Google: ಗೂಗಲ್​​ ಕಂಪೆನಿಗೆ ಬಿತ್ತು 4392 ಕೋಟಿ ರೂ. ಹೊಸ ದಂಡ; ಸಾಲಾಗಿ ಬೀಳುತ್ತಿರುವ ದಂಡಕ್ಕೆ ಹೊಸ ಸೇರ್ಪಡೆ

ಜುಲೈ 13ನೇ ತಾರೀಕು ಫ್ರಾನ್ಸ್​ನಲ್ಲಿ ಗೂಗಲ್ ಕಂಪೆನಿಗೆ ಜುಲೈ 13ನೇ ತಾರೀಕು ಫ್ರಾನ್ಸ್​ನಲ್ಲಿ 50 ಕೋಟಿ ಯುರೋ ದಂಡ ಹಾಕಲಾಗಿದೆ. ಫ್ರಾನ್ಸ್​ನ ಸುದ್ದಿ ಪ್ರಸಾರ ನಿಯಮಾವಳಿಗಳಿಗೆ ಪೂರ್ಣವಾಗಿ ಬದ್ಧವಾಗಿಲ್ಲ ಎಂಬ ಕಾರಣಕ್ಕೆ ಇಷ್ಟು ದೊಡ್ಡ ಮೊತ್ತದ ದಂಡ ತೆರಬೇಕಾಗಿದೆ.

Google: ಗೂಗಲ್​​ ಕಂಪೆನಿಗೆ ಬಿತ್ತು 4392 ಕೋಟಿ ರೂ. ಹೊಸ ದಂಡ; ಸಾಲಾಗಿ ಬೀಳುತ್ತಿರುವ ದಂಡಕ್ಕೆ ಹೊಸ ಸೇರ್ಪಡೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 14, 2021 | 12:03 PM

ವಿಶ್ವದಾದ್ಯಂತ ಹೆಸರಾದ ಗೂಗಲ್ (Google) ಕಂಪೆನಿಗೆ ಮೇಲಿಂದ ಮೇಲೆ ದಂಡ ಬೀಳುತ್ತಲೇ ಇದೆ. ಇದೀಗ ಜುಲೈ 13ನೇ ತಾರೀಕು ಫ್ರಾನ್ಸ್​ನಲ್ಲಿ 50 ಕೋಟಿ ಯುರೋ ದಂಡ ಹಾಕಲಾಗಿದೆ. ಇವತ್ತಿಗೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ, 4392.20 ಕೋಟಿ ಆಗುತ್ತದೆ. ಫ್ರಾನ್ಸ್​ನ ಸುದ್ದಿ ಪ್ರಸಾರ ನಿಯಮಾವಳಿಗಳಿಗೆ ಪೂರ್ಣವಾಗಿ ಬದ್ಧವಾಗಿಲ್ಲ ಎಂಬ ಕಾರಣಕ್ಕೆ ಇಷ್ಟು ದೊಡ್ಡ ಮೊತ್ತದ ದಂಡ ತೆರಬೇಕಾಗಿದೆ. ವಿವಿಧ ನಿಯಮಾವಳಿಗಳ ಉಲ್ಲಂಘನೆಗಾಗಿ ಈಚೆಗೆ ಗೂಗಲ್​ಗೆ ವಿಧಿಸಿರುವ ದಂಡದಲ್ಲಿ ಇದು ಹೊಸ ಸೇರ್ಪಡೆ ಆಗಿದೆ. ಸುದ್ದಿ ಪ್ರಸಾರ ಮಾಡುವ ಸಂಸ್ಥೆಗಳಾದ ಎಎಫ್​ಪಿ, ಎಪಿಐಜಿ ಮತ್ತು ಎಸ್​ಇಪಿಎಂನಿಂದ ಆಲ್ಫಾಬೆಟ್​ ಮಾಲೀಕತ್ವದ ಗೂಗಲ್ ಜತೆಗೆ ಉತ್ತಮ ಒಪ್ಪಂದವೊಂದಕ್ಕೆ ಬರಲು ವಿಫಲವಾಗಿದ್ದವು. ಇಂಟರ್​ನೆಟ್​ನಲ್ಲಿನ ಸುದ್ದಿಗೆ ಸಂಭಾವನೆ ವಿಚಾರದಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈಚಿನ ಯುರೋಪಿಯನ್ ಒಕ್ಕೂಟದ (EU) ನಿರ್ದೇಶನ ಪ್ರಕಾರ ಈ Neighboring Rights ಸೃಷ್ಟಿಗೆ ಕಾರಣ ಆಗಿತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ.

