AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5G Speed: ಶುರುವಾದ ಎರಡೇ ವರ್ಷಕ್ಕೆ ಕುಸಿತ ಕಂಡ 5G ವೇಗ: ಜಿಯೋ-ಏರ್‌ಟೆಲ್​ಗೆ ಭಾರೀ ಹೊಡೆತ

5G ತಂತ್ರಜ್ಞಾನದ ತ್ವರಿತ ಅಳವಡಿಕೆ ಮತ್ತು ಡೇಟಾ ಬಳಕೆಯ ಹೆಚ್ಚಳದಿಂದಾಗಿ, ನೆಟ್‌ವರ್ಕ್ ದಟ್ಟಣೆಯ ಸಮಸ್ಯೆ ಹೆಚ್ಚಿದೆ. ಇದರಿಂದಾಗಿ ಸರಾಸರಿ 5G ಡೌನ್‌ಲೋಡ್ ವೇಗವು ಕುಸಿದಿದೆ. 5G ಬಳಕೆದಾರರಲ್ಲಿ ಕೇವಲ 16 ಪ್ರತಿಶತದಷ್ಟು ಜನರು 700MHz ಆವರ್ತನ ಬ್ಯಾಂಡ್ ಅನ್ನು ಬಳಸುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

5G Speed: ಶುರುವಾದ ಎರಡೇ ವರ್ಷಕ್ಕೆ ಕುಸಿತ ಕಂಡ 5G ವೇಗ: ಜಿಯೋ-ಏರ್‌ಟೆಲ್​ಗೆ ಭಾರೀ ಹೊಡೆತ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Oct 23, 2024 | 6:14 PM

Share

ಒಂದೆಡೆ ಭಾರತ 6G ತಯಾರಿಯಲ್ಲಿ ನಿರತವಾಗಿದ್ದರೆ, ಮತ್ತೊಂದೆಡೆ 5ಜಿ ನೆಟ್‌ವರ್ಕ್‌ನಲ್ಲಿ ಸರಿಯಾದ ವೇಗ ಸಿಗದೆ ಸಮಸ್ಯೆ ಎದುರಿಸುತ್ತಿರುವವರು ಇನ್ನೂ ಅನೇಕರಿದ್ದಾರೆ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ದೇಶದಲ್ಲಿ 5G ನೆಟ್‌ವರ್ಕ್ ಅನ್ನು ಮೊದಲು ಪ್ರಾರಂಭಿಸಿದವು, 5G ನೆಟ್‌ವರ್ಕ್ ಪ್ರಾರಂಭವಾಗಿ ಎರಡು ವರ್ಷಗಳು ಕಳೆದಿವೆ. ಆದರೆ, ಅಚ್ಚರಿ ಎಂಬಂತೆ ಇತ್ತೀಚಿನ ವರದಿಯೊಂದರ ಪ್ರಕಾರ ದೇಶದಲ್ಲಿ 5G ವೇಗ ಕುಸಿತ ಕಂಡಿದೆ ಎಂದು ಹೇಳಲಾಗಿದೆ.

ವರದಿಯ ಪ್ರಕಾರ, 5G ತಂತ್ರಜ್ಞಾನದ ತ್ವರಿತ ಅಳವಡಿಕೆ ಮತ್ತು ಡೇಟಾ ಬಳಕೆಯ ಹೆಚ್ಚಳದಿಂದಾಗಿ, ನೆಟ್‌ವರ್ಕ್ ದಟ್ಟಣೆಯ ಸಮಸ್ಯೆ ಹೆಚ್ಚಿದೆ. ಇದರಿಂದಾಗಿ ಸರಾಸರಿ 5G ಡೌನ್‌ಲೋಡ್ ವೇಗವು ಕುಸಿದಿದೆ. Opensignal ನ ವರದಿಯ ಪ್ರಕಾರ, ಉತ್ತಮ 5G ಅನುಭವಕ್ಕಾಗಿ ಬಳಕೆ ಮತ್ತು ಸ್ಪೆಕ್ಟ್ರಮ್ ನಿರ್ವಹಣೆಯಂತಹ ಅಂಶಗಳು ಮುಖ್ಯವಾಗಿವೆ.

5G ಬಳಕೆದಾರರಲ್ಲಿ ಕೇವಲ 16 ಪ್ರತಿಶತದಷ್ಟು ಜನರು 700MHz ಆವರ್ತನ ಬ್ಯಾಂಡ್ ಅನ್ನು ಬಳಸುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ದೊಡ್ಡ ಪ್ರದೇಶಗಳಲ್ಲಿ ಹೆಚ್ಚಿನ ವ್ಯಾಪ್ತಿಯನ್ನು ಒದಗಿಸುತ್ತದೆ. ಈ ಆವರ್ತನ ಬ್ಯಾಂಡ್‌ನೊಂದಿಗೆ ಕವರೇಜ್ ಲಭ್ಯವಿದೆ ಆದರೆ ಬಳಕೆದಾರರು ನಿಧಾನ 5G ವೇಗವನ್ನು ಅನುಭವಿಸುತ್ತಾರೆ.

