Airtel Spam Report: ಏರ್‌ಟೆಲ್ ಇಲ್ಲಿಯವರೆಗೆ ಎಷ್ಟು ಸ್ಪ್ಯಾಮ್ ಕರೆಗಳನ್ನು ಪತ್ತೆ ಮಾಡಿದೆ ಗೊತ್ತೇ?: ಶಾಕಿಂಗ್ ವರದಿ ಇಲ್ಲಿದೆ

ಏರ್​ಟೆಲ್ ಸ್ಪ್ಯಾಮ್ ಕರೆಗಳಿಗೆ ಉತ್ತರಿಸುವ ಗ್ರಾಹಕರ ಸಂಖ್ಯೆ ಶೇಕಡಾ 12 ರಷ್ಟು ಕಡಿಮೆಯಾಗಿದೆ. ಏರ್‌ಟೆಲ್ ನೆಟ್‌ವರ್ಕ್‌ನಲ್ಲಿನ ಎಲ್ಲಾ ಕರೆಗಳಲ್ಲಿ ಆರು (6) ಪ್ರತಿಶತದಷ್ಟು ಸ್ಪ್ಯಾಮ್ ಕರೆಗಳು ಎಂದು ಗುರುತಿಸಲಾಗಿದೆ ಮತ್ತು ಎಲ್ಲಾ ಎಸ್‌ಎಂಎಸ್‌ಗಳಲ್ಲಿ 2 ಪ್ರತಿಶತವನ್ನು ಸ್ಪ್ಯಾಮ್ ಕರೆ ಎಂದು ಗುರುತಿಸಲಾಗಿದೆ.

Airtel Spam Report: ಏರ್‌ಟೆಲ್ ಇಲ್ಲಿಯವರೆಗೆ ಎಷ್ಟು ಸ್ಪ್ಯಾಮ್ ಕರೆಗಳನ್ನು ಪತ್ತೆ ಮಾಡಿದೆ ಗೊತ್ತೇ?: ಶಾಕಿಂಗ್ ವರದಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 10, 2024 | 3:44 PM

