‘ವಾರಂತ್ಯದಲ್ಲಿ ಚರ್ಚ್​ಗಳನ್ನ ಕಡ್ಡಾಯವಾಗಿ ತೆರೆಯಲೇಬೇಕು’

ವಾಷಿಂಗ್ಟನ್: ದಿನದಿಂದ ದಿನಕ್ಕೆ ಅಮೆರಿಕದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಅಲ್ಲದೆ, ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರಿರುವುದು ಅಮೆರಿಕದಲ್ಲಿ. ಈ ಮಧ್ಯೆ ಅಗತ್ಯ ಸೇವೆಗಳೆಂದು ಪರಿಗಣಿಸಿ ಲಾಕ್​ಡೌನ್​ನಿಂದ ಬಂದ್ ಆಗಿರುವ ಚರ್ಚ್​ಗಳನ್ನು ತೆರೆಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ.

ದೊಡ್ಡಣ್ಣನ ಆಜ್ಞೆ..
ಚರ್ಚ್​ಗಳನ್ನು ತೆರೆಯುವ ಕೆಲಸವನ್ನು ತಕ್ಷಣ ಗವರ್ನರ್​ಗಳು ಮಾಡಬೇಕು. ನನ್ನ ಆದೇಶವನ್ನ ಉಲ್ಲಂಘಿಸುವ ಗವರ್ನರ್​ಗಳನ್ನ ಅತಿಕ್ರಮಿಸಿಕೊಳ್ಳುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ದೇಗುಲಗಳು, ಚರ್ಚುಗಳು, ಮಸೀದಿಗಳನ್ನು ಅಗತ್ಯ ಸೇವೆಗಳನ್ನು ಒದಗಿಸುವ ಸ್ಥಳಗಳಾಗಿ ಗುರುತಿಸುತ್ತಿದ್ದೇನೆ. ಈ ಸ್ಥಳಗಳು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ಬಗ್ಗೆ ಸಮುದಾಯಗಳಿಗೆ ಮಾಹಿತಿ ನೀಡುತ್ತವೆ ಎಂದು ಟ್ರಂಪ್ ಉಲ್ಲೇಖಿಸಿದ್ದಾರೆ. ವಾರಂತ್ಯದಲ್ಲಿ ಚರ್ಚ್​ಗಳನ್ನ ಕಡ್ಡಾಯವಾಗಿ ತೆರೆಯಲೇಬೇಕು. ಅಗತ್ಯ ಸೇವೆಗಳಲ್ಲಿ ಚರ್ಚ್ ​ಕೂಡ ಒಂದು ಅಂತಾ ಟ್ರಂಪ್ ಹೇಳಿದ್ದಾರೆ.

Related Posts :

Category:

error: Content is protected !!