ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯ ಉದ್ದೇಶವೇನು? ರೈತರ ಬಗ್ಗೆ ಕೇಂದ್ರ ಸರ್ಕಾರದ ಅಜೆಂಡಾ ಏನು? ಮತ್ತು ರೈತರ ಹೆಸರಿನಲ್ಲಿ ಚಳವಳಿಗಾರರು ನಡೆಸುತ್ತಿರುವ ಪ್ರತಿಭಟನೆಯ ಉದ್ದೇಶವೇನು? ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ...
‘ದೃಢಕಾಯದ ಹುರಿಮೀಸೆಯ ರೈತರು ಹೊಲದಲ್ಲಿ ಕಡಲೆಯೋ, ಜೋಳವೋ, ಸೂರ್ಯಕಾಂತಿಯೋ ಬಿತ್ತಿ, ನಮಗಿಂತಿಷ್ಟು ಸಾಲುಗಳೆಂದು ಎಣಿಸಿ ಕೊಡುತ್ತಿದ್ದರು. ಕಳೆ ತೆಗೆಯುವುದರಿಂದ ಹಿಡಿದು, ಕೀಟನಾಶಕ, ರೋಗನಾಶಕ ಸಿಂಪಡಿಸಿ, ಬೆಳೆಕೊಯ್ದು ರಾಶಿ ಮಾಡುವವರೆಗೂ ನಮ್ಮದೇ ಜವಾಬ್ದಾರಿ. ಇದರಿಂದಾಗಿ ಕೇವಲ ...
‘ಕನಕದಾಸರು ಹೇಳಿ ಕೇಳಿ ಯೋಧರು. ಯುದ್ಧಭೂಮಿಯ ಚಿತ್ರಣ ಅವರಿಗೆ ಹೊಸದಲ್ಲ. ಆ ಹೊತ್ತಿನ ಸೈನಿಕರ ಸಂಘರ್ಷಗಳನ್ನೂ ಸೇನೆಯ ಶಿಬಿರಗಳ ವಿವರಗಳೂ ರಾಮಧಾನ್ಯಚರಿತೆಯಲ್ಲಿ ಕಂಡುಬರುತ್ತವೆ. ಪುರಂದರದಾಸರಾಗಲಿ, ಕನಕದಾಸರಾಗಲಿ, ಕಬೀರ, ನಾನಕರಾಗಲಿ ಭಕ್ತಿಸಾಹಿತ್ಯ ಮೂಲಕ ಮನುಷ್ಯನ ಆಂತರಿಕ ...
ಕಲಾವಿದನಿಗೆ ಹಾಳು ಗೋಡೆ ಸಿಕ್ಕರೂ ಹೇಗೆ ಕಲ್ಪನೆಯ ಗರಿಗೆದರುತ್ತದೆಯೋ ಹಾಗೆ ಹಿಡಿ ಮಣ್ಣು ತುಂಡು ಭೂಮಿ ಸಿಕ್ಕರೂ ಸಾಕು ರೈತ ಹಿಗ್ಗುತ್ತಾನೆ. ಯಾವ ಗುಡುಗಪ್ಪ, ಸಿಡಿಲಪ್ಪನಿಗೂ ಹೆದರದೆ ದಿನದಿಂದ ದಿನಕ್ಕೆ ಉತ್ಸಾಹ ಹೆಚ್ಚಿಸಿಕೊಳ್ಳುತ್ತಲೇ ಇರುವ ...
‘ಶಾಂತಿನಿಕೇತನದ ಆಧುನಿಕ ಕಲೆಯ ಆಗುಹೋಗುಗಳನ್ನೂ ಸಹ, ಕಾಲು ಶತಮಾನದ ನಂತರ ಮುಂಬಯಿಯಲ್ಲಿ ಉದಯಿಸಿದ ಪ್ರಗತಿಪರ ಕಲಾಗುಂಪು ಗ್ರಾಮೀಣ ಕಲೆ ಎಂದೇ ಭಾವಿಸಿತ್ತು. ರೈತರ ಹೋರಾಟಗಳಿಗೆ, ಭಾವನೆಗಳಿಗೆ ಕಲಾತ್ಮಕವಾಗಿ ಸ್ಪಂದಿಸಿದವರು ಬಹುಮುಖ್ಯ ಸಮಸ್ಯೆಯನ್ನು ವಿಮರ್ಶಕರಿಂದ ಎದುರಿಸಬೇಕಾಯಿತು; ...
