ಪುರಾತನ ಪಾತಕಿ ಮತ್ತೆ ಜೈಲೊಳಕ್ಕೆ ಬತ್ತೀನಿ ಅಂದ್ರೂ, ಪೊಲೀಸ್ರು ಬಿಟ್ಕೊಳ್ಳಲಿಲ್ಲ! ಯಾಕೆ?

ಆ ದಿನಗಳಲ್ಲಿ ಕುಖ್ಯಾತಿಯ ತುದಿಯೇರಿದ್ದ ಗ್ಯಾಂಗ್​ಸ್ಟರ್ ಅವ. ಪೆರೋಲ್ ಮೇಲೆ ಹೊರಕ್ಕೆ ಬಂದಿದ್ದ. ಆದ್ರೆ ಪೆರೋಲ್ ಮುಗಿದಿದೆ. ಶರಣಾಗಿ ಒಳಗೆ ಬರುವೆ, ಬಿಟ್ಕೊಳ್ಳಿ ಅಂತಾ ಸೀದಾ ಜೈಲಿನ ಮುಂದೆ ಬಂದು ನಿಂತ. ಆದ್ರೆ ಜೈಲೊಳಕ್ಕೆ ಬತ್ತೀನಿ ಅಂತಾ ಕೈಮುಗಿದು ನಿಂತಿದ್ದ ಆ ಡಾನ್​ನನ್ನು ಪೊಲೀಸರು ಬಿಲ್ಕುಲ್ ಒಳಕ್ಕೆ ಬಿಟ್ಕೊಳ್ಳಲಿಲ್ಲ!

ತಳೋಜಾ ಕಾರಾಗೃಹದ ಮುಂದೆ ದೊಡ್ಡ ಹೈಡ್ರಾಮಾನೇ ನಡೆಯಿತು!
ಇದೆಲ್ಲ ನಡೆದಿದ್ದು ಮೊನ್ನೆ.. ನವಿ ಮುಂಬೈನಲ್ಲಿರುವ ತಳೋಜಾ ಮಧ್ಯವರ್ತಿ ಕಾರಾಗೃಹದಲ್ಲಿ. ಪುರಾತನ ಪಾತಕಿ ಅರುಣ್ ಗಾವಳಿ ತನ್ನ ವಕೀಲರ ಜೊತೆ ತಳೋಜಾ ಜೈಲಿಗೆ ಆಗಮಿಸಿದ್ದ. ಆದ್ರೆ ಕೋಟೆ ಕಟ್ಟಿಕೊಂಡ ಜೈಲು ಪೊಲೀಸರು ಆತನನ್ನು ಒಳಕ್ಕೆ ಬರಲೇಬೇಡ ಎಂದು ದುಂಬಾಲುಬಿದ್ದರು. ಬಟ್ ವೈ ಎಂದು ವಕೀಲ ಮೀರ್ ಅಲಿ ಕೇಳಿದ್ದಕ್ಕೆ ಕೊರೊನಾ ರಾಕ್ಷಸನ ಹಾವಳಿ. ಅದಕ್ಕೇ ಗಾವಳಿ ಒಳಕ್ಕೆ ಬರೋದು ಬೇಡ, ವಾಪಸ್​ ಕರಕೊಂಡು ಹೋಗು ಅಂದಿದ್ದಾರೆ.

ಮತ್ತೊಂದು ಮೂಲದ ಪ್ರಕಾರ ಗಾವಳಿಯ ಶತ್ರುಗಳೆನಿಸಿರುವ ಅಬುಸಲೇಂ ಮತ್ತು ಅಶ್ವಿನ್ ನಾಯ್ಕ್ ಎಂಬ ಇನ್ನಿಬ್ಬರು ಡಾನ್​ಗಳು ಈಗಾಗಲೇ ತಳೋಜಾ ಕಾರಾಗೃಹದಲ್ಲಿದ್ದಾರೆ. ಹಾಗಾಗಿ ಗಾವಳಿಗೆ ಜೀವ ಬೆದರಿಕೆ ಎದುರಾಗುತ್ತದೆ ಎಂದು ಎಣಿಸಿದ ಪೊಲೀಸರು ಗಾವಳಿಗೆ ಬರುವುದು ಬೇಡ ಎಂದಿರುವುದಾಗಿ ತಿಳಿದುಬಂದಿದೆ.

ಈ ಮಧ್ಯೆ ಬಾಂಬೆ ಹೈಕೋರ್ಟ್​ನ ನಾಗಪುರ ಪೀಠವು ಗಾವಳಿಗೆ ಪೆರೋಲ್ ಅವಧಿಯನ್ನು ಇನ್ನೂ 5 ಕ್ಕೆ ವಿಸ್ತರಿಸುವ ಮೂಲಕ ಪೊಲೀಸರ ಆತಂಕವನ್ನು ದೂರ ಮಾಡಿದೆ. ಅಂಡರ್​ವರ್ಲ್ಡ್​ ಡಾನ್ ಅರುಣ್ ಗಾವಳಿ ಶಿವಸೇನೆಯ ಕಾರ್ಪೊರೆಟರ್​ನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.

Related Posts :

Category:

error: Content is protected !!

This website uses cookies to ensure you get the best experience on our website. Learn more