ನನ್ನ ಮನೆ ಸಾಲದ ಕಂತುಗಳನ್ನು ಸುಶಾಂತ್ ಕಟ್ಟಿಲ್ಲ, ನಾನೇ ಕಟ್ತಿರೋದು: ಅಂಕಿತಾ ಲೊಖಂಡೆ

ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ ಅವರ ಮಾಜಿ ಪ್ರೇಯಸಿ ಹಾಗೂ ನಟಿ ಅಂಕಿತಾ ಲೊಖಂಡೆ ತನ್ನ ಮನೆಯ ಕಂತುಗಳನ್ನು ಸುಶಾಂತ್ ಕಟ್ಟುತ್ತಿರಲಿಲ್ಲ ಅಂತ ಸಾಬೀತುಗೊಳಿಸಲು ತನ್ನ ಬ್ಯಾಂಕ್ ಸ್ಟೇಟ್​ಮೆಂಟ್​ಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಂಡಿದ್ದಾರೆ.

ಬ್ಯಾಂಕ್ ಸ್ಟೇಟ್​ಮೆಂಟ್​ಗಳ ಫೋಟೊಕಾಪಿಗಳೊಂದಿಗೆ ಟ್ವೀಟ್ ಸಹ ಮಾಡಿರುವ ಅಂಕಿತಾ, ತನ್ನ ಮನೆಯ ಕಂತುಗಳ ಬಗ್ಗೆ ಎದ್ದಿರುವ ವಿವಾದವನ್ನು ಶಾಶ್ವತವಾಗಿ ಕೊನೆಗೊಳಿಸಲು ಕಂತಿನ ವಿವರಗಳನ್ನು ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಎಲ್ಲಾ ಊಹಾಪೋಹಗಳಿಗೆ ಮುಕ್ತಿ ಹಾಡಲು ನಿರ್ಧರಿಸಿದ್ದೇನೆ. ವಿಷಯವನ್ನು ಅತ್ಯಂತ ಪಾರದರ್ಶಕವಾಗಿಡಲು ಬಯಸುತ್ತೇನೆ. ನನ್ನ ಫ್ಲ್ಯಾಟಿನ ನೋಂದಣಿ ಪತ್ರ, ಮತ್ತು ಅದಕ್ಕೆ ಸಂಬಂಧಿಸಿದ ಬ್ಯಾಂಕ್ ಕಂತುಗಳು ಪ್ರತಿ ತಿಂಗಳು ನನ್ನ ಖಾತೆಯ ಮೂಲಕ ಪಾವತಿಯಾಗಿರುವುದನ್ನು ಸೂಚಿಸುವ ಸ್ಟೇಟ್​ಮೆಂಟ್​ಗಳು ಇಲ್ಲಿವೆ. ಇದಕ್ಕಿಂತ ಹೆಚ್ಚು ನಾನೇನೂ ಹೇಳಬಯಸುವುದಿಲ್ಲ” ಅಂತ ಅಂಕಿತಾ ಹೇಳಿದ್ದಾರೆ.

ಸುಶಾಂತ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ ಡಿ) ಶುಕ್ರವಾರದಂದು ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ, ಮುಂಬೈನ ಮಲಾಡ್ ಪ್ರದೇಶದಲ್ಲಿರುವ ಅಂಕಿತಾ ಲೊಖಂಡೆಯವರ ರೂ 4.5 ಕೋಟಿ ಮೌಲ್ಯದ ಫ್ಲ್ಯಾಟಿನ ಕಂತುಗಳು ಸುಶಾಂತ್ ಸಿಂಗ್ ರಜಪೂತ ಅವರ ಬ್ಯಾಂಕ್ ಖಾತೆಯಿಂದ ಪಾವತಿಯಾಗಿವೆ ಎಂದಿತ್ತು.

ಇ ಡಿ ಹೇಳಿಕೆಯನ್ನು ಸಾರಾಸಗಟು ತಳ್ಳಿಹಾಕಿರುವ ಅಂಕಿತಾ ತಾನು ಕೊಂಡ ಫ್ಲ್ಯಾಟಿನ ಮೌಲ್ಯ ಕೇವಲ ರೂ 1.35 ಕೋಟಿ ಮಾತ್ರ ಎಂದು ಹೇಳಿದ್ದಲ್ಲದೆ ಅದನ್ನು ಸಾಬೀತುಪಡಿಸಲು ನೋಂದಣಿ ಪತ್ರದ ಪ್ರತಿಯನ್ನು ಸಹ ಶೇರ್ ಮಾಡಿದ್ದಾರೆ.

Related Tags:

Related Posts :

Category: