6G service: ಇನ್ನು ಎಂಟೇ ವರ್ಷಗಳಲ್ಲಿ ಭಾರತಕ್ಕೆ 6G ಸೇವೆ
ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿದಂತೆ 3G ಸೇವೆ, 4G ಸೇವೆಗಳು ಆರಂಭವಾದವು. ಇದೀಗ ಅದಕ್ಕಿಂತಲೂ ಹತ್ತುಪಟ್ಟು ವೇಗ ಇರುವ 5ಜಿ ಸೇವೆ ಆರಂಭವಾಗುವ ಮೂಲಕ ದೇಶದ ತಂತ್ರಜ್ಞಾನ ವಿಭಾಗದಲ್ಲಿ ಕ್ರಾಂತಿಯನ್ನು ಆರಂಭಿಸಿದೆ. ಇದೀಗ ದೇಶದಲ್ಲಿ 6G ಸೇವೆ ಆರಂಭಿಸಲು ದಾಪುಗಾಲಿಡಲಾಗುತ್ತಿದೆ.
ಭಾರತವು 6G ವಿಭಾಗದಲ್ಲಿ (6G Services) ಭಾರತ ಮುನ್ನಡೆ ಸಾಧಿಸಲಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಹೇಳಿದ್ದಾರೆ. ಭಾರತದಲ್ಲಿ 5G ಮೊಬೈಲ್ ಸೇವೆಗಳನ್ನು (5G Services) ಪ್ರಾರಂಭಿಸಿದ ಒಂದು ದಿನದ ನಂತರ ಈ ಹೇಳಿಕೆ ಬಂದಿದೆ. ಆರನೇ ತಲೆಮಾರಿನ ನಿಸ್ತಂತು ತಂತ್ರಜ್ಞಾನದಲ್ಲಿ ಭಾರತವು ಜಾಗತಿಕ ಮುನ್ನಡೆ ಸಾಧಿಸುವುದನ್ನು ನೋಡುವುದು ಪ್ರಧಾನಿ ನರೇಂದ್ರ ಮೋದಿ ಅವರ ಬಯಕೆಯಾಗಿದೆ ಎಂದು ಸಚಿವರು ಹೇಳಿದರು. ಉದ್ಯಮಿಗಳಾದ ಮುಖೇಶ್ ಅಂಬಾನಿ, ಕುಮಾರ್ ಮಂಗಲಂ ಬಿರ್ಲಾ ಮತ್ತು ಸುನಿಲ್ ಭಾರ್ತಿ ಮಿತ್ತಲ್ ಅವರೊಂದಿಗೆ ವೈಷ್ಣವ್ ಅವರು ಶನಿವಾರ 5ಜಿ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಭಾರತದಲ್ಲಿ 6G ಅಭಿವೃದ್ಧಿಪಡಿಸುತ್ತಿರುವವರು ಯಾರು?
- ದೂರಸಂಪರ್ಕ ಇಲಾಖೆ (ಡಿಒಟಿ) ಪ್ರಕಾರ, 5G ತಂತ್ರಜ್ಞಾನವು 4Gಗಿಂತ ಹತ್ತು ಪಟ್ಟು ಉತ್ತಮ ಡೌನ್ಲೋಡ್ ವೇಗವನ್ನು ಮತ್ತು ಮೂರು ಪಟ್ಟು ಹೆಚ್ಚಿನ ಸ್ಪೆಕ್ಟ್ರಮ್ (ತರಂಗಾಂತರ) ದಕ್ಷತೆಯನ್ನು ನೀಡುವ ನಿರೀಕ್ಷೆಯಿದೆ.
- 6G ಅಭಿವೃದ್ಧಿ ಯೋಜನೆಯ ಮುಖ್ಯಸ್ಥರಾಗಿರುವ ಐಐಟಿ ಹೈದರಾಬಾದ್ ಪ್ರೊಫೆಸರ್ ಕಿರಣ್ ಕುಚಿ, 6ಜಿ ಮಾನದಂಡಗಳನ್ನು ರಚಿಸಲು ಸಹಾಯ ಮಾಡುವ ಕೆಲವು ಹಕ್ಕುಸ್ವಾಮ್ಯಗಳನ್ನು ಸಂಸ್ಥೆಗೆ ನೀಡಲಾಗಿದೆ ಮತ್ತು ತಂತ್ರಜ್ಞಾನ ಮುಂದುವರೆದಂತೆ ಹೊಸ ಹಕ್ಕುಸ್ವಾಮ್ಯಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಭಾರತದಲ್ಲಿ 6ಜಿ ಬಿಡುಗಡೆ ಯಾವಾಗ?
