Cyber Crime: ನಿಮ್ಮ ಫೋನ್‌ನಲ್ಲಿ 1930 ಸಂಖ್ಯೆಯನ್ನು ಸೇವ್ ಮಾಡಿದ್ದೀರ? ಇದರಿಂದ ಏನು ಪ್ರಯೋಜನ?

1930 ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ. ಇದನ್ನು ಭಾರತ ಸರ್ಕಾರವು ವಿಶೇಷವಾಗಿ ಸೈಬರ್ ವಂಚನೆಗೆ ಸಂಬಂಧಿಸಿದ ದೂರುಗಳಿಗಾಗಿ ಪ್ರಾರಂಭಿಸಿತು. ನೀವು ಅನುಭವಿಸಿದ ಯಾವುದೇ ಆನ್‌ಲೈನ್ ವಂಚನೆಯನ್ನು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ವರದಿ ಮಾಡಬಹುದು. ಈ ಸಂಖ್ಯೆ ದೇಶಾದ್ಯಂತ ಕಾರ್ಯನಿರ್ವಹಿಸುತ್ತದೆ. ಎಲ್ಲಾ ರಾಜ್ಯಗಳ ಪೊಲೀಸರು ಇದನ್ನು ಸಕ್ರಿಯಗೊಳಿಸಿದ್ದಾರೆ.

Cyber Crime: ನಿಮ್ಮ ಫೋನ್‌ನಲ್ಲಿ 1930 ಸಂಖ್ಯೆಯನ್ನು ಸೇವ್ ಮಾಡಿದ್ದೀರ? ಇದರಿಂದ ಏನು ಪ್ರಯೋಜನ?
1930

Updated on: May 19, 2025 | 11:49 AM

ಬೆಂಗಳೂರು (ಮೇ. 19): ಇಂದಿನ ಡಿಜಿಟಲ್ ಯುಗದಲ್ಲಿ, ಸೈಬರ್ ವಂಚನೆ ಪ್ರಕರಣಗಳು (Cyber Crime) ವೇಗವಾಗಿ ಹೆಚ್ಚುತ್ತಿವೆ. ಕ್ಷಣಾರ್ಧದಲ್ಲಿ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಮಾಯವಾಗಬಹುದು. ಅಲ್ಲದೆ, ಕೆಲವೊಮ್ಮೆ ಜನರು OTP ಅಥವಾ ವಿಡಿಯೋ ಕರೆಗಳ ಮೂಲಕ ಮೋಸ ಹೋಗುತ್ತಿದ್ದಾರೆ. ಅಂತಹ ಸಮಯದಲ್ಲಿ, ಅನೇಕ ಜನರಿಗೆ ತಕ್ಷಣ ಏನು ಮಾಡಬೇಕೆಂದು ಮತ್ತು ಎಲ್ಲಿ ದೂರು ನೀಡಬೇಕೆಂದು ತಿಳಿದಿರುವುದಿಲ್ಲ. ಈ ಸಮಸ್ಯೆಯಿಂದ ಜನರನ್ನು ರಕ್ಷಿಸಲು ಸರ್ಕಾರ 1930 ಎಂಬ ವಿಶೇಷ ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿದೆ. ಈ ಸಂಖ್ಯೆಯು ಸಾರ್ವಜನಿಕರ ಅನುಕೂಲಕ್ಕಾಗಿ ದಿನದ 24 ಗಂಟೆಗಳು, ವಾರದ 7 ದಿನಗಳು ಸಕ್ರಿಯವಾಗಿರುತ್ತದೆ. ಈ ಸಂಖ್ಯೆಯ ಮೂಲಕ ನೀವು ಆರ್ಥಿಕ ವಂಚನೆ ಪ್ರಕರಣವನ್ನು ಹೇಗೆ ದಾಖಲಿಸಿಕೊಳ್ಳಬಹುದು ಎಂಬುದನ್ನು ನೋಡೋಣ.

ಏನಿದು 1930 ಸಂಖ್ಯೆ?

1930 ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ. ಇದನ್ನು ಭಾರತ ಸರ್ಕಾರವು ವಿಶೇಷವಾಗಿ ಸೈಬರ್ ವಂಚನೆಗೆ ಸಂಬಂಧಿಸಿದ ದೂರುಗಳಿಗಾಗಿ ಪ್ರಾರಂಭಿಸಿತು. ನೀವು ಅನುಭವಿಸಿದ ಯಾವುದೇ ಆನ್‌ಲೈನ್ ವಂಚನೆಯನ್ನು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ವರದಿ ಮಾಡಬಹುದು. ಈ ಸಂಖ್ಯೆ ದೇಶಾದ್ಯಂತ ಕಾರ್ಯನಿರ್ವಹಿಸುತ್ತದೆ. ಎಲ್ಲಾ ರಾಜ್ಯಗಳ ಪೊಲೀಸರು ಇದನ್ನು ಸಕ್ರಿಯಗೊಳಿಸಿದ್ದಾರೆ.

