ತ.ನಾಡು ಪೊಲೀಸರಿಗೆ ಏನಾಗಿದೆ? ಪೋಷಕರ ಎದುರೇ ಬಾಲಕನ ಥಳಿಸಿದ ಹಿರಿಯ ಅಧಿಕಾರಿ, ಬಿತ್ತು ಕೇಸು

ಚೆನ್ನೈ: ಇತ್ತೀಚೆಗೆ ಕಸ್ಟೋಡಿಯಲ್​ ಡೆತ್​ ಕೇಸ್​ನಿಂದ ಪೀಕಲಾಟಕ್ಕೆ ಇಟ್ಟುಕೊಂಡಿರುವ ತಮಿಳುನಾಡು ಪೊಲೀಸ್​ ಮಂದಿ ಇದೀಗ ಮತ್ತೊಂದು ಕೇಸ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ತಾಜಾ ಪ್ರಕರಣದಲ್ಲಿ ಅಮಾಯಕ ಪೋಷಕರ ಎದುರೇ ಅದೂ ನಡು ರಸ್ತೆಯಲ್ಲಿ ಮೊದಲು ಬಾಲಕನನ್ನು, ಬಳಿಕ ಆತನ ಜೊತೆಗಿದ್ದ ಪೋಷಕರನ್ನೂ ಗುಂಪುಗೂಡಿಕೊಂಡು ಥಳಿಸಿದ್ದಾರೆ. ಇದರ ವಿರುದ್ಧ ಸ್ವಯಂ ದೂರು ದಾಖಲಿಸಿಕೊಂಡಿರುವ ಮಾನವ ಹಕ್ಕು ಆಯೋಗ, ಆ ಪೊಲೀಸರ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ಆದೇಶಿಸಿದೆ.

ಕೊಯಮತ್ತೂರಿನ ರಥಿನಾಪುರಿಯಲ್ಲಿ ಜೂನ್ 17ರಂದು ಬಾಲಕನ ಮೇಲೆ ಹಲ್ಲೆ ನಡೆದಿದೆ. ರಾತ್ರಿ ಸುಮಾರು 9 ಗಂಟೆ ವೇಳೆಗೆ ಸಬ್​ಇನ್ಸ್​ಪೆಕ್ಟರ್ ಚೆಲ್ಲಮಣಿ ಮತ್ತು ಇಬ್ಬರು ಕಾನ್​ಸ್ಟೇಬಲ್​ಗಳು ಸಿಟಿ ರೌಂಡ್ಸ್​ ಬಂದಿದ್ದಾರೆ. ಈ ವೇಳೆ ಟಿಫನ್ ಸೆಂಟರ್​​ ಓಪನ್​ ಆಗಿರುವುದನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಅಂಗಡಿಯನ್ನು ಮುಚ್ಚಲು ಸ್ವಲ್ಪ ಸಮಯ ಕೊಡಿ ಎಂದು ಪೋಷಕರು ತಿಳಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪೊಲೀಸರು ಗುಂಪು ಸೇರಿಕೊಂಡು ಬಾಲಕ ಮತ್ತು ಪೋಷಕರ ಮೇಲೆ ಥಳಿಸಿದ್ದಾರೆ.

ಬಳಿಕ ಪೊಲೀಸ್ ವಾಹನದಲ್ಲಿ ಹುಡುಗ ಮತ್ತು ಆತನ ತಂದೆಯನ್ನು ಪೊಲೀಸರು ಕರೆದೊಯ್ದಿದ್ದಾರೆ. ಇದರ ವಿರುದ್ಧ ಮಾನವ ಹಕ್ಕು ಆಯೋಗ ಸ್ವಯಂ ದೂರು ದಾಖಲಿಸಿಕೊಂಡಿದೆ. ಹಾಗೂ ಪೊಲೀಸರ ವಿರುದ್ಧ ಕೇಸು ದಾಖಲಿಸಿ, ತನಿಖೆ ಆದೇಶಿಸಿದೆ.

Related Tags:

Related Posts :

Category:

error: Content is protected !!