ಅಂಬರೀಶ್ ಅಗಲಿ 2ವರ್ಷ ಕಳೆದಿದೆ. ನ 24 ಇಂದು ಅವರ 2ನೇ ವರ್ಷದ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಇಂದು ಅಂಬಿ ಸಮಾಧಿ ಬಳಿ ತೆರಳಿ ಪತ್ನಿ ಸುಮಲತಾ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪುತ್ರ ಅಭಿಷೇಕ್ ಉಪಸ್ಥಿತರಿದ್ರು.
ಬೆಂಗಳೂರು: ಕಲಿಯುಗದ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ಅಗಲಿ 2ವರ್ಷಗಳೇ ಕಳೆದಿದೆ. ನವೆಂಬರ್ 24 ಇಂದು ಅವರ 2ನೇ ವರ್ಷದ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಇಂದು ಅಂಬಿ ಸಮಾಧಿ ಬಳಿ ತೆರಳಿ ಪತ್ನಿ ಸುಮಲತಾ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪುತ್ರ ಅಭಿಷೇಕ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಚಿತ್ರರಂಗದ ಹಲವರು ಉಪಸ್ಥಿತರಿದ್ರು.
ಸದ್ಯ ಸಮಾಧಿ ಬಳಿ ಪೂಜೆ ಸಲ್ಲಿಸಿದ ನಂತರ ಸಂಸದೆ ಸುಮಲತಾ ಅಂಬರೀಶ್ ಮಂಡ್ಯಕ್ಕೆ ಹೊರಡಲಿದ್ದಾರೆ. ಮದ್ದೂರಿನ ಹೊಟ್ಟೇಗೌಡನದೊಡ್ಡಿಯಲ್ಲಿ ಅಂಬರೀಶ್ ಅವರ ಕಂಚಿನ ಪುತ್ಥಳಿ ಅನಾವರಣ ಮಾಡಲಿದ್ದಾರೆ. ಬಳಿಕ ಅಂಬರೀಶ್ ಅವರ ಹುಟ್ಟೂರಾದ ದೊಡ್ಡರಸಿನಕೆರೆ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ನಂತರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ಅಡಿಯಲ್ಲಿ ವಿಕಲಚೇತನರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಣೆ ಮಾಡಲಿದ್ದಾರೆ.
https://www.facebook.com/SumalathaAmbi/posts/1011455792664979