‘ರಿಪೋರ್ಟ್‌ಗೆ ಕಾಯದೆ, ಆಸ್ಪತ್ರೆಗೆ ಬರುವ ರೋಗಿಗೆ ಚಿಕಿತ್ಸೆ ಮಾಡಲೇ ಬೇಕು’

ಬೆಂಗಳೂರು: ಇನ್ನುಮುಂದೆ ಕೊವಿಡ್ ರಿಪೋರ್ಟ್​ ಇಲ್ಲದಿದ್ದರೂ ಚಿಕಿತ್ಸೆ ನೀಡುವಂತೆ ರಾಜ್ಯ ಸರ್ಕಾರ ಎಲ್ಲ ಆಸ್ಪತ್ರೆಗಳಿಗೆ ಮಹತ್ವದ ಆದೇಶ ಹೊರಡಿಸಿದೆ.

ಈ ಹಿಂದೆ ಆಸ್ಪತ್ರೆಗಳು ಕೊರೊನಾ ಟೆಸ್ಟ್ ಮಾಡಿಸಿ ಮನೆಗೆ ಕಳಿಸುತ್ತಿದ್ದರು. ಸ್ಯಾಂಪಲ್ ಸಂಗ್ರಹಿಸಿ ಮನೆಗೆ ಕಳಿಸ್ತಿದ್ದ ಬಗ್ಗೆ ಟಿವಿ9 ನಿರಂತರ ವರದಿ ಮಾಡುತ್ತಲೇ ಬಂದಿತ್ತು. ಈಗ ವರದಿ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಕೊವಿಡ್ ಲಕ್ಷಣಗಳಿದ್ದರೆ ತಕ್ಷಣ ದಾಖಲಿಸಿಕೊಳ್ಳಲು ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಕೊರೊನಾ ಪೇಷಂಟ್ ಎಂದು ಭಾವಿಸಿ ಅವರಿಗೆ ಚಿಕಿತ್ಸೆ ನೀಡಬೇಕು. ಬಳಿಕ ಗಂಟಲು ದ್ರವ ಸಂಗ್ರಹಿಸಿ ಪಾಸಿಟಿವ್ ಬಂದರೆ ಸರ್ಕಾರ ನಿಗದಿಪಡಿಸಿದ ದರವನ್ನೇ ಫಿಕ್ಸ್ ಮಾಡಬೇಕು. ಬಿಯು ಕೋಡ್ ಜನರೇಟ್ ಆಗದಿದ್ರೂ ಚಿಕಿತ್ಸೆ ನೀಡಬೇಕು ಎಂದು ಸೂಚನೆ ನೀಡಿದೆ.

ಸಾರಿ ಕೇಸ್ ಅಥವಾ ಕೊರೊನಾ ಲಕ್ಷಣಗಳಿದ್ದ ವ್ಯಕ್ತಿ 108 ಸಹಾಯವಾಣಿಗೆ ಕರೆ ಮಾಡಿದರೆ ಆಸ್ಪತ್ರೆಗೆ ಶಿಫ್ಟ್ ಮಾಡಬೇಕು. ರೋಗಿ ಹೋದಕೂಡಲೇ ಆಸ್ಪತ್ರೆಯವರು ಚಿಕಿತ್ಸೆ ನೀಡಬೇಕು. ರಿಪೋರ್ಟ್‌ ಬರುವವರೆಗೂ ಕಾಯದೇ ಚಿಕಿತ್ಸೆ ಕೊಡಬೇಕು ಎಂದು ರಾಜ್ಯ ಸರ್ಕಾರದಿಂದ ಎಲ್ಲ ಆಸ್ಪತ್ರೆಗಳಿಗೆ ಆದೇಶ ನೀಡಿದೆ.

Related Tags:

Related Posts :

Category:

error: Content is protected !!