ಶಿವಣ್ಣ, ಸುದೀಪ್ ಮನೆಯಲ್ಲಿ ಕಳೆಗಟ್ಟಿದ ಆಯುಧ ಪೂಜೆ ಸಂಭ್ರಮ

  • Ayesha Banu
  • Published On - 14:45 PM, 26 Oct 2020

ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಿವಾಸದಲ್ಲಿ ಆಯುಧ ಪೂಜೆ ಸಂಭ್ರಮ ಜೋರಾಗಿದೆ. ದಸರಾ ಪ್ರಯುಕ್ತ ಶಿವಣ್ಣ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್ ವಾಹನಗಳಿಗೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಶಿವಣ್ಣನ ಕೆಲ ಆಪ್ತರು ಭಾಗಿಯಾಗಿದ್ದರು.

ಹೊಸ ಮನೆಯಲ್ಲಿ ಸುದೀಪ್ ವಿಜಯದಶಮಿ ಸಂಭ್ರಮ:
ಅಭಿನಯ ಚಕ್ರವರ್ತಿ ಸುದೀಪ್ ತಮ್ಮ ನಿವಾಸದಲ್ಲಿ ಕುಟುಂಬ ಸಮೇತ ವಾಹನಗಳಿಗೆ ಪೂಜೆ ಮಾಡಿದ್ದಾರೆ. ಇತ್ತೀಚೆಗಷ್ಟೆ ಸುದೀಪ್ ಹೈದರಾಬಾದ್​ನಲ್ಲಿ ಹೊಸ ಮನೆ ಖರೀದಿಸಿದ್ದಾರೆ ಎಂಬ ಮಾಹಿತಿ ಇದೆ.