ರಾಮಾಯಣ ಸೀತೆಯ ‘ಶೃಂಗಾರ’ಮಯ ದಾಂಪತ್ಯ ರಹಸ್ಯ ಇಲ್ಲಿದೆ!

ಮೂರು ದಶಕದ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗಿದ್ದ ರಾಮಾಯಣ ಧಾರಾವಾಹಿ ಆಗಲೇ ಭಾರೀ ಜನಪ್ರಿಯತೆ ಗಳಿಸಿತ್ತು. ಈಗ ಕೊರೊನಾ ಕಾಲದಲ್ಲಿ ಮತ್ತೊಮ್ಮೆ ಪ್ರಸಾರವಾಗಿ ಮತ್ತೆ ಖ್ಯಾತಿಯ ಉತ್ತುಂಗಕ್ಕೆ ಏರಿತು. ಅಷ್ಟೇ ಅಲ್ಲ.. ಈ ನಡುವೆ ಕೆಲ ಕಲಾವಿದರು ರಾಮಾಯಣದ ಖ್ಯಾತಿಯಿಂದ ತಮ್ಮ ಜೀವನದಲ್ಲಿ ಆದ ಬದಲಾವಣೆಗಳನ್ನು ಮೆಲುಕು ಹಾಕಿದ್ದಾರೆ.

ಅದರಲ್ಲಿ ಪ್ರಮುಖವಾಗಿ ಸೀತಾಮಾತೆಯಾಗಿ ವಿಜೃಂಭಿಸಿದ ದೀಪಿಕಾ ಚಿಕ್ಲಿಯಾ ತಮ್ಮ ‘ಶೃಂಗಾರ’ಮಯ ದಾಂಪತ್ಯ ರಹಸ್ಯ ಬಿಚ್ಚಿಟ್ಟಿದ್ದಾರೆ. ನಟಿ ದೀಪಿಕಾ ಚಿಕ್ಲಿಯಾ ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಂ ಫೋಸ್ಟ್​ಗಳಿಂದ ಬಹಳ ಸುದ್ದಿ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ನಿಜ ಜೀವನದ ಬಗ್ಗೆ ಅದರಲ್ಲೂ ತಮ್ಮ ಲವ್​ ಲೈಫ್​ ಹೇಮಂತ್ ಟೋಪಿವಾಲಾ ಬಗ್ಗೆ ತಿಳಿದುಕೊಳ್ಳಬೇಕೇ ಎಂದು ಮೊದಲು ಕೇಳಿದ್ದರು. ಇದಕ್ಕೆ ಅಭಿಮಾನಿಗಳಿಂದ ಸಕಾರಾತ್ಮಕ ಮೆಚ್ಚುಗೆ ವ್ಯಕ್ತವಾಗಿತ್ತು. ಹೀಗಾಗಿ ನಟಿ ತನ್ನ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೇಮಕಥೆಯನ್ನ ಬಹಿರಂಗಪಡಿಸಿದ್ದಾರೆ.

ದೀಪಿಕಾ ಮೊದಲ ಚಿತ್ರ ‘ಸುನ್ ಮೇರಿ ಲೈಲಾ’ ಹೇಮಂತ್ ಅವರನ್ನು ಭೇಟಿ ಮಾಡಲು ಕಾರಣವಾಯಿತಂತೆ. ದೀರ್ಘಕಾಲದ ನಂತರ ಏಪ್ರಿಲ್ 28, 1991 ರಂದು ಮತ್ತೊಮ್ಮೆ ದೀಪಿಕಾ ಮತ್ತು ಹೇಮಂತ್ ಟೋಪಿವಾಲಾ ಭೇಟಿಯಾದ್ರು. ಆ ವೇಳೆ ಸುಮಾರು 2 ಗಂಟೆಗಳ ಕಾಲ ಇಬ್ಬರೂ ಮಾತನಾಡಿದರಂತೆ. ಆಗಲೇ ಗೊತ್ತಾಗಿದ್ದು, ಇಬ್ಬರೂ ಪರಸ್ಪರ ಪ್ರೀತಿಯಲ್ಲಿದ್ದಾರೆಂದು!

‘ಶಿಂಗಾರ್’ ಬನ್ ಗಯಾ ಸೀತಾ ಕಿ ಮಾತೆ ಕಿ ಸಿಂಧೂರ್!
ಹೇಮಂತ್ ಅವರ ಕುಟುಂಬ ಆ ಕಾಲದಲ್ಲಿ ಹೆಣ್ಣುಮಕ್ಕಳ ನೆಚ್ಚಿನ ಸಂಗಾತಿಯೇ ಆಗಿದ್ದ ‘ಶೃಂಗಾರ’ ಎಂಬ ಸಾಂಪ್ರದಾಯಿಕ ಸೌಂದರ್ಯವರ್ಧಕಗಳನ್ನು 1961 ರಿಂದ ತಯಾರಿಸುವ ಕಂಪನಿ ಹೊಂದಿತ್ತು. ಆಗಿನ ಕಾಲಕ್ಕೆ ಅತಿ ಹೆಚ್ಚು ಜನಪ್ರಿಯ ಹೊಂದಿದ ಬ್ರಾಂಡ್ ಇದಾಗಿತ್ತು. ಮುಂದೆ ಅದೇ ‘ಶಿಂಗಾರ್’ ಕಂಪನಿಯ ಕುಲತಿಲಕವೇ ಸೀತಾ ಮಾತೆ ಯಾನಿ ದೀಪಿಕಾರ ಹಣೆಕುಂಕುಮವಾಗಿ ಶೃಂಗಾರಗೊಂಡಿತು.

All of you know how sita met ram I thought to let you in on a secret as to how I met my Real life Ram . ..my husband's…

Dipika Chikhlia Topiwala यांनी वर पोस्ट केले शुक्रवार, २९ मे, २०२०

Related Posts :

Category:

error: Content is protected !!

This website uses cookies to ensure you get the best experience on our website. Learn more