AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Facebook Scam: ಫೇಸ್​ಬುಕ್ ಹೊಸ ಸ್ಕ್ಯಾಮ್​ಗೆ ಬೆಚ್ಚಿಬಿದ್ದ ಜನತೆ: ನಿಮಗೂ ಹೀಗೆ ಮೆಸೇಜ್ ಬರಬಹುದು

Hack: ಇದೀಗ ಫೇಸ್​ಬುಕ್​ನಲ್ಲಿ ನಡೆಯುತ್ತಿರುವ ದೊಡ್ಡ ಸ್ಕ್ಯಾಮ್ ಒಂದು ಹೊರಬಿದ್ದಿದೆ. ಸ್ಕ್ಯಾಮರ್​ಗಳು ಫೇಸ್​ಬುಕ್​ನಲ್ಲಿ ಸ್ವಲ್ಪವೂ ಅನುಮಾನ ಬರದ ರೀತಿಯಲ್ಲಿ ಬಳಕೆದಾರರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ.

Facebook Scam: ಫೇಸ್​ಬುಕ್ ಹೊಸ ಸ್ಕ್ಯಾಮ್​ಗೆ ಬೆಚ್ಚಿಬಿದ್ದ ಜನತೆ: ನಿಮಗೂ ಹೀಗೆ ಮೆಸೇಜ್ ಬರಬಹುದು
Facebook Scam
Vinay Bhat
|

Updated on: Jun 01, 2023 | 2:43 PM

Share

ಇಂದಿನ ಡಿಜಿಟಲ್ ಯುಗದಲ್ಲಿ ಸ್ಕ್ಯಾಮರ್​ಗಳು (Scam) ಎಗ್ಗಿಲ್ಲದೆ ಅಮಾಯಕರ ಹಣ ಎಗರಿಸುತ್ತಿದ್ದಾರೆ. ಈ ಬಗ್ಗೆ ಪ್ರತಿ ದಿನ ಒಂದಲ್ಲ ಒಂದು ವರದಿ ಆಗುತ್ತಲೇ ಇದೆ. ಬ್ಯಾಂಕುಗಳು ಕಳುಹಿಸುವ ಸಂದೇಶದಂತೆ ಫೇಕ್ ಮೆಸೇಜ್​ಗಳನ್ನು (Fake Message) ಕಳುಹಿಸಿ ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈರೀತಿಯ ಪ್ರಕರಣ ಹೆಚ್ಚುತ್ತಿದೆ. ಇದೀಗ ಫೇಸ್​ಬುಕ್​ನಲ್ಲಿ ನಡೆಯುತ್ತಿರುವ ದೊಡ್ಡ ಸ್ಕ್ಯಾಮ್ ಒಂದು ಹೊರಬಿದ್ದಿದೆ. ಹ್ಯಾಕರ್​ಗಳು ಫೇಸ್​ಬುಕ್​ನಲ್ಲಿ (Facebook) ಸ್ವಲ್ಪವೂ ಅನುಮಾನ ಬರದ ರೀತಿಯಲ್ಲಿ ಬಳಕೆದಾರರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್​ನಲ್ಲಿ ನಡೆಯುತ್ತಿರುವ ಹೊಸ ಸ್ಕ್ಯಾಮ್​ನ ಹೆಸರು “look who just died” ಎಂದು. ಫೇಸ್​ಬುಕ್​ನಲ್ಲಿ ಹ್ಯಾಕರ್​ಗಳು ಅಮಾಯಕ ಬಳಕೆದಾರರ ಖಾತೆಗೆ ನೇರವಾಗಿ ಒಂದು ಮೆಸೇಜ್ ಕಳುಹಿಸುತ್ತಾರೆ. ಇದರಲ್ಲಿ ನಿಮ್ಮ ಫೇಸ್​ಬುಕ್​ನ ಆತ್ಮಿಯರು ನಿಧನ ಹೊಂದಿರುವ ಸುದ್ದಿ ಇರುತ್ತದೆ. ಜೊತೆಗೆ ಈ ವ್ಯಕ್ತಿ ನಿಮಗೆ ಗೊತ್ತು, ನಿಮ್ಮ ತುಂಬಾ ಆತ್ಮೀಯರು ನಿಧನರಾಗಿದ್ದಾರೆ ಎಂದು ಬರೆದು ಕಳುಹಿಸುತ್ತಾರೆ. ಈ ಸುದ್ದಿಯನ್ನು ಓದಲು ನಿಮ್ಮ ಫೇಸ್​ಬುಕ್ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ನಮೋದಿಸಿ ಎಂದು ಕೇಳಲಾಗುತ್ತಿದೆ. ಅದರಂತೆ ನೀವು ಸುದ್ದಿ ಓದಲು ಪಾಸ್ವವರ್ಡ್ ಮತ್ತು ಐಡಿ ಹಾಕಿದರೆ ಮುಗಿಯಿತು. ನಿಮ್ಮ ಖಾತೆ ಹ್ಯಾಕ್.

