5G Auctions: ಇಂದಿನಿಂದ 5G ಸ್ಪೆಕ್ಟ್ರಮ್ ಹರಾಜು: ಅಖಾಡದಲ್ಲಿದೆ 4 ಕಂಪನಿಗಳು, ಇಲ್ಲಿದೆ ಎಲ್ಲ ಮಾಹಿತಿ

| Updated By: Vinay Bhat

Updated on: Jul 26, 2022 | 9:13 AM

5ಜಿ ಟೆಲಿಕಾಂ ಸ್ಪೆಕ್ಟ್ರಮ್ ಹರಾಜು (5G Spectrum auction) ಇಂದಿನಿಂದ ಆರಂಭವಾಗಲಿದೆ. ಜುಲೈ ಅಂತ್ಯದ ವೇಳೆಗೆ ಈ ಹರಾಜು ಪ್ರಕ್ರಿಯೆ ಮುಕ್ತಾಯಗೊಳ್ಳಲಿದ್ದು ಸೆಪ್ಟೆಂಬರ್ ವೇಳೆಗೆ ಜಾರಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ.

5G Auctions: ಇಂದಿನಿಂದ 5G ಸ್ಪೆಕ್ಟ್ರಮ್ ಹರಾಜು: ಅಖಾಡದಲ್ಲಿದೆ 4 ಕಂಪನಿಗಳು, ಇಲ್ಲಿದೆ ಎಲ್ಲ ಮಾಹಿತಿ
5ಜಿ ಸೇವೆ (ಪ್ರಾತಿನಿಧಿಕ ಚಿತ್ರ)
Follow us on

ಭಾರತದಲ್ಲಿ 5G ಯುಗ ಸದ್ಯದಲ್ಲೇ ಆರಂಭವಾಗುವುದರಲ್ಲಿದೆ. ಇದಕ್ಕಾಗಿ ಈಗಾಲೇ ಭಾರತದಲ್ಲಿ 5ಜಿ ಸ್ಮಾರ್ಟ್​​ಫೋನ್​ಗಳ (5G Smartphone) ಹಾವಳಿ ಕೂಡ ಹೆಚ್ಚಾಗುತ್ತಿದೆ. ಹೀಗಿರುವಾಗ 5ಜಿ ಟೆಲಿಕಾಂ ಸ್ಪೆಕ್ಟ್ರಮ್ ಹರಾಜು (5G Spectrum auction) ಇಂದಿನಿಂದ ಆರಂಭವಾಗಲಿದೆ. ದೊಡ್ಡ ದೊಡ್ಡ ಟೆಕ್ ಸಂಸ್ಥೆಗಳಿಂದ ಕ್ಯಾಪ್ಟಿವ್ 5G ನೆಟ್‌ವರ್ಕ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು ತನ್ನ ಒಪ್ಪಿಗೆಯನ್ನು ನೀಡಿತ್ತು. ಜುಲೈ ಅಂತ್ಯದ ವೇಳೆಗೆ ಈ ಹರಾಜು ಪ್ರಕ್ರಿಯೆ ಮುಕ್ತಾಯಗೊಳ್ಳಲಿದ್ದು ಸೆಪ್ಟೆಂಬರ್ ವೇಳೆಗೆ ಜಾರಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ. ಸ್ಪೆಕ್ಟ್ರಮ್ ಅನ್ನು 20 ವರ್ಷಗಳವರೆಗೆ ಗುತ್ತಿಗೆಗೆ ನಿಯೋಜಿಸಲಾಗುತ್ತದೆ. ಅದಾನಿ ಗ್ರೂಪ್ (ಗೌತಮ್ ಅದಾನಿ), ರಿಲಯನ್ಸ್ ಜಿಯೋ (ಮುಖೇಶ್ ಅಂಬಾನಿ), ಭಾರ್ತಿ ಏರ್‌ಟೆಲ್ (ಸುನೀಲ್ ಭಾರ್ತಿ ಮಿತ್ತಲ್) ಮತ್ತು ವೊಡಾಫೋನ್ ಐಡಿಯಾದಂತಹ (Vi) ಉದ್ಯಮ ದೈತ್ಯರು 5G ಟೆಲಿಕಾಂ ಸ್ಪೆಕ್ಟ್ರಮ್ ಹರಾಜಿನಲ್ಲಿ ಕಣದಲ್ಲಿದ್ದಾರೆ.

