AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಪ್ರತಿದಿನ ಬಳಸುವ ಸ್ಮಾರ್ಟ್​ಫೋನ್ ಫ್ಯಾಕ್ಟರಿಯಲ್ಲಿ ಹೇಗೆ ತಯಾರಾಗುತ್ತೆ ಗೊತ್ತೇ?

Smartphone Factory: ಹೊಸ ಸ್ಮಾರ್ಟ್​ಫೋನ್ ಅನ್ನು ಉತ್ಪಾದಿಸುವ ಪ್ರಕ್ರಿಯೆ ಆಸಕ್ತಿದಾಯಕವಾಗಿದೆ. ನೂತನ ಫೋನನ್ನು ತಯಾರಿಸುವಾಗ, ಕಂಪನಿಯು ಈ ಹಿಂದೆ ಬಿಡುಗಡೆ ಮಾಡಿದ ಫೋನ್​ನಲ್ಲಿ ಏನು ತಪ್ಪಾಯಿತು?, ಹೊಸತನ ಏನು ಇರಬೇಕಿತ್ತು? ಎಂಬ ಬಗ್ಗೆ ಗ್ರಾಹಕರಿಂದ ಪ್ರತಿಕ್ರಿಯೆ ತೆಗೆದುಕೊಂಡು ಬಳಿಕ ಹೊಸ ಫೋನಿನ ಕೆಲಸ ಶುರುಮಾಡುತ್ತದೆ.

ನೀವು ಪ್ರತಿದಿನ ಬಳಸುವ ಸ್ಮಾರ್ಟ್​ಫೋನ್ ಫ್ಯಾಕ್ಟರಿಯಲ್ಲಿ ಹೇಗೆ ತಯಾರಾಗುತ್ತೆ ಗೊತ್ತೇ?
Smartphones
Vinay Bhat
|

