Drinik Virus: ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಹೊಸ ವೈರಸ್ ಪತ್ತೆ: ಭಾರತದ ಬ್ಯಾಂಕ್ ಗ್ರಾಹಕರೇ ಇದರ ಟಾರ್ಗೆಟ್

ಇದೀಗ ಡ್ರಿನಿಕ್ (Drinik) ಎಂಬ ಮಾಲ್ವೆರ್ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಪತ್ತೆ ಹಚ್ಚಲಾಗಿದ್ದು ಇದು ನಿಮ್ಮ ಪ್ರಮುಖ ಬ್ಯಾಂಕ್ ವಿವರಗಳನ್ನು ಕದಿಯಬಹುದು ಎಂದು ಹೇಳಲಾಗಿದೆ. 2016 ರಿಂದಲೂ ಈ ಡ್ರಿನಿಕ್ ವೈರಸ್ (Virus) ತೊಂದರೆ ಕೊಡುತ್ತಲೇ ಇದೆ.

Drinik Virus: ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಹೊಸ ವೈರಸ್ ಪತ್ತೆ: ಭಾರತದ ಬ್ಯಾಂಕ್ ಗ್ರಾಹಕರೇ ಇದರ ಟಾರ್ಗೆಟ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Vinay Bhat

Updated on:Oct 29, 2022 | 12:07 PM

ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳಲ್ಲಿ ಅಪಾಯಕಾರಿ ವೈರಸ್​ಗಳು ಕಂಡುಬರುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಡ್ರಿನಿಕ್ (Drinik) ಎಂಬ ಮಾಲ್ವೆರ್ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಪತ್ತೆ ಹಚ್ಚಲಾಗಿದ್ದು ಇದು ನಿಮ್ಮ ಪ್ರಮುಖ ಬ್ಯಾಂಕ್ ವಿವರಗಳನ್ನು ಕದಿಯಬಹುದು ಎಂದು ಹೇಳಲಾಗಿದೆ. 2016 ರಿಂದಲೂ ಈ ಡ್ರಿನಿಕ್ ವೈರಸ್ (Virus) ತೊಂದರೆ ಕೊಡುತ್ತಲೇ ಇದೆ. ಆದಾಯ ತೆರಿಗೆ ಮರುಪಾವತಿಯ ಹೆಸರಿನಲ್ಲಿ ಬಳಕೆದಾರರ ಸೂಕ್ಷ್ಮ ಡೇಟಾವನ್ನು ಈ ಮಾಲ್ವೇರ್ ಕದಿಯುತ್ತದೆ. ಅಲ್ಲದೆ ಭಾರತೀಯ ಬಳಕೆದಾರರ 18 ಬ್ಯಾಂಕ್‌ಗಳನ್ನು ಇದು ಟಾರ್ಗೆಟ್ ಮಾಡಿದೆಯಂತೆ. ಪ್ರಸ್ತುತ, ಈ ಬ್ಯಾಂಕ್‌ಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಕೂಡ ಇದೆ ಎಂದು ಹೇಳಲಾಗಿದೆ.

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಖಾತೆ ಹೊಂದಿದ್ದರೆ ಎಚ್ಚರ ವಹಿಸಿ. ಕೇವಲ ಒಂದು ಬ್ಯಾಂಕ್ ಮಾತ್ರವಲ್ಲದೆ ಭಾರತದಲ್ಲಿರುವ ಒಟ್ಟು 27 ಬ್ಯಾಂಕಿಂಗ್ ಸಂಸ್ಥೆಗಳನ್ನು ಈ ವೈರಸ್ ಟಾರ್ಗೆಟ್ ಮಾಡಿಕೊಂಡಿದೆ. ಡ್ರಿನಿಕ್ ವೈರಸ್‌ನ ಹೊಸ ಆವೃತ್ತಿಯು ಬಳಕೆದಾರರನ್ನು ಫಿಶಿಂಗ್‌ ಪೇಜ್‌ಗೆ ಕರೆದೊಯ್ಯುತ್ತದೆ ಮತ್ತು ಬಳಕೆದಾರರ ಎಲ್ಲ ಮಾಹಿತಿಯನ್ನು ಕದಿಯುತ್ತದೆ. ಈ ಮಾಲ್ವೇರ್ ಅಭಿವೃದ್ಧಿಪಡಿಸಿದವರು ಪೂರ್ತಿಯಾಗಿ ಆಂಡ್ರಾಯ್ಡ್ ಬ್ಯಾಂಕಿಂಗ್ ಟ್ರೋಜನ್ ಆಗಿ ರೂಪಿಸಿದ್ದಾರೆ ಎಂದು ಹೇಳಲಾಗಿದೆ.

