ಇವತ್ತು ರಾತ್ರಿಯಿಂದಲೇ ಕರ್ನಾಟಕ ಕಂಪ್ಲೀಟ್ ಲಾಕ್​​ಡೌನ್.. ಏನಿರುತ್ತೆ.. ಏನಿರಲ್ಲ..?

ಬೆಂಗಳೂರು: ಅಬ್ಬಾ ವೀಕೆಂಡ್​ ಬಂತಪ್ಪಾ ಅಂತಾ ಹೊರಗೆ ಹೋಗುವ ಪ್ಲ್ಯಾನ್ ಇದ್ರೆ ಸ್ವಲ್ಪ ಎಚ್ಚರ. ಯಾಕಂದ್ರೆ ಇವತ್ತು ಸಂಜೆಯಿಂದಲೇ ಕರುನಾಡಿಗೆ ಕರುನಾಡೇ ಕಂಪ್ಲೀಟ್ ಬಂದ್​​​​ ಆಗಲಿದೆ. ಒಂದಲ್ಲ, ಎರಡಲ್ಲ ಸತತ 33 ಗಂಟೆಗಳ ಕಾಲ ಇಡೀ ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಲ್ಲಿರುತ್ತೆ. ಸೋಮವಾರ ಬೆಳಗ್ಗೆಯ ತನಕ ಯಾರೂ ಹೊರಗೆ ಹೆಜ್ಜೆ ಇಡಂಗಿಲ್ಲ. ಇವತ್ತು ರಾತ್ರಿಯಿಂದಲೇ ಲಾಕ್​ಡೌನ್ ಜಾರಿಗೆ ಬರಲಿದೆ.

ಇಂದು ಸಂಜೆಯಿಂದಲೇ ಕರ್ನಾಟಕ ಕಂಪ್ಲೀಟ್ ಲಾಕ್​..!
ಯೆಸ್, ಕರುನಾಡಲ್ಲಿ ಕೊರೊನಾ ದಾಪುಗಾಲಿಡುತ್ತಾ ಮುಂದೆ ಸಾಗಿದೆ. ಹಾಗಾಗಿ ರಾಜ್ಯದಲ್ಲಿ ರಣಕೇಕೆ ಹಾಕ್ತಿರೋ ಹೆಮ್ಮಾರಿಯ ಕಟ್ಟಿ ಹಾಕೋಕೆ ಸರ್ಕಾರ ಲಾಕ್​​ಡೌನ್ ಜಾರಿ ಮಾಡಿದೆ. ಇಂದು ಸಂಜೆಯಿಂದಲೇ ರಾಜ್ಯದ ಪ್ರತಿಯೊಂದು ಜಿಲ್ಲೆ, ನಗರ, ಹಳ್ಳಿ ಹಳ್ಳಿಯಲ್ಲೂ ಸೆಕ್ಷನ್ 144 ಜಾರಿಯಾಗಲಿದೆ. ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಕರುನಾಡು ಸಂಪೂರ್ಣ ಸ್ತಬ್ಧವಾಗಲಿದೆ

