ಒಲಂಪಿಕ್ಸ್ ಸೇರಿದಂತೆ ಹಲವಾರು ಬೃಹತ್ ಪ್ರಮಾಣದ ಕ್ರೀಡಾಕೂಟಗಳು ರದ್ದಾಗಿರುವ ಇಲ್ಲವೇ ಮುಂದೂಡಲ್ಪಟ್ಟಿರುವ ಹಿನ್ನೆಲೆಯಲ್ಲಿ ಇಂದಿನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಆರಂಭವಾಗಲಿರುವ ಇಂಡಿಯನ್ ಪ್ರಿಮೀಯರ್ ಲೀಗ್ನ 13 ನೇ ಆವೃತಿಯು ಕ್ರೀಡಾಸಕ್ತರಲ್ಲಿ ನಿಸ್ಸಂದೆಹವಾಗಿ ರೋಮಾಂಚನವನ್ನುಂಟು ಮಾಡಿದೆ. ...