ಏರ್‌ಟೆಲ್ ತನ್ನ ಆಂಟಿ-ಸ್ಪ್ಯಾಮ್ ಸೊಲ್ಯೂಷನ್ ಫೀಚರ್ ಪ್ರಾರಂಭಿಸಿದ ನಂತರ ತನ್ನ ನೆಟ್‌ವರ್ಕ್‌ನಲ್ಲಿ ಏನೆಲ್ಲ ಆಗಿದೆ ಎಂಬುದರ ಕುರಿತು ಸ್ಪ್ಯಾಮ್ ವರದಿಯನ್ನು ಬಿಡುಗಡೆ ಮಾಡಿದೆ. ಭಾರ್ತಿ ಏರ್‌ಟೆಲ್, ಭಾರತದ ಮೊದಲ ಸ್ಪ್ಯಾಮ್ ಕರೆ ತಪಾಸಣೆ ನೆಟ್‌ವರ್ಕ್, 8 ಶತಕೋಟಿ ಸ್ಪ್ಯಾಮ್ ಕರೆಗಳು ಮತ್ತು 0.8 ಶತಕೋಟಿ ಸ್ಪ್ಯಾಮ್ ಎನ್​ಎಮ್​ಎಸ್ ಅನ್ನು ತನ್ನ AI ಆಧಾರಿತ, ಸ್ಪ್ಯಾಮ್ ಪತ್ತೆ ಫೀಚರ್ ಪ್ರಾರಂಭಿಸಿದ ಎರಡೂವರೆ ತಿಂಗಳೊಳಗೆ ತಡೆಹಿಡಿದಿದೆ. ಈ ಸುಧಾರಿತ ಅಲ್ಗಾರಿದಮ್ ಅನ್ನು ಬಳಸಿಕೊಂಡು, AI- ಆಧಾರಿತ ನೆಟ್‌ವರ್ಕ್ ಪ್ರತಿದಿನ 1 ಮಿಲಿಯನ್ ಸ್ಪ್ಯಾಮರ್‌ಗಳನ್ನು ಯಶಸ್ವಿಯಾಗಿ ಗುರುತಿಸಿದೆ. ಕಳೆದ 2.5 ತಿಂಗಳುಗಳಲ್ಲಿ ಈ ಸ್ಪ್ಯಾಮ್ ಕರೆಗಳ ಕುರಿತು ಕಂಪನಿಯು ಸುಮಾರು 252 ಮಿಲಿಯನ್ ಗ್ರಾಹಕರನ್ನು ಎಚ್ಚರಿಸಿದೆ. ಸ್ಪ್ಯಾಮ್ ಕರೆಗಳಿಗೆ ಉತ್ತರಿಸುವ ಗ್ರಾಹಕರ ಸಂಖ್ಯೆ 12% ರಷ್ಟು ಕಡಿಮೆಯಾಗಿದೆ. ಏರ್‌ಟೆಲ್ ನೆಟ್‌ವರ್ಕ್‌ನಲ್ಲಿನ ಎಲ್ಲಾ ಕರೆಗಳಲ್ಲಿ ಆರು ಪ್ರತಿಶತದಷ್ಟು ಸ್ಪ್ಯಾಮ್ ಕರೆಗಳು ಎಂದು ಗುರುತಿಸಲಾಗಿದೆ ಮತ್ತು ಎಲ್ಲಾ ಎಸ್‌ಎಂಎಸ್‌ಗಳಲ್ಲಿ 2 ಪ್ರತಿಶತವನ್ನು ಸ್ಪ್ಯಾಮ್ ಎಂದು ಗುರುತಿಸಲಾಗಿದೆ. 35% ಸ್ಪ್ಯಾಮರ್‌ಗಳು ಲ್ಯಾಂಡ್‌ಲೈನ್ ದೂರವಾಣಿಗಳನ್ನು ಬಳಸುತ್ತಾರೆ ಎಂದು ಕಂಡುಹಿಡಿದಿದೆ. ಇದಲ್ಲದೆ, ದೆಹಲಿಯ ಗ್ರಾಹಕರು ಅತಿ ಹೆಚ್ಚು ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸಿದ್ದಾರೆ. ನಂತರ ಎಪಿ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಗ್ರಾಹಕರು ಇದ್ದಾರೆ. ಸ್ಪ್ಯಾಮ್ ಕರೆಗಳು ದೆಹಲಿಯಲ್ಲಿ ಅತಿ ಹೆಚ್ಚು, ಮುಂಬೈ ಮತ್ತು ಕರ್ನಾಟಕ ನಂತರದ ಸ್ಥಾನದಲ್ಲಿವೆ. ಎಸ್‌ಎಂಎಸ್‌ಗೆ ಸಂಬಂಧಿಸಿದಂತೆ, ಗುಜರಾತ್‌ನಿಂದ ಗರಿಷ್ಠ ಸಂಖ್ಯೆಯ ಫೇಕ್ ಎಸ್​ಎಮ್​ಎಸ್ ಬರುತ್ತಿದೆ ಎಂದು ಕಂಡುಹಿಡಿದಿದೆ, ನಂತರ ಕೋಲ್ಕತ್ತಾ ಮತ್ತು ಉತ್ತರ ಪ್ರದೇಶವಿದೆ.

76 ಪ್ರತಿಶತದಷ್ಟು ಸ್ಪ್ಯಾಮ್ ಕರೆಗಳು ಪುರುಷ ಗ್ರಾಹಕರನ್ನು ಗುರಿಯಾಗಿಸಿಕೊಂಡಿವೆ ಎಂದು ಏರ್​ಟೆಲ್ ಹೇಳಿದೆ. ಎಲ್ಲಾ ಸ್ಪ್ಯಾಮ್ ಕರೆಗಳಲ್ಲಿ ಶೇ. 48 ರಷ್ಟು 36-60 ವಯಸ್ಸಿನ ಗ್ರಾಹಕರು, ಶೇ. 26 ರಷ್ಟು 26-35 ವರ್ಷ ವಯಸ್ಸಿನವರು ಎರಡನೇ ಸ್ಥಾನದಲ್ಲಿದ್ದಾರೆ. ಕೇವಲ 8 ಪ್ರತಿಶತದಷ್ಟು ಸ್ಪ್ಯಾಮ್ ಕರೆಗಳು ಹಿರಿಯ ನಾಗರಿಕರ ಹ್ಯಾಂಡ್‌ಸೆಟ್‌ಗಳಿಗೆ ಬಂದಿದೆ ಎಂದು ಕಂಡುಹಿಡಿದಿದೆ.

