ಎಣ್ಣೆ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಗುಡ್​ನ್ಯೂಸ್!

ಬೆಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನ ಮೇಲೆತ್ತಲು ಸರ್ಕಾರದ ಚಿತ್ತ ಇದೀಗ ಮದ್ಯದಂಗಡಿಗಳತ್ತ ಹರಿದಿದೆ. ಹಾಗಾಗಿ, ಆನ್​ಲೈನ್ ಮೂಲಕ ಮನೆ ಬಾಗಿಲಿಗೆ ಮದ್ಯ ತಲುಪಿಸಲು ಸರ್ಕಾರ ಪ್ಲ್ಯಾನ್ ನಡೆಸುತ್ತಿದೆ.

ಜೊತೆಗೆ, 604 MSIL ಮಳಿಗೆಗಳನ್ನ ಸಹ ತೆರೆಯಲು ರಾಜ್ಯ ಸರ್ಕಾರ ಸಜ್ಜಾಗಿದೆ ಎಂದು ತಿಳಿದುಬಂದಿದೆ. ಡಿಸೆಂಬರ್ ಅಂತ್ಯದೊಳಗೆ MSIL ಮಳಿಗೆ ತೆರೆಯಲು ಕಟ್ಟಪ್ಪಣೆ ಸಹ ಹೊರಡಿಸಲಿದೆ ಎಂದು ಹೇಳಲಾಗಿದೆ. ಇದಲ್ಲದೆ, ಈ ಹೊಸ ಮದ್ಯದಂಗಡಿಗಳನ್ನ ಗ್ರಾಮೀಣ ಪ್ರದೇಶಗಳಲ್ಲಿ ತೆರೆಯಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಈ ನಡುವೆ, MSIL ಮಳಿಗೆ ತೆರೆಯಲು ಶಾಸಕರ ಅನುಮತಿ ಕಡ್ಡಾಯ ಎಂಬ ಷರತ್ತನ್ನು ಸಹ ಸರ್ಕಾರ ಹಿಂಪಡೆಯಲಿದೆ.

Related Tags:

Related Posts :

Category:

error: Content is protected !!