ಮತ್ತೊಂದೆಡೆ, 84 ಪ್ರತಿಶತ ಬಳಕೆದಾರರು 3.5 GHz ಬ್ಯಾಂಡ್ ಅನ್ನು ಬಳಸುತ್ತಾರೆ, ಇದು ಉತ್ತಮ ವೇಗವನ್ನು ನೀಡುತ್ತದೆ. ಆದರೆ ಸೀಮಿತ ವ್ಯಾಪ್ತಿಯ ಪ್ರದೇಶವನ್ನು ಹೊಂದಿದೆ. ಡೇಟಾಗೆ ಹೆಚ್ಚುತ್ತಿರುವ ಬೇಡಿಕೆಯ ನಡುವೆ, ಸೇವಾ ಪೂರೈಕೆದಾರರು ಸ್ಪೆಕ್ಟ್ರಮ್ ಸಂಪನ್ಮೂಲಗಳನ್ನು ನಿರ್ವಹಿಸುವಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಏರ್​ಟೆಲ 5G vs ಜಿಯೋ 5G ಡೌನ್‌ಲೋಡ್ ವೇಗದಲ್ಲಿ ಯಾರು ಮುಂದಿದ್ದಾರೆ?:

ವರದಿಯ ಪ್ರಕಾರ, ಏರ್‌ಟೆಲ್‌ನ 5G ವೇಗವು ರಿಲಯನ್ಸ್ ಜಿಯೋಗಿಂತ 6.6 ಪಟ್ಟು ವೇಗವಾಗಿದೆ. ಏರ್‌ಟೆಲ್‌ನ 5G ಡೌನ್‌ಲೋಡ್ ವೇಗ 239.7Mbps ಆಗಿದ್ದರೆ, ಜಿಯೋದ 5G ಡೌನ್‌ಲೋಡ್ ವೇಗ 224.8Mbps ಆಗಿದೆ.

ಇದನ್ನೂ ಓದಿ: ಫೋನ್ ಚಾರ್ಜ್ ಮಾಡಲು ಕರೆಂಟ್ ಬೇಡ: ಬಂದಿದೆ ಸೂರ್ಯನ ಬೆಳಕಲ್ಲಿ ಚಾರ್ಜ್ ಮಾಡುವ ಪವರ್ ಬ್ಯಾಂಕ್

ಏರ್‌ಟೆಲ್ ಮತ್ತು ಜಿಯೋ ಬಳಕೆದಾರರಿಗೆ ಆತಂಕ:

ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಕಂಪನಿಯ 5G ವೇಗದ ಕುಸಿತದಿಂದಾಗಿ, ಅನೇಕ ಬಳಕೆದಾರರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ X ನಲ್ಲಿ ಅಸಮಾಧಾನಗೊಂಡಿದ್ದಾರೆ ಮತ್ತು ದೂರುತ್ತಿದ್ದಾರೆ. ಈ ಬಗ್ಗೆ ದೂರಿದ್ದಾರೆ.

ಏರ್​ಟೆಲ 5G vs ಜಿಯೋ 5G ಅಪ್‌ಲೋಡ್ ವೇಗದಲ್ಲಿ ಯಾರು ಮುಂದಿದ್ದಾರೆ?:

ಡೌನ್‌ಲೋಡ್ ವೇಗದಲ್ಲಿ ಏರ್‌ಟೆಲ್ ಗೆದ್ದರೆ, ರಿಲಯನ್ಸ್ ಜಿಯೋ ಅಥವಾ ಏರ್‌ಟೆಲ್ ಅಪ್‌ಲೋಡ್ ವೇಗದಲ್ಲಿ ಯಾವ ಕಂಪನಿ ಮುಂದಿದೆ ಎಂಬುದನ್ನು ನೋಡುವುದಾದರೆ, ಏರ್‌ಟೆಲ್‌ನೊಂದಿಗೆ, ಬಳಕೆದಾರರು 23.3Mbps ಅಪ್‌ಲೋಡ್ ವೇಗದಿಂದ ತೃಪ್ತರಾಗಿದ್ದಾರೆ ಮತ್ತು ಜಿಯೋ ಬಳಕೆದಾರರು 12.7Mbps ಅಪ್‌ಲೋಡ್ ವೇಗ ಪಡೆದುಕೊಂಡಿದೆ. ಜೂನ್ 1 ರಿಂದ ಆಗಸ್ಟ್ 29 ರವರೆಗಿನ ವರದಿ ಇದಾಗಿದೆ.

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