ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಎಷ್ಟು ಸಿಮ್ ಲಿಂಕ್ ಆಗಿವೆ?: ಟೆಲಿಕಾಂ ಇಲಾಖೆಯಿಂದ ಹೊಸ ಪೋರ್ಟಲ್

ನಿಮ್ಮ ಆಧಾರ್‌ನೊಂದಿಗೆ ಎಷ್ಟು ಸಿಮ್​ಗಳು ಲಿಂಕ್ ಆಗಿವೆ ಎಂಬುದು ಅನೇಕರಿಗೆ ತಿಳಿದಿಲ್ಲ. ಇದಕ್ಕಾಗಿ ಟೆಲಿಕಾಂ ಇಲಾಖೆಯು ಹೊಸ ಪೋರ್ಟಲ್ ಅನ್ನು ರಚಿಸಿದೆ.

ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಎಷ್ಟು ಸಿಮ್ ಲಿಂಕ್ ಆಗಿವೆ?: ಟೆಲಿಕಾಂ ಇಲಾಖೆಯಿಂದ ಹೊಸ ಪೋರ್ಟಲ್
Aadhaar Card
Follow us
TV9 Web
| Updated By: Vinay Bhat

Updated on: Aug 27, 2021 | 12:40 PM

ಆಧಾರ್ (Aadhaar card) ಎಂಬುದು ಭಾರತ ಸರ್ಕಾರವು ಪ್ರತಿಯೊಬ್ಬ ಭಾರತೀಯ ಪ್ರಜೆಗಳಿಗೂ ನೀಡಿರುವ ವಿಶೇಷವಾದ 12 ಸಂಖ್ಯೆಗಳಾಗಿರುತ್ತದೆ. ನಿಮ್ಮ ಗುರುತನ್ನು ಸಾಬೀತು ಪಡಿಸುವುದಕ್ಕೆ ಇರುವ ಬಹಳ ಪ್ರಮುಖವಾದ ದಾಖಲಾತಿಗಳಲ್ಲಿ ಆಧಾರ್ ಕೂಡ ಒಂದಾಗಿದೆ. ಐಟಿಆರ್ ಅನ್ನು ಸಲ್ಲಿಸುವುದು, ಭಾರತದ ಸರ್ಕಾರದ ಯೋಜನೆಗಳನ್ನು ಪಡೆಯುವುದಕ್ಕಾಗಿ, ಬ್ಯಾಂಕಿನಲ್ಲಿ ಖಾತೆ ತೆರೆಯುವುದಕ್ಕೆ, ಹೊಸ ಸಿಮ್ ಪಡೆಯುವುದಕ್ಕೆ ಹೀಗೆ ಆಧಾರ್ ಬಹಳ ಪ್ರಮುಖವಾದುದ್ದಾಗಿದೆ.

ಹೀಗಿರುವಾಗ ನಿಮ್ಮ ಆಧಾರ್ ಅನ್ನು ಯಾರಾದರೂ ದುರುಪಯೋಗ ಪಡಿಸಿಕೊಂಡರೆ ಎಂಬ ಅನುಮಾನ ಮೂಡದಿರದು. ಅದರಲ್ಲೂ ಪ್ರಮುಖವಾಗಿ ನಿಮ್ಮ ಆಧಾರ್‌ನೊಂದಿಗೆ ಎಷ್ಟು ಸಿಮ್​ಗಳು ಲಿಂಕ್ ಆಗಿವೆ ಎಂಬುದು ಅನೇಕರಿಗೆ ತಿಳಿದಿಲ್ಲ. ಇದಕ್ಕಾಗಿ ಟೆಲಿಕಾಂ ಇಲಾಖೆಯು ಹೊಸ ಪೋರ್ಟಲ್ ಅನ್ನು ರಚಿಸಿದೆ.

ಇದರ ಮೂಲಕ ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಆಧಾರ್ ಜೊತೆಗೆ ಎಷ್ಟು ಫೋನ್ ಸಂಖ್ಯೆಗಳನ್ನು ಲಿಂಕ್  ಮಾಡಲಾಗಿದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು. ಅಲ್ಲದೆ ನೀವು ಈ ಹಿಂದೆ ಒಂದು ಮೊಬೈಲ್ ನಂಬರ್​ಗೆ ಆಧಾರ್ ಲಿಂಕ್ ಮಾಡಿ ಈಗ ಆ ನಂಬರ್ ಬಳಸದೇ ಇದ್ದಲ್ಲಿ ಅದನ್ನು ಅನ್​ಲಿಂಕ್ ಅಥವಾ ಬ್ಲಾಕ್ ಕೂಡ ಮಾಡಬಹುದಾಗಿದೆ.

ಟೆಲಿಕಾಂ ಇಲಾಖೆಯು ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ (TAFCOP) ಎಂಬ ಪೋರ್ಟಲ್ ಅನ್ನು ರಚಿಸಿದೆ. ಈ ಪೋರ್ಟಲ್​ಗೆ ಭೇಟಿ ನೀಡಲು ನೀವು tafcop.dgtelecom.gov.in ಈ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳನ್ನು ನೀಡಲಾಗಿದೆ ಎಂಬುದನ್ನು ಇಲ್ಲಿ ನೀವು ಸುಲಭವಾಗಿ ಕಂಡುಹಿಡಿಯಬಹುದು.

