ನ್ಯೂಜಿಲೆಂಡ್​ಗೆ ತಿರುಗೇಟು ನೀಡಲು ಟೀಂ ಇಂಡಿಯಾಗೆ ಟರ್ಬೋ ಟಚ್!

ವೆಲ್ಲಿಂಗ್ಟನ್​: ಮುಳ್ಳನ್ನ ಮುಳ್ಳಿನಿಂದಲೇ ತಗೀಬೇಕು. ಏಟಿಗೆ ಎದಿರೇಟು ಕೊಡಲೇಬೇಕು ಅಂತಾ ಕೊಹ್ಲಿ ಪಡೆ ನಿರ್ಧರಿಸಿಕೊಂಡಿದೆ. ಹೀಗಾಗಿ ಇಂದಿನಿಂದ ಆರಂಭವಾಗಿರೋ 2ನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್​ಗೆ ತಿರುಗೇಟು ಕೊಡೋದಕ್ಕೆ ಕೊಹ್ಲಿ ಪಡೆ ಇದೇ ಸೂತ್ರವನ್ನ ಅಳವಡಿಸಿಕೊಂಡಿದೆ. ಆ ಸೂತ್ರವೇ 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ನಡೆಸಿದ ಟರ್ಬೋ ಟಚ್ ಅನ್ನೋ ಹೊಸ ಕಸರತ್ತು.

ಟೀಮ್ ಇಂಡಿಯಾ ಆಟಗಾರರು ಮಾಡ್ತೀರೋದು ಟರ್ಬೋ ಟಚ್ ಟ್ರೈನಿಂಗ್. ಆ ಕಡೆ ಈ ಕಡೆ ಬಾಲ್ ಎಸೆಯುತ್ತಿರೋದನ್ನ ನೋಡಿದ್ರೆ, ನಿಮಗೆ ಇದು ಏನು ಅಂತಾ ಅರ್ಥವಾಗೋದಿಲ್ಲ. ಬನ್ನಿ ಹಾಗಾದ್ರೆ ಕೊಹ್ಲಿ ಪಡೆ ಸಮರಾಭ್ಯಾಸದಲ್ಲಿ ನಡೆಸಿದ ಈ ಟರ್ಬೋ ಟಚ್ ತರಬೇತಿಯ ಸ್ಪೆಷಾಲಿಟಿ ಏನು? ಇದನ್ನ ಇದೆ ಮೊದಲ ಬಾರಿಗೆ ಕೊಹ್ಲಿ ಸೈನ್ಯ ಪ್ರಾಕ್ಟೀಸ್ ಮಾಡಿದ್ದೇಕೆ ಅನ್ನೋದನ್ನ ಡಿಟೇಲ್ ಆಗಿ ತೋರಿಸ್ತೀವಿ.

ಏನಿದು ಟರ್ಬೋ ಟಚ್.. ಏನಿದರ ವಿಶೇಷತೆ?
ಟರ್ಬೋ ಟಚ್ ಅನ್ನೋದು ರಗ್ಬಿ ಆಟಗಾರರು ನಡೆಸೋ ಫಿಟ್ನೆಸ್ ಟ್ರೈನಿಂಗ್. ಈ ಡ್ರಿಲ್​ನಿಂದ ಆಟಗಾರರಿಗೆ ಕಾನ್ಸಂಟ್ರೇಷನ್ ಮತ್ತು ಫಿಜಿಕಲಿ ಫಿಟ್ ಆಗೋದಕ್ಕೆ ನೆರವಾಗುತ್ತದೆ. ಹೀಗಾಗೇ ರಗ್ಬಿ ಆಟಗಾರರು ತಾವು ಫಿಟ್ ಆಗಿರೋದಕ್ಕೆ ಇದೇ ಟರ್ಬೊ ಟಚ್ ಡ್ರಿಲ್ ಟ್ರೈನಿಂಗ್ ಮಾಡ್ತಾರೆ.