2 ತಿಂಗಳಲ್ಲಿ ಪರಿಹಾರ ನೀಡಬೇಕು ವಿಶ್ವಾಸಕ್ಕೆ ಧಕ್ಕೆ ಆಗಿದ್ದಲ್ಲಿ ಅದರ ಮೇಲೆ ಕಣ್ಗಾವಲು ಇರಿಸುವ ಸಂಸ್ಥೆಗಳು ಇವೆ. ಅವು ವಿತರಿಸುವ ತಾತ್ಕಾಲಿಕ ಆದೇಶಗಳನ್ನು ಗೂಗಲ್ ಉಲ್ಲಂಘನೆ ಮಾಡಿದೆಯಾ ಎಂಬುದು ಈ ಪ್ರಕರಣದ ಕೇಂದ್ರಬಿಂದುವಾಗಿತ್ತು. ಮೂರು ತಿಂಗಳ ಸಮಯ ನೀಡಿ, ಸುದ್ದಿ ಪ್ರಸಾರಕರ ಜತೆಗೆ ಮಾತುಕತೆ ನಡೆಸುವಂತೆ ತಿಳಿಸಿದ್ದವು. ಒಂದು ವೇಳೆ ಮುಂದಿನ 2 ತಿಂಗಳಲ್ಲಿ ಸುದ್ದಿ ಪ್ರಸಾರಕರಿಗೆ ಪರಿಹಾರವನ್ನು ನೀಡದಿದ್ದಲ್ಲಿ ಹೆಚ್ಚುವರಿ ದಂಡವಾಗಿ ದಿನಕ್ಕೆ 9 ಲಕ್ಷ ಯುರೋ ತನಕ ದಂಡ ಬೀಳುತ್ತದೆ. ಗೂಗಲ್​ಗೆ ಭಾರೀ ಪ್ರಮಾಣದ ದಂಡ, ಅದರಲ್ಲೂ ಯುರೋಪಿಯನ್ ಒಕ್ಕೂಟದ ಸಂಸ್ಥೆಗಳಿಂದ ಬೀಳುತ್ತಿರುವುದು ಇದೇ ಮೊದಲೇನಲ್ಲ. ಜೂನ್​ನ ಆರಂಭದಲ್ಲಿ ಫ್ರೆಂಚ್ ಸ್ಪರ್ಧಾತ್ಮಕ ಆಯೋಗವು ಗೂಗಲ್​ಗೆ 22 ಕೋಟಿ ಯುರೋ ದಂಡ ಹಾಕಿತ್ತು. ಆನ್​ಲೈನ್​ ಜಾಹೀರಾತು ವಲಯದಲ್ಲಿ ಫ್ರಾನ್ಸ್ ಮಾರುಕಟ್ಟೆ ಸಾಮರ್ಥ್ಯವನ್ನು ನಿಂದಿಸಿದ್ದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಗೂಗಲ್ ಅನುಸರಿಸುವ ಪದ್ಧತಿ ಗಂಭೀರವಾಗಿದೆ. ಗೂಗಲ್​ನ ಸ್ಪರ್ಧಿಗಳನ್ನು ಕೆಲವು ಮಾರ್ಕೆಟ್​ನಲ್ಲಿ ಮತ್ತು ಮೊಬೈಲ್​ ಸೈಟ್ಸ್​ ಪಬ್ಲಿಷರ್ಸ್ ಹಾಗೂ ಅಪ್ಲಿಕೇಷನ್​ಗಳಲ್ಲಿ ಅವರು ದಂಡಿಸುತ್ತಾರೆ ಎಂದು ಸ್ಪರ್ಧಾ ಪ್ರಾಧಿಕಾರ ತಿಳಿಸಿದೆ. ಯುರೋಪ್​ನಲ್ಲಿ ತಮ್ಮ ವೆಬ್​ಸೈಟ್​ಗಳ ಸರ್ಚ್​ ಬಾರ್​​ನಲ್ಲಿ ನ್ಯಾಯಸಮ್ಮತ ಅಲ್ಲದ ನಿಬಂಧನೆಗಳನ್ನು ಹೇರಿದ್ದಕ್ಕಾಗಿ ಗೂಗಲ್​ಗೆ 2019ರ ಮಾರ್ಚ್​ನಲ್ಲಿ ವಿಶ್ವಾಸದ್ರೋಹ ನಿಯಮಾವಳಿಗಳು ಮೀರಿದ್ದಕ್ಕಾಗಿ 149 ಕೋಟಿ ಯುರೋ ದಂಡ ಹಾಕಲಾಗಿತ್ತು. ನಂಬಿಕೆದ್ರೋಹದ ಕಾನೂನು ಏಕೆ ರೂಪಿಸಲಾಗುತ್ತದೆ ಅಂದರೆ, ಉದ್ಯಮದಲ್ಲಿ ನ್ಯಾಯಸಮ್ಮತವಾದ ಸ್ಪರ್ಧೆಯನ್ನು ಪ್ರೋತ್ಸಾಹಿಸಬೇಕು ಮತ್ತು ಯಾವುದೇ ಕಂಪೆನಿಗೆ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುವುದಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶ ಇರುತ್ತದೆ.