Updated on:Apr 29, 2024 | 12:24 PM

Share

ಇಂದಿನ ಡಿಜಿಟಲ್ ಯುಗದಲ್ಲಿ, ಮೊಬೈಲ್ ಫೋನ್ ಇಲ್ಲದೆ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಈ ಸಾಧನಗಳು ನಮ್ಮ ದೈನಂದಿನ ದಿನಚರಿಯ ಅವಿಭಾಜ್ಯ ಅಂಗವಾಗಿದೆ. ನಮ್ಮ ಪ್ರೀತಿಪಾತ್ರರ ಜೊತೆ ಸಂವಹನ ನಡೆಸುವುದರಿಂದ ಹಿಡಿದು ನಮ್ಮ ವ್ಯವಹಾರಗಳನ್ನು ನಡೆಸುವವರೆಗೆ ಸ್ಮಾರ್ಟ್​ಫೋನ್ ಅತ್ಯಗತ್ಯ. ಆದಾಗ್ಯೂ, ಮೊಬೈಲ್ ಫೋನ್‌ಗಳನ್ನು ಹೇಗೆ ತಯಾರಿಸಲಾಗುತ್ತದೆ ಎಂದು ನೀವು ಯೋಚಿಸಿದ್ದೀರಾ?, ಇದು ಮೊಬೈಲ್ ಮಾರುಕಟ್ಟೆಗೆ ಹೇಗೆ ಬರುತ್ತದೆ?. ಇಂಥ ಕುತೂಹಲಕಾರಿ ಪ್ರಶ್ನೆ ನಿಮ್ಮಲ್ಲಿದ್ದರೆ ಇದಕ್ಕೆ ಉತ್ತರ ಇಲ್ಲಿದೆ. ಈ ಸ್ಟೋರಿಯಲ್ಲಿ, ಮೊಬೈಲ್ ಫೋನ್ ಉತ್ಪಾದನಾ ಪ್ರಕ್ರಿಯೆಯ ಬಗ್ಗೆ ಹಂತ ಹಂತವಾಗಿ ಮಾಹಿತಿ ನೀಡುತ್ತೇವೆ. ಹೊಸ ಸ್ಮಾರ್ಟ್​ಫೋನ್ ಅನ್ನು ಉತ್ಪಾದಿಸುವ ಪ್ರಕ್ರಿಯೆ ಆಸಕ್ತಿದಾಯಕವಾಗಿದೆ. ನೂತನ ಫೋನನ್ನು ತಯಾರಿಸುವಾಗ, ಕಂಪನಿಯು ಹಿಂದಿನ ಮಾದರಿಗಳ ನ್ಯೂನತೆಗಳನ್ನು ಹುಡುಕುತ್ತದೆ. ಅಂದರೆ ತಾವು ಬಿಡುಗಡೆ ಮಾಡಿದ ಹಿಂದಿನ ಫೋನ್​ನಲ್ಲಿ ಏನು ತಪ್ಪಾಯಿತು?, ಹೊಸತನ ಏನು ಇರಬೇಕಿತ್ತು? ಎಂಬ ಬಗ್ಗೆ ಎಕ್ಸ್​ಪರ್ಟ್​ಗಳಿಂದ ಪ್ರತಿಕ್ರಿಯೆ ತೆಗೆದುಕೊಂಡು ಬಳಿಕ ಹೊಸ ಫೋನಿನ ಕೆಲಸ ಶುರುಮಾಡುತ್ತದೆ. ಮೊಬೈಲ್ ತಯಾರಿಕೆಯಲ್ಲಿ ಬಳಸುವ ವಸ್ತುಗಳು: ಸ್ಮಾರ್ಟ್‌ಫೋನ್‌ಗಳ ಉತ್ಪಾದನಾ ಪ್ರಕ್ರಿಯೆಯನ್ನು ತಿಳಿದುಕೊಳ್ಳುವ ಮೊದಲು, ಫೋನ್‌ನ ವಿವಿಧ ಘಟಕಗಳಲ್ಲಿ ಬಳಸುವ ಕೆಲವು ವಸ್ತುಗಳ ಬಗ್ಗೆ ತಿಳಿದಿರಬೇಕು. ಉದಾಹರಣೆಗೆ, ಹೊರಗಿನ ಪ್ಯಾನೆಲ್ ಅನ್ನು ಸಾಮಾನ್ಯವಾಗಿ ಗಟ್ಟಿಯಾದ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ (ಅಕ್ರಿಲೋನಿಟ್ರೈಲ್ ಬ್ಯುಟಾಡೀನ್ ಸ್ಟೈರೀನ್ (ABS) ಅಥವಾ ಪಾಲಿಕಾರ್ಬೊನೇಟ್). ಈ ಪ್ಲಾಸ್ಟಿಕ್ ತಾಪಮಾನದ ಏರಿಳಿತಗಳನ್ನು ತಡೆದುಕೊಳ್ಳುವಂತಹ ಶಕ್ತಿಯನ್ನು ಹೊಂದಿದೆ. ಡಿಸ್​ಪ್ಲೇಗಳು ಲಿಕ್ವಿಡ್ ಕ್ರಿಸ್ಟಲ್ ಡಿಸ್​ಪ್ಲೇ ತಂತ್ರಜ್ಞಾನದಿಂದ (LCD) ಮಾಡಲ್ಪಟ್ಟಿವೆ, ಇದು ಮೂಲತಃ ತೆಳುವಾದ ಗಾಜಿನ ಹಾಳೆಗಳಿಂದ ಕೂಡಿರುತ್ತವೆ. ಸ್ಮಾರ್ಟ್‌ಫೋನ್‌ಗಳ ಬ್ಯಾಟರಿಯನ್ನು ಹೆಚ್ಚಾಗಿ ಲಿಥಿಯಂ ಅಯಾನ್, Ni-Cd ಅಥವಾ Ni-MH ನಿಂದ ತಯಾರಿಸಲಾಗುತ್ತದೆ....

Published On - 10:27 am, Mon, 29 April 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ಅಭಿವೃದ್ಧಿ ವಿಷಯದಲ್ಲಿ ಸಿದ್ದರಾಮಯ್ಯ ಯಾವತ್ತೂ ಚರ್ಚೆ ಮಾಡಲ್ಲ: ಅಶೋಕ
ಅಭಿವೃದ್ಧಿ ವಿಷಯದಲ್ಲಿ ಸಿದ್ದರಾಮಯ್ಯ ಯಾವತ್ತೂ ಚರ್ಚೆ ಮಾಡಲ್ಲ: ಅಶೋಕ