ಸೋಂಕಿತನ ತಾಯಿಗೆ ಇದೆಂಥಾ ದು:ಸ್ಥಿತಿ, 6 ತಾಸು ಕಳೆದ್ರೂ ನೆರವೇರಿಲ್ಲ ಅಂತ್ಯಕ್ರಿಯೆ

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಿರೇನಗನೂರು ಗ್ರಾಮದಲ್ಲಿ ಅನಾರೋಗ್ಯದಿಂದ ವೃದ್ಧೆಯೊಬ್ಬರು ಸಾವನ್ನಪ್ಪಿದ್ದು ಯಾರು ಕೂಡ ಅವರ ಅಂತ್ಯಕ್ರಿಯೆ ಮಾಡಿಲ್ಲ. ಏಕೆಂದರೆ ಮೃತ ವೃದ್ಧೆಯ ಮಗ ಕೊರೊನಾ ಸೋಂಕಿತನಾಗಿದ್ಧಾನೆ. ಈ ಕಾರಣದಿಂದಾಗಿ ವೃದ್ಧೆ ಸಾವನ್ನಪ್ಪಿ 6 ಗಂಟೆಯಾಗಿದ್ದರು ಯಾರೊಬ್ಬರು ಅಂತ್ಯಕ್ರಿಯೆ ಮಾಡಲು ಮುಂದಾಗದ ಮನಕಲುಕುವ ಘಟನೆಯೊಂದು ನಡೆದಿದೆ.

ಹೃದಯ ಸಂಬಂಧಿ ಕಾಯಿಲೆ ಇಂದ ಬಳಲುತಿದ್ದ ವೃದ್ದೆ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಮೃತ ವೃದ್ದೆಯ ಮಗನಿಗ ಕೊರೊನಾ ಸೋಂಕು ದೃಢ ಹಿನ್ನೆಲೆಯಲ್ಲಿ ಆತನನ್ನು ರಾಯಚೂರು ಒಪೆಕ್ ಆಸ್ಪತ್ರೆಯಲ್ಲಿ ಐಸೋಲೆಷನ್ ಮಾಡಲಾಗಿದೆ. ಸೋಂಕಿತನ ಮನೆ ಎನ್ನುವ ಕಾರಣಕ್ಕೆ ಮನೆಯನ್ನು ಸೀಲ್​ಡೌನ್ ಮಾಡಲಾಗಿದ್ದು, ಯಾರೊಬ್ಬರು ಶವ ಸಂಸ್ಕಾರಕ್ಕೆ ಮುಂದಾಗಿಲ್ಲ.


ಕಳೆದ ನಾಲ್ಕು ತಾಸುಗಳಿಂದ ವೃದ್ದೆಯ ಶವ ಅನಾಥವಾಗಿ ಬಿದ್ದಿದ್ದು, ಶವ ಸಂಸ್ಕಾರ ಮಾಡಲು ಯಾವ ಸಂಬಂಧಿಕರಾಗಲಿ ಹಾಗೂ ಅಧಿಕಾರಿಗಳಾಗಿ ಮುಂದೆ ಬಂದಿಲ್ಲ. ಹೀಗಾಗಿ ಗ್ರಾಮಸ್ಥರೆಲ್ಲ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಗ್ರಾಮಸ್ಥರು ನೀವೇ ಶವ ಸಂಸ್ಕಾರ ಮಾಡಿ ಅಥವಾ ಸಂಸ್ಕಾರ ಮಾಡಲು ನಮಗಾದರು ಅವಕಾಶ ಮಾಡಿಕೊಡಿ ಎಂದು ಅಧಿಕಾರಿಗಳೊಂದಿಗೆ ಮನವಿ ಮಾಡಿಕೊಂಡಿದ್ದಾರೆ.

Related Tags:

Related Posts :

Category:

error: Content is protected !!