ಟರ್ಬೋ ಟಚ್ ಟ್ರೈನಿಂಗ್​ನ ಜನ್ಮದಾತ ದೇಶ ನ್ಯೂಜಿಲೆಂಡ್:
ಹಾಗಾದ್ರೆ ಈ ಟರ್ಬೋ ಟಚ್ ಟ್ರೈನಿಂಗ್ ಡ್ರಿಲ್ ಹೇಗಿರುತ್ತೆ ಅನ್ನೋದನ್ನು ತೋರಿಸ್ತೀವಿ ನೋಡಿ. ಒಂದೇ ತಂಡದ ಆಟಗಾರರನ್ನ ಎರಡು ಗುಂಪುಗಳನ್ನಾಗಿ ವಿಂಗಡಿಸಿ ಆಡಿಸಲಾಗುತ್ತೆ. ಟೆನಿಸ್ ಬಾಲ್ ಮಾದರಿಯಲ್ಲೇ ಸಾಫ್ಟ್ ಬಾಲ್ ಅನ್ನ ಇಲ್ಲಿ ಬಳಸಲಾಗುತ್ತೆ. ಎರಡು ಗುಂಪುಗಳಾಗಿ ಮಾಡಿರೋ ತಂಡದ ಪೈಕಿ, ಯಾವ ತಂಡದ ಆಟಗಾರರು ಹೆಚ್ಚಾಗಿ ಬಾಲ್ ಅನ್ನ ಟಚ್ ಮಾಡ್ತಾರೋ ಅವರು ಗೆಲುವು ದಾಖಲಿಸ್ತಾರೆ. ಇಂಟ್ರಸ್ಟಿಂಗ್ ವಿಷ್ಯ ಎನಂದ್ರೆ ಈ ಟರ್ಬೋ ಟಚ್ ಟ್ರೈನಿಂಗ್​ನ ಜನ್ಮದಾತ ದೇಶ ಇದೇ ನ್ಯೂಜಿಲೆಂಡ್.

ಇದೆ ಮೊದಲ ಬಾರಿಗೆ ಟೀಮ್ ಇಂಡಿಯಾದ ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಆಗಿರೋ ನಿಕ್ ವೆಬ್, ಟೀಮ್ ಇಂಡಿಯಾ ಆಟಗಾರಗೆ ಈ ತರಬೇತಿ ನೀಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಸೋಲಿನ ಹತಾಶೆಯಲ್ಲಿರೋ ಕೊಹ್ಲಿ ಪಡೆ ಈ ಟರ್ಬೋ ಟಚ್ ಟ್ರೈನಿಂಗ್ ಡ್ರಿಲ್ ಅನ್ನ ಅತ್ಯುತ್ಸಾಹದಿಂದ ಪ್ರಾಕ್ಟೀಸ್ ಮಾಡಿದೆ. ಎಲ್ರೂ ಬಾಲ್ ಹಿಡಿದು ಗೋಲ್ ಮಾಡೋಕೆ ಹೇಗೆ ಪೈಪೋಟಿಗೆ ಬಿದ್ದಿದ್ರು ನೋಡಿ.

ಇಂಟ್ರಸ್ಟಿಂಗ್ ವಿಷ್ಯ ಏನಂದ್ರೆ ಟೀಮ್ ಇಂಡಿಯಾಕ್ಕೆ ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಆಗಿರೋ ನಿಕ್ ವೆಬ್ ನ್ಯೂಜಿಲೆಂಡ್​ನವರೇ. ಹಾಗಿದ್ರೂ ನಿಕ್ ವೆಬ್ ಭಾರತೀಯ ಆಟಗಾರರ ಸಾಮರ್ಥ್ಯ ಹೆಚ್ಚಿಸೋದಕ್ಕಾಗಿ ತಮ್ಮದೇ ದೇಶ ಪರಿಚಯಿಸಿದ ಈ ಟರ್ಬೋ ಟಚ್ ಟ್ರೈನಿಂಗ್ ಅನ್ನ ಕೊಹ್ಲಿ ಪಡೆಯಿಂದ ಮಾಡಿಸಿದ್ದಾರೆ. ಇದಕ್ಕೆ ಕಾರಣ 2ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಸೈನ್ಯ ಹೊರ ಹುರುಪಿನಿಂದ ಹೋರಾಡಲಿ ಅಂತ.

ಒಟ್ನಲ್ಲಿ ಟರ್ಬೋ ಟಚ್​ನ ಎಫೆಕ್ಟ್ ಇವತ್ತಿನ ದಿನದಾಟದಲ್ಲೇ ಪರಿಪೂರ್ಣವಾಗಿ ಗೊತ್ತಾಗೋದಿಲ್ಲ. ಇನ್ನೂ ನಾಲ್ಕು ದಿನಗಳಲ್ಲಿ ಇದನ್ನ ಕೊಹ್ಲಿ ಸೈನ್ಯ, ಹೇಗೆ ಸದುಪಯೋಗ ಪಡಿಸಿಕೊಳ್ಳುತ್ತೆ ಅನ್ನೋದನ್ನ ಕಾದು ನೋಡ್ಬೇಕು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!