ನಿಮ್ಮ ಮೊಬೈಲನ್ನು ಸದಾ ಎಚ್ಚರದಿಂದಿಡಲು ಈ ಪವರ್​ ಬ್ಯಾಂಕ್​ಗಳು ಉತ್ತಮ ಆಯ್ಕೆ

Power Bank: ಈಗಂತೂ ನಾನಾ ಕಂಪೆನಿಗಳು ಪವರ್ ಬ್ಯಾಂಕ್ ತಯಾರಿಕೆ ಆರಂಭಿಸಿರುವ ಕಾರಣ ಯಾವುದನ್ನು ಕೊಳ್ಳಬೇಕು, ಯಾವುದನ್ನು ಬಿಡಬೇಕು ಎನ್ನುವುದೂ ಒಂದು ಸಮಸ್ಯೆಯಂತಾಗಿ ಹೋಗಿದೆ. ಈ ಕಾರಣದಿಂದಾಗಿಯೇ ಸದ್ಯ ಮಾರುಕಟ್ಟೆಯಲ್ಲಿರುವ ಪವರ್​ ಬ್ಯಾಂಕ್ ಪೈಕಿ ಯಾವುದು ಉತ್ತಮ? ಎನ್ನುವ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

  • TV9 Web Team
  • Published On - 20:54 PM, 8 Mar 2021
ನಿಮ್ಮ ಮೊಬೈಲನ್ನು ಸದಾ ಎಚ್ಚರದಿಂದಿಡಲು ಈ ಪವರ್​ ಬ್ಯಾಂಕ್​ಗಳು ಉತ್ತಮ ಆಯ್ಕೆ
ಸಂಗ್ರಹ ಚಿತ್ರ

ತಂತ್ರಜ್ಞಾನ ಬೆಳೆಯುತ್ತಾ ಹೋದಂತೆ ಮನುಷ್ಯನ ಅನಿವಾರ್ಯತೆ ಮತ್ತು ಅವಶ್ಯಕತೆ ಸಹ ಬದಲಾಗುತ್ತಾ ಹೋಗುತ್ತದೆ. ದಶಕದ ಹಿಂದೆಯಷ್ಟೇ ಹೊಸ ವಸ್ತುವಾಗಿ ನಮಗೆ ಪರಿಚಯಗೊಂಡಿದ್ದ ಮೊಬೈಲ್​ ಈಗ ಬದಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿವೆ. ಸ್ಮಾರ್ಟ್​ಫೋನ್ ಬಂದಮೇಲಂತೂ ಕೇವಲ ಸಂಪರ್ಕ, ಸಂವಹನಕ್ಕಷ್ಟೇ ಅಲ್ಲದೇ ಬಹುತೇಕ ಎಲ್ಲಾ ವ್ಯವಹಾರಗಳಿಗೂ ಮೊಬೈಲ್​ ಬೇಕೇಬೇಕು. ಆದರೆ, ಎಷ್ಟೋ ಸಂದರ್ಭಗಳಲ್ಲಿ ಮೊಬೈಲ್ ಚಾರ್ಜ್​ ಕಡಿಮೆಯಾಗಿ ಮೊಬೈಲಿನ ಜೀವ ಹೋಗಿ ನಮ್ಮ ಕೆಲಸ ಕಾರ್ಯಗಳೆಲ್ಲಾ ಬುಡಮೇಲಾಗುತ್ತವೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಒದಗಿಸಿಕೊಡಲೆಂದೇ ಮೊಬೈಲಿಗೆ ಜೋಡಿಯಾಗಿ ಹೆಚ್ಚೂಕಡಿಮೆ ಅದರಷ್ಟೇ ಗಾತ್ರದ ಪವರ್​ ಬ್ಯಾಂಕ್​ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡವು. ಈಗಂತೂ ನಾನಾ ಕಂಪೆನಿಗಳು ಪವರ್ ಬ್ಯಾಂಕ್ ತಯಾರಿಕೆ ಆರಂಭಿಸಿರುವ ಕಾರಣ ಯಾವುದನ್ನು ಕೊಳ್ಳಬೇಕು, ಯಾವುದನ್ನು ಬಿಡಬೇಕು ಎನ್ನುವುದೂ ಒಂದು ಸಮಸ್ಯೆಯಂತಾಗಿ ಹೋಗಿದೆ. ಈ ಕಾರಣದಿಂದಾಗಿಯೇ ಸದ್ಯ ಮಾರುಕಟ್ಟೆಯಲ್ಲಿರುವ ಪವರ್​ ಬ್ಯಾಂಕ್ ಪೈಕಿ ಯಾವುದು ಉತ್ತಮ? ಎನ್ನುವ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

1. ಪಿಟ್ರೋನ್ ಡೈನಮೋ ಲೈಟ್ 10000mAh (pTron Dynamo Lite 10000mAh Li-Polymer Power Bank)
2. ಇಂಟೆಕ್ಸ್​ ಪವರ್ ಬ್ಯಾಂಕ್ (Intex Power Bank)
3. ರಿಯಲ್ ಮಿ 10000mAh ಪವರ್ ಬ್ಯಾಂಕ್ (Realme 10000mAH Power Bank)
4. ಎಂಐ ಪವರ್ ಬ್ಯಾಂಕ್ (Mi Power Bank)
5. ರೆಡ್​ಮೀ ಪವರ್ ಬ್ಯಾಂಕ್ (Redmi Power Bank)
6. ಯುಆರ್​ಬಿಎನ್​ ಪವರ್ ಬ್ಯಾಂಕ್ (URBN Power Bank)
7. ಫಿಲಿಪ್ಸ್ ಫಾಸ್ಟ್ ಚಾರ್ಜಿಂಗ್ ಪವರ್ ಬ್ಯಾಂಕ್ (Philips Fast Charging Power Bank)

ಪಿಟ್ರೋನ್ ಡೈನಮೋ ಲೈಟ್: ಕಪ್ಪು ಬಣ್ಣದ ಆಕರ್ಷಕ ವಿನ್ಯಾಸ ಹೊಂದಿರುವ ಪಿಟ್ರೋನ್ ಡೈನಮೋ ಲೈಟ್ ಪವರ್​ ಬ್ಯಾಂಕ್ 10000mAh ಸಾಮರ್ಥ್ಯದ ಲಿ-ಪಾಲಿಮರ್​ ಬ್ಯಾಟರಿ ಮತ್ತು ಯುಎಸ್​ಬಿ ಪೋರ್ಟ್​ ಹೊಂದಿದ್ದು, ಏಕಕಾಲಕ್ಕೆ ಒಂದಕ್ಕಿಂತ ಹೆ್ಚ್ಚು ಮೊಬೈಲ್ ಚಾರ್ಜ್​ ಮಾಡಬಹುದಾಗಿದೆ.

ಇಂಟೆಕ್ಸ್​ ಪವರ್ ಬ್ಯಾಂಕ್: ಲಿ-ಐಯಾನ್​ ಮಾದರಿಯ ಬ್ಯಾಟರಿ ಹೊಂದಿರುವ ಈ ಪವರ್​ ಬ್ಯಾಂಕ್ ಚಿಕ್ಕದಾಗಿದ್ದು, ಜೊತೆಯಲ್ಲಿ ಕೊಂಡೊಯ್ಯಲು ಸಹಕಾರಿಯಾಗಿದೆ.

ರಿಯಲ್ ಮಿ 10000mAh ಪವರ್ ಬ್ಯಾಂಕ್: ಆಕರ್ಷಕ ಬಣ್ಣ ಮತ್ತು ಆಕಾರದಲ್ಲಿರುವ ಈ ಪವರ್​ ಬ್ಯಾಂಕ್ 3,000mAh ಸಾಮರ್ಥ್ಯದ ಬ್ಯಾಟರಿಯುಳ್ಳ ಮೊಬೈಲನ್ನು 2.3 ಬಾರಿ ಮತ್ತು 4,000mAh ಸಾಮರ್ಥ್ಯದ ಬ್ಯಾಟರಿಯುಳ್ಳ ಮೊಬೈಲನ್ನು 1.8 ಸಲ ಚಾರ್ಜ್​ ಮಾಡಬಲ್ಲದು.

ಎಂಐ ಪವರ್ ಬ್ಯಾಂಕ್: ವಿಭಿನ್ನ ಬಣ್ಣದಲ್ಲಿ ಲಭ್ಯವಿರುವ ಈ ಪವರ್​ ಬ್ಯಾಂಕ್ 10000mAh ಸಾಮರ್ಥ್ಯದ ಲಿಥಿಯಮ್ ಪಾಲಿಮರ್ ಬ್ಯಾಟರಿ ಹೊಂದಿದ್ದು, 12 ಸುರಕ್ಷತಾ ಪದರಗಳಿಂದ ಮಾಡಲಾಗಿದೆ ಎಂಬುದು ಇದರ ಹೆಚ್ಚುಗಾರಿಕೆ. ತಲಾ ಎರಡು ಔಟ್​ಪುಟ್ ಹಾಗೂ ಇನ್​ಪುಟ್​ ಹೊಂದಿರುವ ಈ ಪವರ್​ ಬ್ಯಾಂಕ್​ ಒಂದು ಮೈಕ್ರೋ ಯುಎಸ್​ಬಿ ಮತ್ತು ಒಂದು ಸಿ ಟೈಪ್​ ಇನ್​ಪುಟ್​ ಪೋರ್ಟ್​ ಹೊಂದಿದೆ.

ರೆಡ್​ಮೀ ಪವರ್ ಬ್ಯಾಂಕ್: 20000mAh ಸಾಮರ್ಥ್ಯದ ಪವರ್​ ಬ್ಯಾಂಕ್​ ಇದಾಗಿದ್ದು, ಎರಡು ಇನ್​ಪುಟ್​ ಪೋರ್ಟಲ್​ಗಳನ್ನು ಹೊಂದಿದೆ.

ಯುಆರ್​ಬಿಎನ್​ ಪವರ್ ಬ್ಯಾಂಕ್: ವಿಭಿನ್ನ ಬಣ್ಣದಲ್ಲಿ ಲಭ್ಯವಿರುವ ಈ ಪವರ್​ ಬ್ಯಾಂಕ್​ 3000mAh ಸಾಮರ್ಥ್ಯದ ಬ್ಯಾಟರಿಯುಳ್ಳ ಮೊಬೈಲನ್ನು 4.7 ಬಾರಿ ಮತ್ತು 4,000mAh ಸಾಮರ್ಥ್ಯದ ಬ್ಯಾಟರಿಯುಳ್ಳ ಮೊಬೈಲನ್ನು 3.5 ಬಾರಿ ಚಾರ್ಜ್​ ಮಾಡಬಹುದಾಗಿದೆ.

ಫಿಲಿಪ್ಸ್ ಫಾಸ್ಟ್ ಚಾರ್ಜಿಂಗ್ ಪವರ್ ಬ್ಯಾಂಕ್: ಪವರ್​ ಬ್ಯಾಂಕ್ 10000mAh ಸಾಮರ್ಥ್ಯದ ಲಿಥಿಯಮ್ ಪಾಲಿಮರ್​ ಬ್ಯಾಟರಿ ಹೊಂದಿದ್ದು, ಚಾರ್ಜಿಂಗ್​ ವೇಳೆ ಬಿಸಿಯಾಗದಂತೆ ತಡೆಯುವ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ:
Redmi Note 10 ಸೀರಿಸ್​ ಮೊಬೈಲ್​ಗೆ 103 MP ಕ್ಯಾಮೆರಾ! ಕೈಗೆಟುಕುವ ದರ

ಮಹಿಳೆಯರೇ ಸುರಕ್ಷಿತವಾಗಿರಲಿ ನಿಮ್ಮ ಫೇಸ್​ಬುಕ್, ಇನ್​ಸ್ಟಾಗ್ರಾಂ ಖಾತೆ