ಇದನ್ನೂ ಓದಿ
ಬರೋಬ್ಬರಿ 27 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಲ್ಯಾಪ್‌ಟಾಪ್ ಬಿಡುಗಡೆ
BSNLನ ಹೊಸ ಆಫರ್​ಗೆ ದಂಗಾದ ಜಿಯೋ-ಏರ್ಟೆಲ್: 450 ಲೈವ್ ಟಿವಿ ಉಚಿತ
ಮುಂದಿನ ತಿಂಗಳೇ ಆಂಡ್ರಾಯ್ಡ್ 16 ಬಿಡುಗಡೆ
ಇಂದಿನ ದಿನಗಳಲ್ಲಿ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವುದು ಸುರಕ್ಷಿತವೇ?

1930 ಗೆ ಯಾವಾಗ ಡಯಲ್ ಮಾಡಬೇಕು?

ನಿಮಗೆ ತಿಳಿಯದೆ, ನಿಮ್ಮ ಬ್ಯಾಂಕ್ ಖಾತೆಯಿಂದ ಇದ್ದಕ್ಕಿದ್ದಂತೆ ಹಣ ಕಟ್ ಆದರೆ ನೀವು ಈ ಸಂಖ್ಯೆಯನ್ನು ಡಯಲ್ ಮಾಡಬೇಕು. ನಕಲಿ OTP ಅಥವಾ ಕರೆಯ ಮೂಲಕ ವಂಚನೆ ಸಂಭವಿಸಿದಾಗ ಅಥವಾ ಯಾರಾದರೂ ನಿಮಗೆ ವಿಡಿಯೋ ಕರೆ ಮಾಡಿ ಬೆದರಿಕೆ ಹಾಕಿ ಹಣ ಕೇಳಿದಾಗ ಡಯಲ್ ಮಾಡಬೇಕು. ಯಾವುದೇ ವೆಬ್‌ಸೈಟ್ ಅಥವಾ ಲಿಂಕ್ ಮೂಲಕ ವಂಚನೆ ಸಂಭವಿಸಿದರೆ.. ನೀವು ಸೈಬರ್ ವಂಚನೆಗೆ ಬಲಿಯಾಗಿದ್ದೀರಿ ಎಂದು ಭಾವಿಸಿದರೆ ತಕ್ಷಣ 1930 ಗೆ ಕರೆ ಮಾಡಿ.

Acer Aspire 16 AI: ಬರೋಬ್ಬರಿ 27 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಲ್ಯಾಪ್‌ಟಾಪ್ ಬಿಡುಗಡೆ: ಬೆಲೆ ಎಷ್ಟು?

ಹೆಚ್ಚಿನ ಸಮಯದಲ್ಲಿ ಸೈಬರ್ ವಂಚಕರು ಹಣ ಕದಿಯುವ ಉದ್ದೇಶದಿಂದ ಮೆಸೇಜ್ ಕಳುಹಿಸುವುದು, ಗಿಫ್ಟ್ ಆಫರ್, ಕ್ರೆಡಿಟ್ ಕಾರ್ಡ್ ಪಾಸ್ ವರ್ಡ್ ಚೇಂಜ್ ಎಂಬ ಆಫರ್ ಸಂದೇಶ ಅಥವಾ ಕರೆಗಳನ್ನು ಸ್ವೀಕರಿಸುತ್ತಾರೆ. ಆಗ ಆಕಸ್ಮಿಕವಾಗಿ ಗೊತ್ತಿಲ್ಲದೇ ಸೈಬರ್ ವಂಚಕರ ಜಾಲಕ್ಕೆ ಬಿದ್ದು ಹಣ ಕಳೆದಕೊಂಡರೆ, ಕಳೆದುಕೊಂಡ ಒಂದು ಗಂಟೆಯ ಒಳಗೆ ಪೊಲೀಸ್ ಕಂಟ್ರೋಲ್ ರೂಮ್ 1930 ಗೆ ಕರೆ ಮಾಡಿ. ಹಣ ಕಳೆದುಕೊಂಡ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ ಸಿಬ್ಬಂದಿ ಕೇಳುವ ಪೂರ್ಣ ವಿವರ ನೀಡಬೇಕು. ಇದನ್ನು ಗೋಲ್ಡನ್ ಅವರ್ ಎಂದು ಕರೆಯುತ್ತಾರೆ.

ಯಾವ ಮಾಹಿತಿಯನ್ನು ಒದಗಿಸಬೇಕು?

ಕರೆ ಮಾಡಿದ ನಂತರ, ನಿಮ್ಮ ಪೂರ್ಣ ಹೆಸರು, ಮೊಬೈಲ್ ಸಂಖ್ಯೆ, ಮನೆ ವಿಳಾಸ ಮತ್ತು ನಡೆದ ವಂಚನೆಯಂತಹ ಮೂಲ ವಿವರಗಳನ್ನು ನೀವು ಒದಗಿಸಬೇಕಾಗುತ್ತದೆ. ಇದರೊಂದಿಗೆ, www.cybercrime.gov.in ಪೋರ್ಟಲ್‌ನಲ್ಲಿ ನಿಮ್ಮ ಪ್ರಕರಣವನ್ನು ಆನ್‌ಲೈನ್‌ನಲ್ಲಿ ವರದಿ ಮಾಡಲು ಕೇಂದ್ರವು ನಿಮಗೆ ಸಲಹೆ ನೀಡುತ್ತಿದೆ. ಈ ಪೋರ್ಟಲ್‌ನಲ್ಲಿ ನೀವು ನಿಮ್ಮ ದೂರನ್ನು ಸುಲಭವಾಗಿ ನೋಂದಾಯಿಸಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