ಬಹುಪಾಲು ಭಾರತೀಯರು ಒಂದು ಅತ್ಯುತ್ತಮ ಸ್ಮಾರ್ಟ್ಫೋನನ್ನು (Smartphone) ಬಜೆಟ್ ಬೆಲೆಯಲ್ಲಿ ಖರೀದಿಸಬೇಕು ಎಂದುಕೊಳ್ಳುತ್ತಾರೆ. ಹಾಗಾಗಿಯೇ, ಭಾರತದಲ್ಲಿ ಬಹುತೇಕ ಎಲ್ಲಾ ಮೊಬೈಲ್ ಕಂಪೆನಿಗಳು ಬಜೆಟ್ ಸ್ಮಾರ್ಟ್ಫೋನ್ಗಳ ತಯಾರಿಕೆಯಲ್ಲಿ ತೊಡಗಿಕೊಂಡಿವೆ. ಮಾರುಕಟ್ಟೆಯು ಅತ್ಯಂತ ಸೂಕ್ಷ್ಮವಾಗಿರುವಂತಹ ಭಾರತದಂತಹ ದೇಶದಲ್ಲಿ ಬೆಲೆಯ ವಿಚಾರವು ಬಹಳಷ್ಟು ಮುಖ್ಯ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಆದರೆ, ಗೇಮಿಂಗ್ ಪ್ರಿಯರಿಗೆ ಈ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳು ಸಾಕಾಗುವುದಿಲ್ಲ. ದೊಡ್ಡ ಗಾತ್ರದ RAM, ಸ್ಟೋರೆಜ್ ಹೊಂದಿರುವ ಫೋನ್ ಇವರ ಆಯ್ಕೆಯಾಗಿರುತ್ತದೆ. ಒಂದು ನೆನಪಿರಲಿ ಗೇಮಿಂಗ್ ಸ್ಮಾರ್ಟ್ಫೋನ್ಗಳ (Gaming Smartphone) ಬೆಲೆ ಹೆಚ್ಚು ಎಂಬ ಕಾಲವೀಗ ಹೋಗಿದೆ. ಕಡಿಮೆ ಬೆಲೆಗೆವೇ ಆಕರ್ಷಕ ಫೀಚರ್ಗಳುಳ್ಳ, ಸುಲಭವಾಗಿ ಗೇಮ್ ಆಡಬಹುದಾದ ಫೋನುಗಳು ಮಾರುಕಟ್ಟೆಯಲ್ಲಿವೆ. ಹಾಗಾದ್ರೆ ಸದ್ಯ 15 ಸಾವಿರಕ್ಕಿಂತ (Under 15,000 Smartphone) ಕಡಿಮೆ ಬೆಲೆಗೆ ದೊರಕುವ ಬೆಸ್ಟ್ ಗೇಮಿಂಗ್ ಸ್ಮಾರ್ಟ್ಫೋನ್ಗಳು ಯಾವುದು ಎಂಬುದನ್ನು ನೋಡೋಣ.
ರೆಡ್ಮಿ ನೋಟ್ 11T 5G ಸ್ಮಾರ್ಟ್ಫೋನ್ ಕಳೆದ ವಾರವಷ್ಟೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದು 6.6-ಇಂಚಿನ ಫುಲ್ HD+ ಡಿಸ್ಪ್ಲೇ ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ MIUI 12.5 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ Mali-G57 MC2 GPU ಹೊಂದಿದೆ. ಇದು Realme ಮತ್ತು Vivo ಸ್ಮಾರ್ಟ್ಫೋನ್ಗಳಲ್ಲಿ ಕಂಡುಬರುವ ಡೈನಾಮಿಕ್ RAM ವಿಸ್ತರಣೆಯನ್ನು ಹೋಲುತ್ತದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. ಇದು 33W ಪ್ರೊ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 14,999 ರೂ. ಗೆ ಈ ಫೋನನ್ನು ಆಫರ್ನಲ್ಲಿ ಖರೀದಿಸಬಹುದು.
ರಿಯಲ್ ಮಿ ನಾರ್ಜೊ 30 5G ಕೂಡ ಕಡಿಮೆ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಗೇಮಿಂಗ್ ಫೋನ್ ಆಗಿದೆ. ಇದು 6.5-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 5G SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದ್ದು, ಆಂಡ್ರಾಯ್ಡ್ 11 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದರ ಬ್ಯಾಟರಿ ಪವರ್ ಕೂಡ ಉತ್ತಮವಾಗಿದ್ದು, 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದರೊಂದಿಗೆ 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕಡಿಮೆ ಬೆಲೆಗೆ 5G ನೆಟ್ವರ್ಕ್ ಇರುವ ಕೆಲವೇ ಸ್ಮಾರ್ಟ್ ಫೋನುಗಳ ಸಾಲಿಗೆ ಇದುಕೂಡ ಸೇರಲಿದೆ. ಇದರ ಬೆಲೆ 14,999 ರೂ. ಆಗಿದೆ.
ಪೊಕೊ M3 ಪ್ರೊ 5G ಸ್ಮಾರ್ಟ್ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಹೆಚ್ಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 700SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಫೋನ್ 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್ಫೋನ್ ಕೇವಲ 13,999 ರೂ.ಬೆಲೆಯಲ್ಲಿ ಲಭ್ಯವಾಗುತ್ತಿದೆ.
ಮೋಟೋ G30 ಫೋನ್ ಸ್ನ್ಯಾಪ್ಡ್ರಾಗನ್ 662 SoC ಪ್ರೊಸೆಸರ್ ಅನ್ನು ಹೊಂದಿದೆ. ಕ್ವಾಡ್ ಕ್ಯಾಮೆರಾ ಸೆಟ್ಅಪ್ ಅನ್ನು ಪಡೆದಿದ್ದು, 6.5 ಇಂಚಿನ ಪೂರ್ಣ ಹೆಚ್ಡಿ ಡಿಸ್ ಪ್ಲೇ ಇದರಲ್ಲಿದೆ. ಡಿಸ್ ಪ್ಲೇಯು 90Hz ರಿಫ್ರೆಶ್ ರೇಟ್ ಆಗಿದೆ. ಇದರೊಂದಿಗೆ 5,000mAh ದೀರ್ಘ ಬ್ಯಾಟರಿ ಬಾಳಿಕೆ ಪಡೆದಿರುವುದು ಮತ್ತೊಂದು ಹೈಲೈಟ್. ಅಲ್ಲದೆ ಆಂಡ್ರಾಯ್ಡ್ 11 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಈ ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ವಿಸ್ತರಣೆಗೆ ಅವಕಾಶ ನೀಡಿದೆ. ಇದರ ಬೆಲೆ 10,999 ರೂ.
Best Smartphone: 25,000 ರೂ. ಒಳಗೆ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್ಫೋನ್ಗಳು ಇಲ್ಲಿವೆ ನೋಡಿ
Realme GT 2 series: ಮಾರುಕಟ್ಟೆಗೆ ಲಗ್ಗೆಯಿಟ್ಟ ರಿಯಲ್ ಮಿ GT 2, GT 2 ಪ್ರೊ: ಖರೀದಿಸಲು ಕ್ಯೂ ಗ್ಯಾರಂಟಿ