ಡ್ರಿನಿಕ್ ಮಾಲ್‌ವೇರ್‌ APK ಫೈಲ್‌ನೊಂದಿಗೆ ಮಸೇಜ್ ಕಳುಹಿಸುವ ಮೂಲಕ ಬಳಕೆದಾರರನ್ನು ಗುರುತಿಸುತ್ತದೆ. iAssist ಎಂಬ ಅಪ್ಲಿಕೇಶನ್‌ನೊಂದಿಗೆ ಬರುತ್ತದಂತೆ. ಇದು ಬಳಕೆದಾರರ ಕ್ರೆಡಿಟ್ ಕಾರ್ಡ್ CVV, PIN ಮತ್ತು ಪ್ರಮುಖ ವಿವರಗಳನ್ನು ಕದಿಯಬಹುದು. ನಿಮಗೆ ತಿಳಿಯದೆ ನಿಮ್ಮ ಸ್ಮಾರ್ಟ್​ಫೋನ್ ಒಳಗೆ ಪ್ರವೇಶ ಪಡೆದು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತದೆ. ನೀವು ಬ್ಯಾಂಕಿಂಗ್‌ಗೆ ಸಂಬಂಧಿಸಿದ ಯಾವುದೇ ಲಿಂಕ್ ಅನ್ನು ಎಸ್​ಎಮ್​ಎಸ್​ ಮೂಲಕ ಅಥವಾ ಇಮೇಲ್ ಮೂಲಕ ಪಡೆದರೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಎರಡು ಬಾರಿ ಪರಿಶೀಲಿಸಬೇಕು. ಯಾವುದೇ ಮೂರನೇ ವ್ಯಕ್ತಿ ಕಳುಹಿಸದ ಮೆಸೇಜ್ ಅನ್ನು ಕಡೆಗಣಿಸಿ.

ಇದನ್ನೂ ಓದಿ
Image
National Internet Day 2022: ಇಂಟರ್ನೆಟ್ ದಿನವಾದ ಇಂದು ನೀವು ತಿಳಿದಿರಬೇಕಾದ ಅಂಶಗಳು ಇಲ್ಲಿವೆ
Image
ನೀವು ಸ್ಮಾರ್ಟ್​ಫೋನ್​ನಲ್ಲಿರುವ mAadhaar ಆ್ಯಪ್ ಬಳಸಿದ್ದೀರಾ?: ಏನಿದರ ಪ್ರಯೋಜನ?
Image
iPhone 15: ಐಫೋನ್ 15 ಬಗ್ಗೆ ಹೊರಬಿತ್ತು ಶಾಕಿಂಗ್ ವಿಚಾರ: ಇದರಲ್ಲಿರಲಿದೆ ಅಚ್ಚರಿಯ ಆಯ್ಕೆ
Image
ಸಾಮಾಜಿಕ ಮಾಧ್ಯಮ ಕುಂದುಕೊರತೆಗಳಿಗೆ ಸಿಗಲಿದೆ ಪರಿಹಾರ; ಶೀಘ್ರದಲ್ಲೇ ಸರ್ಕಾರದಿಂದ ಸಮಿತಿ ರಚನೆ

16 ಡೇಂಜರಸ್ ಆ್ಯಪ್ ಪತ್ತೆ:

ಮೊನ್ನೆಯಷ್ಟೆ ಪ್ಲೇ ಸ್ಟೋರ್​ನಲ್ಲಿ ಕಂಡುಬಂದಂತಹ 16 ಡೇಂಜರಸ್ ಆ್ಯಪ್​​ಗಳನ್ನು ಗೂಗಲ್ ತೆಗೆದುಹಾಕಿತ್ತು. ನೀವು ಈ ಆ್ಯಪ್ ಗಳನ್ನು ಇನ್ ಸ್ಟಾಲ್ ಮಾಡಿದ್ದರೆ ತಕ್ಷಣ ಡಿಲೀಟ್ ಮಾಡುವಂತೆ ಗೂಗಲ್ ಸೂಚನೆ ಕೂಡ ನೀಡಿತ್ತು. ಪ್ರಸಿದ್ಧ ಸೆಕ್ಯುರಿಟಿ ಸಂಸ್ಥೆ McAfee ಈ ಬಗ್ಗೆ ಮಾಹಿತಿ ನೀಡಿ, ಗೂಗಲ್ ಪ್ಲೇ ಸ್ಟೋರ್​ನಲ್ಲಿರುವ ನಕಲಿ ಆ್ಯಪ್​ಗಳು ಕೇವಲ ಜಾಹೀರಾತುಗಳನ್ನು ಮಾತ್ರ ನೀಡುತ್ತಿದೆ. ಬಳಕೆದಾರರಿಗೆ ಅನಗತ್ಯ ನೋಟಿಫಿಕೇಶನ್ ಕಳುಹಿಸುತ್ತದೆ ಹಾಗೂ ವೆಬ್​ಸೈಡ್ ಓಪನ್ ಮಾಡಿದ ತಕ್ಷಣ ಕೇವಲ ಲೋಡಿಂಗ್​ನಲ್ಲಿ ಮಾತ್ರ ಇರುತ್ತದೆ. ಇದು ಅಪಾಯಕಾರಿಯಾದ ಆ್ಯಪ್ ಎಂದು ಹೇಳಿದೆ. ಅಲ್ಲದೆ ಇವುಗಳಲ್ಲಿ ಕೆಲವು ಬಳಕೆದಾರರ ಫೇಸ್​ಬುಕ್ ಬಗೆಗಿನ ಮಾಹಿತಿ, ಎಸ್​ಎಮ್​ಎಸ್ ಮಾಹಿತಿ, ಕಾಂಟೆಕ್ಟ್​ ಲಿಸ್ಟ್, ಮೊಬೈಲ್ ಬಗೆಗಿನ ಮಾಹಿತಿ ಸೇರಿದಂತೆ ಅನೇಕ ವಿಚಾರವನ್ನು ಕದಿಯುತ್ತದೆ ಎಂದು ಹೇಳಿತ್ತು.

Published On - 12:07 pm, Sat, 29 October 22

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು