ಕೆಂಪೇಗೌಡರ ಹೆಸರಲ್ಲಿ ವೋಟ್ ಬ್ಯಾಂಕ್ ಭದ್ರಕ್ಕೆ ಬಿಜೆಪಿ ಪ್ಲ್ಯಾನ್

ಬೆಂಗಳೂರು: ಒಕ್ಕಲಿಗ ವೋಟ್‌ ಬ್ಯಾಂಕ್‌ ಗಟ್ಟಿಗೊಳಿಸಲು ಬಿಜೆಪಿ ಪ್ಲ್ಯಾನ್ ರೂಪಿಸಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಕೆಂಪೇಗೌಡ ಹೆರಿಟೇಜ್ ಏರಿಯಾ ಅಭಿವೃದ್ಧಿ ಯೋಜನೆಗೆ ಮುಂದಾಗಿದೆ. ಸರ್ಕಾರ ಐಡೆಕ್ ಸಂಸ್ಥೆ ಮೂಲಕ ರೂಪರೇಷೆ ಸಿದ್ಧಪಡಿಸಿದೆ. ಬೆಂಗಳೂರು ನಗರದ 13, ತುಮಕೂರು ಜಿಲ್ಲೆಯ 6 ಸ್ಥಳಗಳು, ರಾಮನಗರ ಜಿಲ್ಲೆಯ 20, ಚಿಕ್ಕಬಳ್ಳಾಪುರ ಜಿಲ್ಲೆಯ 2 ಸ್ಥಳಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 5 ಸ್ಥಳಗಳನ್ನು ಗುರುತಿಸಲಾಗಿದೆ. ಇದರಲ್ಲಿ ಟಾಪ್‌ 10 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ.

ಈಗಾಗಲೇ ರಾಜ್ಯ ಬಿಜೆಪಿ ಸರ್ಕಾರಕ್ಕೆ ಐಡೆಕ್ ಸಂಸ್ಥೆ ಸಿದ್ಧಪಡಿಸಿರುವ ಯೋಜನೆಯ ರೂಪರೇಷೆ ಸಲ್ಲಿಕೆಯಾಗಿದೆ. ಪಾರ್ಕ್, ಝೂ, ಕಾರಂಜಿ, ಪ್ರತಿಮೆ, ಕೃತಕ ಜಲಪಾತ, ಲಾಡ್ಜಿಂಗ್, ಶಾಪಿಂಗ್ ಕಾಂಪ್ಲೆಕ್ಸ್, ರಿಸರ್ಚ್ ಲೈಬ್ರರಿ ಮೊದಲಾದವುಗಳನ್ನೊಳನ್ನು ಯೋಜನೆಯ ರೂಪರೇಷೆಯಲ್ಲಿ ಸಿದ್ಧಗೊಂಡಿದೆ. ಶೀಘ್ರದಲ್ಲೇ DPR ಸಿದ್ಧಪಡಿಸಿ ಟೆಂಡರ್‌ ಕರೆಯಲು ಚಿಂತನೆ ಮಾಡಲಾಗುತ್ತಿದ್ದು, ಪಿಪಿಪಿ ಮಾದರಿಯಲ್ಲೂ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!