ಟೀ ಮತ್ತು ತಿಂಡಿಯನ್ನ ನೀಡುತ್ತಿದ್ದ ಎನ್ನಲಾಗಿದೆ.

ನೌಕರನಿಗೆ ಕೊರೊನಾ ಸೋಂಕು ತಗುಲಿರೋದು ಗೊತ್ತಾಗುತ್ತಿದ್ದಂತೆ ಆತನನ್ನು ವಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಇಡೀ ಡಿಹೆಚ್‌ಓ ಕಚೇರಿಯನ್ನ ಸೀಲ್​ಡೌನ್‌ ಮಾಡಲಾಗಿದೆ. ಈ ಬಗ್ಗೆ ಇಂದು ಪ್ರಕಟಿಸಲಿರುವ ವೈದ್ಯಕೀಯ ಬುಲೆಟಿನ್‌ನಲ್ಲಿ ಅಧಿಕೃತವಾಗಿ ಘೋಷಣೆಯಾಗಲಿದೆ.