- ಈ ದಶಕದ ಅಂತ್ಯದ ವೇಳೆಗೆ (2030ರ ವೇಳೆಗೆ) 6G ನೆಟ್ವರ್ಕ್ ಅನ್ನು ಪ್ರಾರಂಭಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
- 2022ರ ಆಗಸ್ಟ್ 26 ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022ರ ಗ್ರ್ಯಾಂಡ್ ಫಿನಾಲೆಯಲ್ಲಿ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ 6G ನೆಟ್ವರ್ಕ್ ಘೋಷಣೆ ಮಾಡಿದರು.
6G ಆರಂಭದ ನಂತರ ಭಾರತದಲ್ಲಿ ಡಿಜಿಟಲ್ ಕ್ರಾಂತಿ
- ತಂತ್ರಜ್ಞಾನವು ಅಭಿವೃದ್ಧಿಹೊಂದಿದಂತೆ ದೇಶದಲ್ಲಿ 2G ಸೇವೆಯಿಂದ 3Gಗೆ ಮತ್ತು ಇಲ್ಲಿಂದ 4Gಗೆ ಅಪ್ಡೇಟ್ ಆಯ್ತು. ಇದೀಗ 5G ಅಳವಡಿಕೆಯು ಹೊಸ ಬಳಕೆಯ ಪ್ರವೃತ್ತಿಗಳ ಅಭಿವೃದ್ಧಿಗೆ ಕಾರಣವಾಗಿದೆ.
- 5G ಅಳವಡಿಕೆಯು ಈಗ ತಂತ್ರಜ್ಞಾನದಲ್ಲಿ ಮುಂದಿನ ಪ್ರಗತಿಯನ್ನು ಅನ್ವೇಷಿಸಲು ಭಾರತೀಯ ಅನ್ವೇಷಕರಿಗೆ ಸಹಕಾರಿಯಾಗಿದೆ.
- 6G ಇದು ಜನರು ಕೃತಕ ಬುದ್ಧಿಮತೆಯೊಂದಿಗೆ ಸಂವಹನ ನಡೆಸಲು ಸಹಕಾರಿಯಾಗಲಿದೆ.
- ಈ ವರ್ಷದ ಆರಂಭದಲ್ಲಿ ದೂರಸಂಪರ್ಕ ಇಲಾಖೆಯು (ಡಿಒಟಿ) ವೆಬಿನಾರ್ನಲ್ಲಿ ಭಾರತದಲ್ಲಿ 6G ತಂತ್ರಜ್ಞಾನವು ಸಾಧಿಸಬೇಕಾದ ಮೈಲುಗಳ ಮಾರ್ಗಸೂಚಿಯನ್ನು ಪರಿಚಯಿಸಿತ್ತು. ಈ ದಾಖಲೆಯಲ್ಲಿ ಇಂಟೆಲಿಜೆಂಟ್ ಕನೆಕ್ಟಿವಿಟಿ, ಡೀಪ್ ಕನೆಕ್ಟಿವಿಟಿ, ಹೊಲೊಗ್ರಾಫಿಕ್ ಕನೆಕ್ಟಿವಿಟಿ, ಯುಬಿಕ್ವಿಟಸ್ ಕನಿಕ್ಟಿವಿಟಿಯ ಬಗ್ಗೆ ವಿವರಗಳಿವೆ. ವಿಶ್ವದ ವಿವಿಧೆಡೆ ಚಾಲ್ತಿಯಲ್ಲಿರುವ ತಂತ್ರಜ್ಞಾನದ ಬಗ್ಗೆಯೂ ಮಾಹಿತಿ ಇದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Mon, 3 October 22