ಲಾಕ್​ಡೌನ್​ ವೇಳೆ ಏನು ಸಿಗಲ್ಲ..?
ಲಾಕ್​ಡೌನ್​ ಇವತ್ತು ರಾತ್ರಿಯಿಂದಲೇ ಜಾರಿಗೆ ಬರುತ್ತಿರೋದ್ರಿಂದ ಅತ್ಯಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗೆ ಬ್ರೇಕ್ ಬೀಳಲಿದೆ. ಹೀಗಾಗಿ ಈ ಕೆಳಗಿನ ಸೇವೆಗಳು ಲಭ್ಯವಿರೋದಿಲ್ಲ.
1.ಸರ್ಕಾರಿ ಬಸ್​​ಗಳು ರಸ್ತೆಗಿಳಿಯಲ್ಲ
2.ಆಟೋ, ಟ್ಯಾಕ್ಸಿ ಸೇವೆ ಇರಲ್ಲ
3. ಯಾವುದೇ ಅಂಗಡಿ ಮುಂಗಟ್ಟುಗಳು ಓಪನ್ ಆಗಲ್ಲ
4. ಶಾಪಿಂಗ್‌ ಮಾಲ್‌ಗಳು ಕಂಪ್ಲೀಟ್‌ ಕ್ಲೋಸ್‌
5. ಹೋಟೆಲ್​, ರೆಸ್ಟೋರೆಂಟ್​ ಮತ್ತು ಪಬ್​ ಮುಚ್ಚಿರಲಿವೆ
6. ಮಸೀದಿ, ಚರ್ಚ್​ ಮತ್ತು ದೇವಸ್ಥಾನಗಳನ್ನ ತೆರೆಯಲು ಅನುಮತಿ ಇಲ್ಲ
7. APMC ಮಾರುಕಟ್ಟೆಗಳು ಇಂದು ಸಂಜೆಯಿಂದಲೇ ಬಂದ್ ಆಗಲಿದೆ
8. ಬೀದಿಬದಿಯ ವ್ಯಾಪಾರಕ್ಕೂ ಅನುಮತಿ ಇಲ್ಲ
9. ಖಾಸಗಿ ವಾಹನ ಮತ್ತು ಬೈಕ್​​ಗಳಲ್ಲಿ ಯಾರೂ ಓಡಾಡುವಂತಿಲ್ಲ
10. ಅಂತರ್ ಜಿಲ್ಲೆ, ಅಂತರ್ ರಾಜ್ಯ ಪ್ರವಾಸಕ್ಕೆ ಅನುಮತಿಯಿಲ್ಲ
11. ವಾಕಿಂಗ್, ಪಾರ್ಕ್​​ನಲ್ಲಿ ವಿಹಾರದ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ

ಲಾಕ್​ಡೌನ್​ ವೇಳೆ ಏನು ಸಿಗುತ್ತೆ
ಲಾಕ್​ಡೌನ್​ ಕರ್ಫ್ಯೂ ವೇಳೆ ಖಡಕ್ ರೂಲ್ಸ್ ಜಾರಿಯಲ್ಲಿರುತ್ತೆ. ಹೀಗಾಗಿ, ಕೆಲವೊಂದು ಸೇವೆಗಳು ಮಾತ್ರ ಲಭ್ಯವಿರುತ್ತೆ.
1. ಹಾಲು, ಮೊಸರು, ತರಕಾರಿ, ಪೇಪರ್ ಎಂದಿನಂತೆ ಸಿಗಲಿದೆ
2. ದಿನಸಿ ವಸ್ತುಗಳು ಲಾಕ್​​ಡೌನ್​ ವೇಳೆಯೂ ಲಭ್ಯವಿರಲಿದೆ
3. ಔಷಧಿ ಅಂಗಡಿ, ಆ್ಯಂಬುಲೆನ್ಸ್, ವೈದ್ಯಕೀಯ ಸೇವೆ ಇರಲಿವೆ
4. ಡಾಕ್ಟರ್​​, ನರ್ಸ್​ ಹಾಗೂ ತುರ್ತು ವಾಹನ ಓಡಾಟಕ್ಕೆ ಮಾತ್ರ ಅವಕಾಶ

ಹಾಗಾಗಿ ಏನಾದ್ರೂ ಪ್ಲ್ಯಾನ್ ಇದ್ರೆ ಚೇಂಜ್ ಮಾಡ್ಕೊಳ್ಳಿ. ಇಂದು ಎಲ್ಲೆ ಇದ್ರೂ ಸಂಜೆಯೊಳಗೆ ಮನೆ ಸೇರಿಕೊಳ್ಳಿ. ಯಾಕಂದ್ರೆ ಇವತ್ತು ಸಂಜೆಯಿಂದಲೇ ಲಾಕ್​ಡೌನ್​ ಜಾರಿ.

Related Tags:

Related Posts :

Category:

error: Content is protected !!