ಇದೀಗ ಯೂಟ್ಯೂಬ್​ನಿಂದ ಹಣ ಗಳಿಸುವುದು ಮತ್ತಷ್ಟು ಸುಲಭ: ಬಂದಿದೆ ಹೊಸ ಫೀಚರ್

ಯೂಟ್ಯೂಬ್‌ ಬಳಕೆದಾರರು 1 ನಿಮಿಷದ ಬದಲಿಗೆ 3 ನಿಮಿಷಗಳ ವಿಡಿಯೋಗಳನ್ನು ಶಾರ್ಟ್​ ಸೆಕ್ಷನ್​ನಲ್ಲಿ ಅಪ್‌ಲೋಡ್ ಮಾಡಬಹುದು. ನೀವು ಎಲ್ಲಾ ರೀತಿಯ ಶಾರ್ಟ್​ಗಳಲ್ಲಿ ಈ ಬದಲಾವಣೆಗಳನ್ನು ನೋಡುತ್ತೀರಿ. ಅಕ್ಟೋಬರ್ 15 ರಿಂದ ಈ ಬದಲಾವಣೆ ಬಳಕೆದಾರರಿಗೆ ಲಭ್ಯವಾಗಲಿದೆ.

ಇದೀಗ ಯೂಟ್ಯೂಬ್​ನಿಂದ ಹಣ ಗಳಿಸುವುದು ಮತ್ತಷ್ಟು ಸುಲಭ: ಬಂದಿದೆ ಹೊಸ ಫೀಚರ್
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 05, 2024 | 3:30 PM

ಯೂಟ್ಯೂಬ್‌ನಿಂದ ಹಲವು ಅಪ್ಡೇಟ್​ಗಳನ್ನು ನೀಡಲಾಗಿದೆ. ಈಗ ಯೂಟ್ಯೂಬ್ ಶಾರ್ಟ್ಸ್ ವೈಶಿಷ್ಟ್ಯದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಅಕ್ಟೋಬರ್ 15 ರಿಂದ ಈ ಬದಲಾವಣೆ ಬಳಕೆದಾರರಿಗೆ ಲಭ್ಯವಾಗಲಿದೆ. ಯೂಟ್ಯೂಬ್ ಶಾರ್ಟ್​​ಗಳಿಗಾಗಿ ವಿಡಿಯೋ ಮಿತಿಗಳನ್ನು ಬದಲಾಯಿಸಲಾಗಿದೆ. ಈಗ ಬಳಕೆದಾರರು 1 ನಿಮಿಷದ ಬದಲಿಗೆ 3 ನಿಮಿಷಗಳ ವಿಡಿಯೋಗಳನ್ನು ಶಾರ್ಟ್​ ಸೆಕ್ಷನ್​ನಲ್ಲಿ ಅಪ್‌ಲೋಡ್ ಮಾಡಬಹುದು. ನೀವು ಎಲ್ಲಾ ರೀತಿಯ ಶಾರ್ಟ್​ಗಳಲ್ಲಿ ಈ ಬದಲಾವಣೆಗಳನ್ನು ನೋಡುತ್ತೀರಿ.

ವಿಡಿಯೋ ಮಿತಿಯನ್ನು ಹೆಚ್ಚಿಸಲು, ಯೂಟ್ಯೂಬ್ ನಿಮಗೆ ಶಾಟ್ಸ್ ಫೀಡ್‌ನಲ್ಲಿ ಕಾಮೆಂಟ್ ಮಾಡುವ ಆಯ್ಕೆಯನ್ನು ಸಹ ನೀಡುತ್ತಿದೆ. ಇದರೊಂದಿಗೆ, ಬಳಕೆದಾರರಿಗೆ ಯಾವುದೇ ವಿಡಿಯೋವನ್ನು ಆಯ್ಕೆ ಮಾಡಲು ಮತ್ತು ಅದರೊಂದಿಗೆ ರೀಮಿಕ್ಸ್ ಕ್ಲಿಪ್ ಮಾಡುವ ಆಯ್ಕೆಯನ್ನು ಪಡೆಯುತ್ತಾರೆ. ಇದು ಯೂಟ್ಯೂಬ್​ನಲ್ಲಿನ ದೊಡ್ಡ ಬದಲಾವಣೆಯಾಗಲಿದೆ.

ಯೂಟ್ಯೂಬ್ ಶಾರ್ಟ್​​ಗಳನ್ನು ತೋರಿಸಲು ಒಂದು ಸಾಧನವನ್ನು ಸಹ ಒದಗಿಸುತ್ತಿದೆ. ಬಳಕೆದಾರರು ಮೇಲೆ ನೀಡಲಾದ ಮೂರು ಚುಕ್ಕೆಗಳ ಸಹಾಯದಿಂದ ಇದನ್ನು ಬಳಸಬಹುದು. ಸರ್ಚ್ ಫೀಚರ್​ನಲ್ಲಿ ಗೂಗಲ್​ಗೆ ಸಂಬಂಧಿಸಿದ ಕೆಲವು ನವೀಕರಣಗಳನ್ನು ಮಾಡಲಾಗಿದೆ. ಈ ಅಪ್ಡೇಟ್ ಅನ್ನು AI-ಪವರ್‌ನೊಂದಿಗೆ ನೀಡಲಾಗುತ್ತದೆ. AI ಮೂಲಕ ಲಿಂಕ್‌ಗಳು ಮತ್ತು ಜಾಹೀರಾತುಗಳನ್ನು ಬಳಸಬಹುದು.

