Corona 2020: ಈ ವರ್ಷ ಶಾಲೆ ಇಲ್ಲ.. ಶಿಕ್ಷಣ ಸಚಿವ ಸುರೇಶ್ ಕುಮಾರ್​ ಘೋಷಣೆ

  • TV9 Web Team
  • Published On - 13:14 PM, 23 Nov 2020
ಸಚಿವ ಸುರೇಶ್​ ಕುಮಾರ್​

ಬೆಂಗಳೂರು: ಡಿಸೆಂಬರ್ ಅಂತ್ಯದವರೆಗೂ ಶಾಲೆ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು. ಡಿಸೆಂಬರ್​ನಲ್ಲಿ ಚಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್​ನಲ್ಲಿ ಶಾಲೆ, ಪಿಯು ಕಾಲೇಜು ಬೇಡ ಎಂದು ತಜ್ಞರು ಹೇಳಿದರು. ಹಾಗಾಗಿ, ಡಿಸೆಂಬರ್ 3ನೇ ವಾರದಲ್ಲಿ ಮತ್ತೆ ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸುರೇಶ್ ಕುಮಾರ್​ ಹೇಳಿದರು.

ಶಾಲೆ ಆರಂಭಿಸುವ ಬಗ್ಗೆ ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಗ್ರಾಮೀಣ ಭಾಗದಲ್ಲಿ ಆಗುವ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಯಿತು. ಶಿಕ್ಷಣ ಇಲಾಖೆ ಸಂಗ್ರಹಿಸಿದ್ದ ವರದಿಯನ್ನು ಸಿಎಂ BSYಗೆ ಸಲ್ಲಿಸಿದ್ದರು. ಡಾ.ಸುದರ್ಶನ್​ ನೇತೃತ್ವದ ತಾಂತ್ರಿಕ ಸಲಹಾ ಸಮಿತಿ ನೀಡಿದ್ದ ಅಭಿಪ್ರಾಯ ಬಗ್ಗೆ ಚರ್ಚೆ ನಡೆಯಿತು ಎಂದು ಸುರೇಶ್​ ಕುಮಾರ್​ ಹೇಳಿದರು.

ಡಿಸೆಂಬರ್​ನಲ್ಲಿ ಹೆಚ್ಚು ಚಳಿ‌ ಇರುತ್ತೆ. ಕೊರೊನಾ ಎರಡನೇ ಅಲೆಯ ಆತಂಕ‌ ಕೂಡಾ ಇದೆ. ಹಾಗಾಗಿ, 1ರಿಂದ 8ನೇ ತರಗತಿವರೆಗೆ ಈ ವರ್ಷ ಶಾಲೆ ಆರಂಭವಿಲ್ಲ ಎಂದು ಸುರೇಶ್​ ಕುಮಾರ್​ ಹೇಳಿದರು. ಜೊತೆಗೆ, ಡಿಸೆಂಬರ್​ನಲ್ಲಿ ಪಿಯು ಕಾಲೇಜು ತೆರೆಯುವುದಿಲ್ಲ ಎಂದು ಸಹ ಹೇಳಿದರು. ಚಂದನ ವಾಹಿನಿಯಲ್ಲಿ ಸಂವೇದಾ ತರಗತಿಗಳು ನಡೆಯಲಿವೆ. ಚಂದನ ವಾಹಿನಿಯಲ್ಲಿ ಇಂದಿನಿಂದ ಸಂವೇದಾ ಟಿವಿ ಪಾಠ ನಡೆಯಲಿದೆ ಎಂದೂ ಸಹ ಮಾಹಿತಿ ನೀಡಿದರು.

SSLC, ದ್ವಿತೀಯ PU ಪರೀಕ್ಷೆ ಯಾವಾಗ ಗೊತ್ತಾ?

‘ಡಿಸೆಂಬರ್​ನಲ್ಲಿ ಶಾಲೆ, ಪಿಯು ಕಾಲೇಜು ತೆರೆಯುವುದಿಲ್ಲ’
ಈ ನಡುವೆ, 1ನೇ ತರಗತಿಯಿಂದ ದ್ವಿತೀಯ PUವರೆಗೆ ಕಾಲೇಜು ತೆರೆಯಲ್ಲ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ ಕೊಟ್ಟರು. ಡಿಸೆಂಬರ್​ನಲ್ಲಿ ಶಾಲೆ, ಪಿಯು ಕಾಲೇಜು ತೆರೆಯುವುದಿಲ್ಲ ಎಂದು ಹೇಳಿದರು.