ಒಟ್ಟು 72 ಗಿಗಾಹರ್ಟ್ಜ್ ಸಾಮಾರ್ಥ್ಯದ ಸ್ಪೆಕ್ಟ್ರಮ್ 4.3 ಟ್ರಿಲಿಯನ್ ಕೋಟಿ ಮೌಲ್ಯದ ಮತ್ತು 20 ವರ್ಷಗಳ ಮಾನ್ಯತೆಯ ಅವಧಿಯೊಂದಿಗೆ ಹರಾಜಿನ ಸಮಯದಲ್ಲಿ ಮಾರಾಟವಾಗಲಿದೆ. 5 ಜಿ ತರಂಗಾಂತರ 4ಜಿಗಿಂತ 10 ಪಟ್ಟು ಹಾಗೂ 3ಜಿಗಿಂತ 30 ಪಟ್ಟು ವೇಗ ಹೊಂದಿದ್ದು, ಇದು ಮೊಬೈಲ್‌ ಇಂಟರ್‌ ನೆಟ್‌ ಬಳಕೆಯ ವೇಗದಲ್ಲಿ ಯಾವುದೇ ಅಡಚಣೆ ಅಥವಾ ನಿಧಾನ ಆಗುವುದಿಲ್ಲ ಎಂದು ಹೇಳಲಾಗಿದೆ.

ಇನ್ನು ಹರಾಜಿನಲ್ಲಿರುವ ನಾಲ್ಕು ಕಂಪನಿಗಳು ಒಟ್ಟಾಗಿ ₹21,800 ಕೋಟಿಯಷ್ಟು ಹಣದ ಠೇವಣಿಗಳನ್ನು ಸಲ್ಲಿಸಿವೆ ಎಂಬ ಮಾತಿದೆ. ಇದು ₹ 2.3 ಟ್ರಿಲಿಯನ್ (ಒಟ್ಟು ಮೊತ್ತದ 53%) ಮೌಲ್ಯದ ಸ್ಪೆಕ್ಟ್ರಮ್‌ಗೆ ಬಿಡ್ ಮಾಡಲು ಅವಕಾಶ ನೀಡುತ್ತದೆ. 5ಜಿ ತರಂಗಾಂತರ ಸುರಕ್ಷಿತ ಎಂದು ಹೇಳಲಾಗಿದ್ದು, ಅತ್ಯಂತ ವೇಗದ ಜೊತೆಗೆ ಹೊಸ ತಂತ್ರಜ್ಞಾನಗಳಿಗೆ ತೆರೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. 5ಜಿಯಲ್ಲಿ ಕೇವಲ 35 ಸೆಕೆಂಟ್​ಗಳಲ್ಲಿ ವಿಡಿಯೋ ಡೌನ್‌ ಲೋಡ್ ಆಗುತ್ತದೆ. 100 ಎಂಬಿಪಿಎಸ್ ವೇಗ ಹೊಂದಿರುತ್ತದೆ ಎನ್ನಲಾಗಿದೆ.

ಇದನ್ನೂ ಓದಿ
Gold Price Today: ಚಿನ್ನ ಖರೀದಿಗೆ ಇದು ಒಳ್ಳೆ ಸಮಯ; ಬೆಳ್ಳಿ ಬೆಲೆ 200 ರೂ. ಕುಸಿತ
Asian Economy: ಏಷ್ಯಾದ ಕೆಲವು ಆರ್ಥ ವ್ಯವಸ್ಥೆಗಳಿಗೆ ಹಿಂಜರಿತದ ಗಂಡಾಂತರ ಎದುರಿಗೇ ಇದೆ- ಸಮೀಕ್ಷೆಗಳ ಒಟ್ಟಾಭಿಪ್ರಾಯ!
ನೀವು ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದೀರಾ? ಚಿಂತಿಸಬೇಡಿ, ಇ-ಪ್ಯಾನ್ ಕಾರ್ಡ್ ಪಡೆಯಲು ಸುಲಭ ವಿಧಾನ ಇಲ್ಲಿದೆ
ಇನ್ನುಮುಂದೆ ಎಟಿಎಮ್​ನಲ್ಲಿ ಹಣ ವಿತ್​ಡ್ರಾ ಮಾಡಬೇಕಾದರೆ ಡೆಬಿಟ್ ಕಾರ್ಡ್​ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಫೋನ್ ಜೊತೆಗಿರಬೇಕು!