ಆಂಡ್ರಾಯಿಡ್ ಮೊಬೈಲ್ ಸಾಧನಗಳಲ್ಲಿ ಕಾನೂನುಬಾಹಿರ ಕೃತ್ಯ ಅದಕ್ಕೂ ಮುಂಚೆ, 2018ರ ಜುಲೈ ತಿಂಗಳಲ್ಲಿ ಆಯೋಗದಿಂದ ಗೂಗಲ್ ಮೇಲೆ 434 ಕೋಟಿ ಯುರೋ ದಂಡ ಹಾಕಲಾಗಿತ್ತು. ಆಂಡ್ರಾಯಿಡ್ ಮೂಲಕ ಕಾರ್ಯ ನಿರ್ವಹಿಸುವ ಮೊಬೈಲ್ ಸಾಧನಗಳಲ್ಲಿ ಕಾನೂನುಬಾಹಿರ ಪದ್ಧತಿಗಳನ್ನು ಅನುಸರಿಸಲಾಗುತ್ತಿದೆ ಎಂಬ ಆರೋಪ ಬಂದಿತ್ತು. ಆಂಡ್ರಾಯಿಡ್​ ಸಾಧನಗಳನ್ನು ತಯಾರಿಸುವವರು ಮತ್ತು ಮೊಬೈಲ್​ ನೆಟ್​ವರ್ಕ್​ ಆಪರೇಟರ್​ಗಳ ಮೇಲೆ ಕಾನೂನಿಗೆ ವಿರುದ್ಧವಾಗಿ ನಿರ್ಬಂಧ ಹೇರಿ, ಸಾಮಾನ್ಯ ಇಂಟರ್​ನೆಟ್​ ಸರ್ಚ್​ನಲ್ಲಿ ತಮ್ಮದೇ ಪಾರಮ್ಯ ಇರುವಂತೆ ಮಾಡುತ್ತಿರುವುದು ಯುರೋಪಿಯನ್ ಆಯೋಗದ ಗಮನಕ್ಕೆ ಬಂದಿತ್ತು. ಇನ್ನು 2017ರಲ್ಲಿ 242 ಕೋಟಿ ಯುರೋ ದಂಡವನ್ನು ಗೂಗಲ್​ಗೆ ವಿಧಿಸಲಾಗಿತ್ತು. ಗೂಗಲ್​ನ ಸರ್ಚ್​ ರಿಸಲ್ಟ್ ಪುಟದ ಮೇಲ್ಭಾಗದಲ್ಲಿ ತನ್ನದೇ ಶಾಪಿಂಗ್ ಹೋಲಿಕೆ ಸೇವೆಯನ್ನು ಪ್ರಮೋಟ್​ ಮಾಡುತ್ತದೆ ಎಂದು ಆರೋಪಿಸಲಾಗಿತ್ತು.