‘ರೈತಾಪಿ ಜೀವನವು ಭಾರತದಂತಹ ದೇಶದಲ್ಲಿ ಸ್ವತಃ ಒಂದು ಮೌನ ಪ್ರತಿಭಟನೆ. ಬೇಸಾಯದ ಬದುಕಿಗಿಂತ ಮೊದಲು ಅಂದರೆ ಸುಮಾರು ಹತ್ತು ಸಾವಿರ ವರ್ಷಗಳಿಗೂ ಮುನ್ನ ಇದ್ದ ಅಲೆಮಾರಿ ಬದುಕನ್ನು ನೆನಪಿಸುವ, ಪ್ರಸ್ತುತ ರೈತ ಪ್ರತಿಭಟನೆಗಳನ್ನು ಹತ್ತಿಕ್ಕುವ, ...
’ಹಸಿರು ಕ್ರಾಂತಿಯಿಂದ ಆಹಾರೋತ್ಪಾದನೆಯಲ್ಲಿ ಗಣನೀಯ ಹೆಚ್ಚಳವಾಗಿ ಆಹಾರ ಭದ್ರತೆ ಸಾಧ್ಯವಾಯಿತು. ಜಾಗತೀಕರಣದ ಮುಖಾಂತರ ಸಮಾಜೋ ಆರ್ಥಿಕ ಸ್ಥಿತ್ಯಂತರವಾಯಿತು. ಜೀವ ವೈವಿಧ್ಯತೆ ತಗ್ಗಿ ಪರಿಸರ ನಾಶಕ್ಕೆ ಎಡೆಯಾಯಿತು. ಕೃಷಿ ಅಭಿವೃದ್ದಿಯಲ್ಲಿನ ಅಸಮತೋಲನದಿಂದ ಎಲ್ಲ ಪ್ರಮಾದಗಳು ‘ಉಳುವ ...
'ಕುವೆಂಪು ಅವರ ಕಾದಂಬರಿಗಳಲ್ಲಿ ಪಲಾಯನ ಕೇವಲ ಪಾರಾಗುವ ಪ್ರಯತ್ನ ಮಾತ್ರ ಆಗಿರದೆ ಒಂದು ರೀತಿಯಲ್ಲಿ ಪ್ರತಿಭಟನೆ ಕೂಡ ಆಗಿರುವುದು ಅವರು, ಕೃಷಿಕರ ಬದುಕಿನ ಸಂಕೀರ್ಣತೆಯನ್ನು ಅರಿತಿದ್ದಾರೆ ಎನ್ನುವುದಕ್ಕೆ ನಿದರ್ಶನ. ಇನ್ನು ಕಾರಂತರ ಕಾದಂಬರಿಗಳಲ್ಲಿ ಆದರ್ಶದ ...
ಕೃಷಿ ಕಾಯ್ದೆಗಳ ಕುರಿತು ಮುಕ್ತ ಚರ್ಚೆಗೆ ಸರ್ಕಾರ ಸಿದ್ಧವಿದೆ. ಹೀಗಾಗಿ ವಿರೋಧಿಸುವವರ ಜತೆ, ಬೆಂಬಲಿಸುವವರಿಗೂ ಸಮಾನ ಅವಕಾಶ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ. ...
ಕನಿಷ್ಠ ಬೆಂಬಲ ಬೆಲೆ ನೀಡುವ ವಿಚಾರದಲ್ಲಿ ಸರ್ಕಾರ ಕೆಲ ಬೇಡಿಕೆಯನ್ನು ರೈತರ ಮುಂದಿಟ್ಟಿತ್ತು ಎನ್ನಲಾಗಿದೆ. ಆದರೆ, ಈ ಮೂರು ಕೃಷಿ ಕಾಯ್ದೆಯನ್ನುತೆಗೆದು ಹಾಕುವವರೆಗೆ ನಾವು ಪಟ್ಟು ಬಿಡುವುದಿಲ್ಲ ಎನ್ನುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ. ...