ಅಲ್ಲದೆ ಕಳೆದ ಕೆಲವು ವರ್ಷಗಳಿಂದ ಮೊಬೈಲ್ ಫೋನ್‌ಗಳಲ್ಲಿ ವಿಡಿಯೋ ಕ್ವಾಲಿಟಿಗಳು ಹೆಚ್ಚುತ್ತಿದ್ದು, ಇದರಿಂದ 4ಜಿ ನೆಟ್‌ವರ್ಕ್ ಕೂಡ ಕೂಡಾ ಬಫರಿಂಗ್ ಸಮಸ್ಯೆ ಎದುರಿಸುತ್ತದೆ. ಆದರೆ, 5ಜಿ ತಂತ್ರಜ್ಞಾನ ಬಂದ ಮೇಲೆ ವೀಡಿಯೋ ಸ್ಟ್ರೀಮಿಂಗ್‌ನ ವೇಗ ಹೆಚ್ಚುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ಇದರೊಂದಿಗೆ ವರ್ಚುವಲ್ ರಿಯಾಲಿಟಿ ವಿಡಿಯೋಗಳನ್ನೂ ವೀಕ್ಷಿಸಲು ಸುಲಭವಾಗಲಿದೆ ಎಂದು ಅಧ್ಯಯನ ತಿಳಿಸಿವೆ.

ಇನ್ನು ನಿಯಮಗಳ ವಿಷಯಕ್ಕೆ ಬರುವುದಾದರೆ, ಹರಾಜಿನ ಸಮಯದಲ್ಲಿ ಒಟ್ಟು 72,097.85 MHz ಸ್ಪೆಕ್ಟ್ರಮ್ ಕನಿಷ್ಠ ರೂ. 4.3 ಲಕ್ಷ ಕೋಟಿ ಮೌಲ್ಯದ ಬ್ಲಾಕ್ ಆಗಿರುತ್ತದೆ. ಕಳೆದ ಜೂನ್​ನಲ್ಲಿ ಸಂಪುಟ, ವಲಯ ನಿಯಂತ್ರಕ ಸಂಸ್ಥೆಯಾದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಶಿಫಾರಸು ಮಾಡಿದ ಮೀಸಲು ಬೆಲೆಯಲ್ಲಿ 5G ಹರಾಜುಗಳನ್ನು ಅನುಮೋದಿಸಲಾಗಿದೆ. ಅಲ್ಲದೆ ಬಿಡ್​ದಾರರನ್ನು ಆಕರ್ಷಿಸಲು, ಪಾವತಿ ನಿಯಮಗಳನ್ನು ಸರಾಗಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ ಯಶಸ್ವಿ ಬಿಡ್​ದಾರರಿಂದ ಮುಂಗಡ ಪಾವತಿ ಮಾಡಲು ಯಾವುದೇ ಕಡ್ಡಾಯ ಅಗತ್ಯವಿಲ್ಲ. ವಿಜೇತರು ಪಾವತಿಸಲು 20 ಸಮಾನ ವಾರ್ಷಿಕ ಕಂತುಗಳಲ್ಲಿ ಅವಕಾಶ ನೀಡಲಾಗಿದ್ದು, ಪ್ರತಿ ವರ್ಷದ ಆರಂಭದಲ್ಲಿ ಪಾವತಿಗಳನ್ನು ಮಾಡಬೇಕು.

Published On - 9:13 am, Tue, 26 July 22