“ಗೂಗಲ್​ನ ಹೋಲಿಕೆ ಶಾಪಿಂಗ್ ಸೇವೆಯ ತಂತ್ರವು ಪ್ರತಿಸ್ಪರ್ಧಿಗಳಿಗಿಂತ ತನ್ನ ಉತ್ಪನ್ನವನ್ನು ಉತ್ತಮವಾಗಿವೆ ಎನ್ನುವ ಮೂಲಕ ಗ್ರಾಹಕರನ್ನು ಆಕರ್ಷಿಸುವುದರ ಬಗ್ಗೆ ಮಾತ್ರವಲ್ಲ. ಬದಲಾಗಿ, ಗೂಗಲ್ ಸರ್ಚ್ ಫಲಿತಾಂಶಗಳಲ್ಲಿ ತನ್ನದೇ ಆದ ಹೋಲಿಕೆ ಶಾಪಿಂಗ್ ಸೇವೆಯನ್ನು ಪ್ರಮೋಟ್​ ಮಾಡುವ ಮೂಲಕ ಮತ್ತು ಪ್ರತಿಸ್ಪರ್ಧಿಗಳನ್ನು ನಿಂದಿಸುವ ಮೂಲಕ ಸರ್ಚ್ ಎಂಜಿನ್ ಆಗಿ ತನ್ನ ಮಾರುಕಟ್ಟೆ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಂಡಿದೆ,” ಎಂದು ಸ್ಪರ್ಧೆ ನೀತಿಯ ಉಸ್ತುವಾರಿ ಆಯುಕ್ತ ಮಾರ್ಗರೆಟ್ ವೆಸ್ಟಾಗರ್ ಹೇಳಿದ್ದಾರೆ. ಅಂದಹಾಗೆ ಗೂಗಲ್ ವಿರುದ್ಧ ಅನೇಕ ಪ್ರಕರಣಗಳು ಯುರೋಪಿಯನ್ ಒಕ್ಕೂಟದ ಮೇಲ್ಮನವಿಯಲ್ಲಿ ಉಳಿದಿವೆ.

ಇದನ್ನೂ ಓದಿ: Google Report: ಐಟಿ ನಿಯಮಗಳಡಿ ಮೊದಲ ವರದಿ ಪ್ರಕಟಿಸಿದ ಗೂಗಲ್; ಏಪ್ರಿಲ್​ ತಿಂಗಳಲ್ಲಿ ದಾಖಲಾಗಿದ್ದು 27,762 ದೂರುಗಳು

ಇದನ್ನೂ ಓದಿ: JioPhone Next: ಗೂಗಲ್ ಮತ್ತು ರಿಲಯನ್ಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಹೊಸ ಸ್ಮಾರ್ಟ್​ಫೋನ್ ಬಗ್ಗೆ ತಿಳಿದುಕೊಳ್ಳಿ

(European Union authorities imposed hefty penalty to Google for not comply with norms. Here is the details)

Published On - 12:00 pm, Wed, 14 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