ಅಷ್ಟೇ ಅಲ್ಲದೆ ನಿಮ್ಮ ಹೆಸರಿನಲ್ಲಿ ನೀಡಲಾಗಿರುವ ಯಾವುದೇ ಅಪರಿಚಿತ ಸಂಖ್ಯೆಯನ್ನು ಕೂಡ ನೀವು ಇಲ್ಲಿಂದ ನಿರ್ಬಂಧಿಸಬಹುದು. ನಿಯಮಗಳ ಪ್ರಕಾರ ಒಂದು ಆಧಾರ್‌ನಲ್ಲಿ ಕೇವಲ 9 ಸಿಮ್‌ಗಳನ್ನು ಮಾತ್ರ ಪಡೆದುಕೊಳ್ಳಬಹುದಾಗಿದೆ. ಈ ಸಂಖ್ಯೆ ಹೆಚ್ಚಿದ್ದರೆ, ಅದನ್ನು ಬಲ್ಕ್ ಸಿಮ್ ಅಥವಾ ಕಮರ್ಷಿಯಲ್ ಸಿಮ್ ವಿಭಾಗದಲ್ಲಿ ಇರಿಸಲಾಗುವುದು ಎಂದು ಟೆಲಿಕಾಂ ಇಲಾಖೆ ಹೇಳಿದೆ.

ಆಧಾರ್ ಜೊತೆಗೆ ಎಷ್ಟು ಸಿಮ್ ಲಿಂಕ್ ಆಗಿದೆಂದು ಹೇಗೆ ತಿಳಿಯುವುದು?

  • ನಿಮ್ಮ ಹೆಸರಿನಲ್ಲಿ ನೀಡಲಾದ ಎಲ್ಲಾ ಸಿಮ್‌ಗಳನ್ನು ಪರಿಶೀಲಿಸಲು, ನೀವು ಮೊದಲಿಗೆ TAFCOP ಪೋರ್ಟಲ್‌ಗೆ ಭೇಟಿ ನೀಡಬೇಕು.
  • ನಂತರ ನೀವು ಮೊದಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಲ್ಲಿ ನಮೂದಿಸಿ.
  • ಈಗ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿಯೊಂದು ಬರುತ್ತದೆ ಮತ್ತು ಅದನ್ನು ನೀವು ಪೋರ್ಟಲ್‌ನಲ್ಲಿ ದೃಢೀಕರಿಸಬೇಕು.
  • ಇದರ ನಂತರ, ನಿಮ್ಮ ಆಧಾರ್‌ಗೆ ಲಿಂಕ್ ಮಾಡಲಾದ ಸಂಖ್ಯೆಗಳ ಪಟ್ಟಿ ನಿಮ್ಮ ಮುಂದೆ ತೆರೆಯುತ್ತದೆ.

ಆಧಾರ್ ಲಿಂಕ್ ಆಗಿರುವ ಹಳೆಯ ನಂಬರ್ ಬ್ಲಾಕ್ ಮಾಡಬಹುದು:

ಹೌದು, ನೀವು ಈ ಹಿಂದೆ ಒಂದು ಮೊಬೈಲ್ ನಂಬರ್​ಗೆ ಆಧಾರ್ ಲಿಂಕ್ ಮಾಡಿ ಈಗ ಆ ನಂಬರ್ ಬಳಸದೇ ಇದ್ದಲ್ಲಿ ಅದನ್ನು ಅನ್​ಲಿಂಕ್ ಕೂಡ ಮಾಡಬಹುದಾಗಿದೆ. ಅಲ್ಲದೆ ನಿಮಗೆ ಈ ಪಟ್ಟಿಯಲ್ಲಿ ಯಾವುದೇ ಅಪರಿಚಿತ ಅಥವಾ ಅನುಮಾನಾಸ್ಪದ ಸಂಖ್ಯೆ ಕಂಡುಬಂದರೆ, ನೀವು ಅದರ ಬಗ್ಗೆ ದೂರು ನೀಡಬಹುದು. ನಿಮ್ಮ ದೂರನ್ನು ತನಿಖೆ ಮಾಡಲಾಗುತ್ತದೆ. ಅದು ನಿಜವಾಗಿದ್ದರೆ ಆ ಸಂಖ್ಯೆಯನ್ನು ಬ್ಲಾಕ್ ಮಾಡಲಾಗುತ್ತದೆ.

ಸ್ಯಾನ್‌ಡಿಸ್ಕ್​ ವೈರ್‌ಲೆಸ್ ಚಾರ್ಜರ್ ಬಿಡುಗಡೆ: ಇದರ ವಿಶೇಷತೆಗಳೇನು ಗೊತ್ತಾ?

JioPhone Next: ಅತೀ ಕಡಿಮೆ ಬೆಲೆಗೆ ಸೂಪರ್ ಸ್ಮಾರ್ಟ್​ಫೋನ್: ಜಿಯೋ ನೆಕ್ಸ್ಟ್​ ಬಿಡುಗಡೆಗೆ ರೆಡಿ

(Aadhaar card govt website gives new list of all SIM cards issued to one Aadhaar number)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