ಮೆಟಾ ಕೂಡ ಬದಲಾವಣೆಗಳನ್ನು ಮಾಡಿದೆ:

ಮೆಟಾದಲ್ಲಿ ಆದಾಯ ನೀತಿಯನ್ನು ಸಹ ಬದಲಾಯಿಸಲಾಗಿದೆ. ಅದರ ಸಹಾಯದಿಂದ, ಬಳಕೆದಾರರಿಗೆ ಆದಾಯವನ್ನು ಗಳಿಸುವುದು ಸುಲಭವಾಗುತ್ತದೆ. ಕಂಟೆಟ್ ಕ್ರಿಯೇಟರ್​ಗಳನ್ನು ಗಮನದಲ್ಲಿಟ್ಟುಕೊಂಡು ಮೆಟಾ ಈ ಬದಲಾವಣೆಗಳನ್ನು ಮಾಡಿದೆ.

ಇದನ್ನೂ ಓದಿ: ನೀವು ಕಾಲ್-ಮೆಸೇಜ್ ಮಾಡಿದಾಗ ನಂಬರ್ ಕಾಣದಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

ಯೂಟ್ಯೂಬ್​ನಿಂದ ಎಡವಟ್ಟು:

ಯೂಟ್ಯೂಬ್ ಕಾಲಕಾಲಕ್ಕೆ ನಿಯಮಗಳನ್ನು ಬದಲಾಯಿಸುತ್ತಿದೆ. ಇದೀಗ ಇದೇ ರೀತಿಯ ನಿರ್ಧಾರ ಕೈಗೊಂಡು ಎಡವಟ್ಟು ಮಾಡಿಕೊಂಡಿದೆ. ಸ್ಪ್ಯಾಮ್, ನಕಲಿ ಮತ್ತು ವಂಚನೆ ನಿಯಮಗಳ ಉಲ್ಲಂಘನೆಯಿಂದಾಗಿ ಕೆಲವು ಚಾನಲ್‌ಗಳನ್ನು ತೆಗೆದುಹಾಕಲಾಗಿದೆ. ಇದು ಈವರೆಗೆ ವಿಡಿಯೋಗಳನ್ನು ಅಪ್‌ಲೋಡ್ ಮಾಡದ ಬಳಕೆದಾರರ ಮೇಲೂ ಪರಿಣಾಮ ಬೀರಿದೆ. ಇದರಿಂದಾಗಿ ಅವರು ತಮ್ಮ ಯೂಟ್ಯೂಬ್ ಖಾತೆಗಳಿಗೆ ಪ್ರವೇಶವನ್ನು ಕಳೆದುಕೊಂಡಿದ್ದಾರೆ. ಇದಲ್ಲದೆ, ಯೂಟ್ಯೂಬ್ ಪ್ರೀಮಿಯಂ ಚಂದಾದಾರರು ಸಹ ಸಮಸ್ಯೆ ಅನುಭವಿಸಿದ್ದಾರೆ.

ಕೆಲವು ಬಳಕೆದಾರರು ತಮ್ಮ ಖಾತೆ ಬ್ಲಾಕ್ ಆಗಿರುವುದನ್ನು ಕಂಡು ಮೇಲ್ಮನವಿ ಸಲ್ಲಿಸಿದ್ದಾರೆ. ಇದರ ಪರಿಣಾಮವಾಗಿ ಅವರ ಖಾತೆಯ ಪ್ರವೇಶವನ್ನು ಮರುಸ್ಥಾಪಿಸಲಾಗಿದೆ. ಆದಾಗ್ಯೂ, ಕೆಲವು ಬಳಕೆದಾರರು ಮೇಲ್ಮನವಿ ಕಳುಹಿಸಿದರೂ ಖಾತೆ ಓಪನ್ ಆಗುತ್ತಿಲ್ಲ ಎಂದು ದೂರಿದಿದ್ದಾರೆ.

ಯೂಟ್ಯೂಬ್ ತನ್ನ ಸಮಸ್ಯೆಯನ್ನು ಒಪ್ಪಿಕೊಂಡಿದ್ದು, ತೊಂದರೆಗೆ ಒಳಗಾದ ಚಾನಲ್‌ಗಳನ್ನು ಮರುಸ್ಥಾಪಿಸಲು ಮತ್ತು ಯೂಟ್ಯೂಬ್ TV, ಯೂಟ್ಯೂಬ್ ಪ್ರೀಮಿಯಂ ಮತ್ತು ಯೂಟ್ಯೂಬ್ ಮ್ಯೂಸಿಕ್​ಗೆ ಪಾವತಿಸಿದ ಚಂದಾದಾರಿಕೆಗಳಿಗೆ ಪ್ರವೇಶವನ್ನು ಪುನರಾರಂಭಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್