ಕಾಳಿ ಚರಣ್ ವಿರುದ್ಧ ಹಲವರು ದೂರು ನೀಡಿದ್ದರು. ಆದರೆ ಅವರನ್ನು ಬಂಧಿಸಿದ ರೀತಿಯನ್ನು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಟೀಕಿಸಿದ್ದರು. ಛತ್ತೀಸ್ಗಢ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ...
ಈ ಮಧ್ಯೆ ಕಾಳಿ ಚರಣ್ ಮಹಾರಾಜ್ ಪರ ವಕೀಲ ಅಮೋಲ್ ಡಂಗೆ ಪುಣೆಯ ನ್ಯಾಯಾಲಯವೊಂದರಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ವಿರೋಧಿಸಿದ್ದರು. ...
ಕಾಳಿ ಚರಣ್ ಬಿಡುಗಡೆಗಾಗಿ ಹಿಂದುಪರ ಸಂಘಟನೆಗಳು ಆಗ್ರಹಿಸುತ್ತಿವೆ. ನಿನ್ನೆ ದೆಹಲಿಯ ಟ್ಯಾಂಕ್ ಪಾರ್ಕ್ ಬಳಿಯಿರುವ ಡೆಪ್ಯೂಟಿ ಕಮಿಷನರ್ ನಿವಾಸದ ಬಳಿ ಸೇರಿದ ಬಲಪಂಥೀಯರು, ಮಿನಿ ಸೆಕ್ರೆಟರಿಯೇಟ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ...