Hidden Camera: ಜೋಡಿಯಾಗಿ ಹೋಟೆಲ್ ರೂಮ್​ಗೆ ಹೋದಾಗ ಇವುಗಳ ಮೇಲೆ ನಿಗಾ ಇರಲಿ

ಕಳೆದ ವರ್ಷ ನೋಯ್ಡಾದ ಹೋಟೆಲ್ ಒಂದರಲ್ಲಿ ದಂಪತಿಗಳ ನಡುವಣ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿ, ಬೆದರಿಸಿ, ಹಣ ಸುಲಿಗೆ ಮಾಡಲು ಪ್ರಯತ್ನಿಸಿದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದರು.

Hidden Camera: ಜೋಡಿಯಾಗಿ ಹೋಟೆಲ್ ರೂಮ್​ಗೆ ಹೋದಾಗ ಇವುಗಳ ಮೇಲೆ ನಿಗಾ ಇರಲಿ
Hidden Camera Hotel
Follow us
|

Updated on: Jun 23, 2023 | 2:44 PM

ಇತ್ತೀಚೆಗೆ ಹಿಡನ್ ಕ್ಯಾಮೆರಾ (Hidden Camera) ಬಳಸಿ ಜನರ ಫೋಟೋ, ವೀಡಿಯೋ ತೆಗೆದು ಬೆದರಿಕೆ ಹಾಕುವ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಹಲವು ಪೊಲೀಸ್ (Police) ಠಾಣೆಗಳಲ್ಲಿ ಈ ರೀತಿಯ ಪ್ರಕರಣಗಳು ದಾಖಲಾಗುತ್ತಿದೆ. ಹನಿಮೂನ್ ದಂಪತಿಗಳನ್ನು ಅಥವಾ ಟೂರ್​ಗೆಂದು ಬಂದ ದಂಪತಿಗಳನ್ನು ಗುರಿಯಾಗಿಸಿ ಕ್ರಿಮಿನಲ್‌ಗಳು ಅವರು ನೆಲೆಸಿದ್ದ ಹೊಟೇಲ್ ರೂಮ್​ಗಳಲ್ಲಿನ (Hotel Room) ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಇತ್ತೀಚೆಗಷ್ಟೆ ದಕ್ಷಿಣ ಕೊರಿಯಾದಲ್ಲಿ, ಇಂತಹ ಘಟನೆಯಿಂದ 1000 ಕ್ಕೂ ಹೆಚ್ಚು ಜನರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಕೇವಲ ವಿದೇಶದಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಇದೇ ರೀತಿಯ ಕೆಲವು ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ನೋಯ್ಡಾದ ಹೋಟೆಲ್ ಒಂದರಲ್ಲಿ ದಂಪತಿಗಳ ನಡುವಣ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿ, ಬೆದರಿಸಿ, ಹಣ ಸುಲಿಗೆ ಮಾಡಲು ಪ್ರಯತ್ನಿಸಿದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದರು. ಅಂತೆಯೆ ಉತ್ತರಾಖಂಡ್‌ನ ತೆಹ್ರಿಯಲ್ಲಿ ಯುವ ದಂಪತಿಗಳು ತಮ್ಮ ಹೋಟೆಲ್ ಕೋಣೆಯ ಸೀಲಿಂಗ್ ಫ್ಯಾನ್‌ನಲ್ಲಿ ಕ್ಯಾಮೆರಾ ಇರುವುದನ್ನು ಕಂಡು ದೂರು ನೀಡಿದ್ದರು. ಈರೀತಿಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಹಲವಾರು ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಮುಖ್ಯ. ಅದಕ್ಕಾಗಿಯೇ ನೀವು ಹೋಟೆಲ್ ಕೊಠಡಿಗಳಲ್ಲಿ ತಂಗಿದಾಗ ಪರಿಶೀಲಿಸಬೇಕಾದ ಮುಖ್ಯ ಅಂಶಗಳನ್ನು ನಾವು ನಿಮಗೆ ಹೇಳುತ್ತೇವೆ.

Nothing Phone 2: ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ ಹೊಸ ನಥಿಂಗ್ ಫೋನ್

ಇದನ್ನೂ ಓದಿ
Image
Jio Phone 5G: ಬಹುನಿರೀಕ್ಷಿತ ಜಿಯೋ ಫೋನ್ 5G ಯ ಮೊದಲ ಫೋಟೋ ಸೋರಿಕೆ: ಬೆಲೆ ಎಷ್ಟು ಗೊತ್ತೇ?
Image
Pink WhatsApp: ಎರಡು ವರ್ಷಗಳ ಬಳಿಕ ಮತ್ತೆ ಬಂದ ಪಿಂಕ್ ವಾಟ್ಸ್​ಆ್ಯಪ್: ತಪ್ಪಿಯೂ ಆ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ
Image
Fridge Door: ಫ್ರಿಡ್ಜ್ ಡೋರ್​ನ ರಬ್ಬರ್​ನಲ್ಲಿ ಕೊಳೆ ಇದ್ದರೆ ಈ ಸರಳ ವಿಧಾನದಿಂದ ನಿಮಿಷಗಳಲ್ಲಿ ಕ್ಲೀನ್ ಮಾಡಿ
Image
SnapChat: ಬೆಂಗಳೂರಿನಲ್ಲಿ ಹೆಚ್ಚು ಬಳಕೆಯಾಗುವ ಅಡ್ಡ ಹೆಸರುಗಳನ್ನು ಬಿಡುಗಡೆ ಮಾಡಿದ ಸ್ನ್ಯಾಪ್ ಚಾಟ್

ಸೀಲಿಂಗ್ ಫ್ಯಾನ್ ಪರೀಕ್ಷಿಸಿ: ಫ್ಯಾನ್‌ನ ಮಧ್ಯಭಾಗದಲ್ಲಿ ಚಿಕ್ಕ ರಂದ್ರದಂತೆ ಇದ್ದರೆ ಟಾರ್ಚ್‌ ಮೂಲಕ ಸರಿಯಾಗಿ ಪರಿಶೀಲಿಸಿ. ಕ್ಯಾಮೆರಾ ಬ್ಲಿಂಕ್ ಲೈಟ್ ಇಲ್ಲ ಎಂದು ಖಚಿತಪಡಿಸಿಕೊಳ್ಳಿ. ಅಂತೆಯೆ ಹೆಚ್ಚಿನ ರೂಮ್​ನ ಎಲ್ಲ ಜಾಗವನ್ನು ಪರಿಶೀಲಿಸಿ. ಮುಖ್ಯವಾಗಿ ವಿಚಿತ್ರವಾಗಿ ಇರಿಸಲಾದ ಕನ್ನಡಿಗಳು ಅಥವಾ ಲೈಟ್, ಗಿಡಗಳ ನಡುವೆ ಒಮ್ಮೆ ಕಣ್ಣು ಹಾಹಿಸಿ. ಅನಾವಶ್ಯಕವಾದ, ಹೆಚ್ಚುವರಿ ವೈರ್ ಕೂಡ ಹಿಡನ್ ಕ್ಯಾಮರಾಕ್ಕೆ ಸಂಪರ್ಕ ಹೊಂದಿರಬಹುದು.

ಸ್ಪೀಕರ್‌ಗಳು: ಹಿಡನ್ ಕ್ಯಾಮೆರಾಗಳನ್ನು ಸ್ಪೀಕರ್‌ಗಳು, ಮ್ಯೂಸಿಕ್ ಸಿಸ್ಟಮ್‌ಗಳ ಸ್ಪೀಕರ್ ಅಥವಾ ಟಿವಿಗಳಲ್ಲಿ ಸುಲಭವಾಗಿ ಇರಿಸಬಹುದು. ಟಾರ್ಚ್​ನೊಂದಿಗೆ ಅವುಗಳನ್ನು ಪರಿಶೀಲಿಸಿ. ನಿಮಗೆ ಅನುಮಾನ ಇದ್ದರೆ ಅದನ್ನು ಟವೆಲ್ ಅಥವಾ ಟಿಶ್ಯೂ ಪೇಪರ್‌ನಿಂದ ಮುಚ್ಚಿಬಿಡಿ. ಹಾಗೆಯೆ ಬಾತ್​ರೂಮ್​ನಲ್ಲಿರುವ ಟವೆಲ್, ಹೇರ್ ಡ್ರೈಯರ್ ಹೋಲ್ಡರ್​ಗಳನ್ನು ಪರಿಶೀಲಿಸಿ. ಕ್ಯಾಮೆರಾಗಳಲ್ಲಿ ಚಿಕ್ಕದಾದ ಕೆಂಪು ಲೈಟ್​ ಆನ್ ಆಗಿರುತ್ತದೆ. ಹೀಗಾಗಿ ರಾತ್ರಿಯಲ್ಲಿ ಎಲ್ಲ ಲೈಟ್​ಗಳನ್ನು ಆಫ್ ಮಾಡಿ ಸೂಕ್ಷ್ಮವಾಗಿ ಇದನ್ನು ಗಮನಿಸಿ.

ಹಿಡನ್‌ ಕ್ಯಾಮೆರಾ ಡಿಟೆಕ್ಟರ್

ನಿಮ್ಮ ಸ್ಮಾರ್ಟ್‌ಫೋನ್​ನಲ್ಲಿ ಪ್ಲೇ ಸ್ಟೋರ್​ಗೆ ಹೋದರೆ ಅಲ್ಲಿ ಹಿಡನ್‌ ಕ್ಯಾಮೆರಾ ಡಿಟೆಕ್ಟರ್ ಎಂಬ ಆ್ಯಪ್‌ ಸಿಗುತ್ತದೆ. ಇದನ್ನು ಡೌನ್‌ಲೋಡ್ ಮಾಡಿ ಅದರ ಸಹಾಯದಿಂದ ಹಿಡನ್‌ ಕ್ಯಾಮೆರಾಗಳನ್ನು ಪತ್ತೆಹಚ್ಚಬಹುದು. ಈ ಆ್ಯಪ್​ನಲ್ಲಿ 8 ಆಯ್ಕೆಗಳಿರುತ್ತವೆ. ಮೊದಲನೆಯದು Detect Wired Camera ಎಂಬ ಆಯ್ಕೆ. ಇದನ್ನು ಸೆಲೆಕ್ಟ್ ಆಡಿದರೆ ನೀವು ನಡೆದುಕೊಂಡ ಜಾಗವನ್ನು ಸ್ಕ್ಯಾನ್ ಮಾಡುತ್ತದೆ. ಹಿಡನ್ ಕ್ಯಾಮೆರಾ ಇದೆಯಾ ಎಂಬುದನ್ನು ತಿಳಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಚನ್ನಪಟ್ಟಣದಲ್ಲಿ ನಾನೇ ಮುಖ್ಯಮಂತ್ರಿ ಅಂತ ಶಿವಕುಮಾರ್ ಹೇಳುತ್ತಾರೆ: ಅಶೋಕ
ಚನ್ನಪಟ್ಟಣದಲ್ಲಿ ನಾನೇ ಮುಖ್ಯಮಂತ್ರಿ ಅಂತ ಶಿವಕುಮಾರ್ ಹೇಳುತ್ತಾರೆ: ಅಶೋಕ
ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದ ಮುನಿರತ್ನ
ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದ ಮುನಿರತ್ನ
ಕುಮಾರಸ್ವಾಮಿಯನ್ನು ಸಿಎಂ ಮಾಡಲು ನಾನು ಬಸ್ ಓಡಿಸಿದ್ದು: ಜಮೀರ್ ಅಹ್ಮದ್
ಕುಮಾರಸ್ವಾಮಿಯನ್ನು ಸಿಎಂ ಮಾಡಲು ನಾನು ಬಸ್ ಓಡಿಸಿದ್ದು: ಜಮೀರ್ ಅಹ್ಮದ್
ಮಹಿಳೆಯ ಎದೆ ಸ್ಪರ್ಶಿಸಿ ಪರಾರಿಯಾದ ಯುವಕನ ಬಂಧನ; ವಿಡಿಯೋ ವೈರಲ್​​
ಮಹಿಳೆಯ ಎದೆ ಸ್ಪರ್ಶಿಸಿ ಪರಾರಿಯಾದ ಯುವಕನ ಬಂಧನ; ವಿಡಿಯೋ ವೈರಲ್​​