ಸ್ಪ್ಯಾಮ್ ಚಟುವಟಿಕೆಯನ್ನು ಕಂಪನಿಯು ಗಂಟೆಯ ಆಧಾರದ ಮೇಲೆ ಪತ್ತೆ ಮಾಡುತ್ತದೆ. ಸ್ಪ್ಯಾಮ್ ಕರೆಗಳು ಬೆಳಿಗ್ಗೆ 9 ರಿಂದ ಪ್ರಾರಂಭವಾಗುತ್ತವೆಯಂತೆ. ದಿನ ಕಳೆದಂತೆ ಕ್ರಮೇಣ ಹೆಚ್ಚಾಗುತ್ತದೆ. ಮಧ್ಯಾಹ್ನ ಮತ್ತು 3 ಗಂಟೆಯ ನಡುವೆ ಸ್ಪ್ಯಾಮ್ ಚಟುವಟಿಕೆಯು ಅಧಿಕವಾಗಿರುವುದನ್ನು ಗಮನಿಸಲಾಗಿದೆ. ಅಲ್ಲದೆ, ವಾರಾಂತ್ಯದಲ್ಲಿ ಮತ್ತು ವಾರದ ಮಧ್ಯದಲ್ಲಿ ಸ್ಪ್ಯಾಮ್ ಕರೆಗಳ ಆವರ್ತನದಲ್ಲಿ ಭಾರಿ ವ್ಯತ್ಯಾಸವಿದೆ. ಭಾನುವಾರದಂದು ಈ ಕರೆಗಳ ಪ್ರಮಾಣವು ಶೇಕಡಾ 40 ರಷ್ಟು ಕಡಿಮೆಯಾಗಿದೆ. ರೂ. 15,000 ರಿಂದ ರೂ. 20,000 ರವರೆಗಿನ ಬೆಲೆ ಶ್ರೇಣಿಯ ಮೊಬೈಲ್‌ಗಳು ಒಟ್ಟು ಸ್ಪ್ಯಾಮ್ ಕರೆಗಳಲ್ಲಿ ಶೇ. 22 ರಷ್ಟನ್ನು ಹೊಂದಿವೆ.

ಇದನ್ನೂ ಓದಿ: ರಿಚಾರ್ಜ್ ಮಾಡದಿದ್ರೆ ಎಷ್ಟು ದಿನಗಳಲ್ಲಿ ನಿಮ್ಮ ಮೊಬೈಲ್ ನಂಬರ್ ಬೇರೆಯವರಿಗೆ ನೀಡಲಾಗುತ್ತದೆ?

ಇನ್ನು ಭಾರತ ಸರ್ಕಾರವು ಸೇವೆ ಮತ್ತು ವಹಿವಾಟು ಕರೆಗಳಿಗಾಗಿ 160 ಪೂರ್ವಪ್ರತ್ಯಯದೊಂದಿಗೆ 10 ಅಂಕಿ ಸಂಖ್ಯೆಗಳನ್ನು ನಿಗದಿಪಡಿಸಿದೆ. ಗ್ರಾಹಕರು ಬ್ಯಾಂಕ್‌ಗಳು, ಮ್ಯೂಚುಯಲ್ ಫಂಡ್‌ಗಳು, ವಿಮಾ ಕಂಪನಿಗಳು, ಸ್ಟಾಕ್ ಬ್ರೋಕರ್‌ಗಳು, ಇತರ ಹಣಕಾಸು ಸಂಸ್ಥೆಗಳು, ಕಾರ್ಪೊರೇಟ್‌ಗಳು, ಉದ್ಯಮಗಳು, SMEಗಳು, ವಹಿವಾಟು ಮತ್ತು ಸೇವಾ ಕರೆಗಳನ್ನು ಮಾಡಲು ಬಳಸುವ ದೊಡ್ಡ ಮತ್ತು ಸಣ್ಣ ವ್ಯಾಪಾರಗಳಿಗೆ ನಿಗದಿಪಡಿಸಲಾದ ಈ 160 ಪೂರ್ವಪ್ರತ್ಯಯ ಸರಣಿಗಳಿಂದ ಕರೆಗಳನ್ನು ಸ್ವೀಕರಿಸಬಹುದು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:51 am, Tue, 10 December 24

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