iQoo Z7s 5G: ಸೂಪರ್ ಸ್ಪೀಡ್ ಫೋನ್ ಕ್ರೇಜಿ ಬೆಲೆಗೆ ಲಭ್ಯ

ಇದನ್ನೂ ಓದಿ
Image
Virus: ಶಾಕಿಂಗ್: ಗೂಗಲ್ ಪ್ಲೇ ಸ್ಟೋರ್‌ನಲ್ಲಿ 100 ಕ್ಕೂ ಹೆಚ್ಚು ಆ್ಯಪ್​ಗಳಿಗೆ ವೈರಸ್: ನಿಮ್ಮಲ್ಲಿದ್ರೆ ತಕ್ಷಣ ಡಿಲೀಟ್ ಮಾಡಿ
Image
Vivo S17 Series: ಬಿಡುಗಡೆ ಆಯಿತು ವಿವೋ S ಸರಣಿಯ ಮೂರು ಹೊಸ ಸ್ಮಾರ್ಟ್​ಫೋನ್ಸ್: ಯಾವುದು?, ಬೆಲೆ ಎಷ್ಟು?
Image
ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಖರೀದಿಸಿರುವ ಅನುಮಾನವಿದೆಯೇ? ಹೀಗೆ ಪರೀಕ್ಷಿಸಿಕೊಳ್ಳಿ
Image
Asus Expertbook: ಏಸಸ್ ಎಕ್ಸ್​ಪರ್ಟ್​ಬುಕ್ LAPTOP ಗ್ಯಾಜೆಟ್ ರಿವ್ಯೂ | Gadget Review | Unboxing

ಹ್ಯಾಕರ್ ನಿಮ್ಮ ಖಾತೆಯ ಮಾಹಿತಿ ಪಡೆದುಕೊಂಡು ಲಾಗಿನ್ ಆಗಿ, ನಿಮ್ಮ ಫ್ರೆಂಡ್ ಲಿಸ್ಟ್​ನಲ್ಲಿ ಇರುವ ಇತರರಿಗೂ ಈ ಮೆಸೇಜ್ ಕಳುಹಿಸುತ್ತಾರೆ. ಬಳಿಕ ಅವರ ಖಾತೆಯನ್ನೂ ಹ್ಯಾಕ್ ಮಾಡುತ್ತಾರೆ. ಅಲ್ಲದೆ ನಿಮ್ಮ ಖಾತೆಯಲ್ಲಿರುವ ಮೊಬೈಲ್ ನಂಬರ್, ಜನ್ಮ ದಿನಾಂಕ, ವೈಯಕ್ತಿಕ ಮೆಸೇಜ್ ಅನ್ನು ಪಡೆದುಕೊಳ್ಳುತ್ತಾರೆ. ಈ ರೀತಿಯ ಫೇಕ್ ಮೆಸೇಜ್, ಹ್ಯಾಕರ್​ಗಳಿಂದ ನಿಮ್ಮನ್ನ ನೀವು ರಕ್ಷಿಸಿಕೊಳ್ಳಲು ಈ ಕೆಳಗಿನ ಸೂತ್ರ ನೆನಪಿನಲ್ಲಿಡಿ.

ಫೇಸ್‌ಬುಕ್‌ ವಂಚನೆಯಿಂದ ಪಾರಾಗುವುದು ಹೇಗೆ?:

  • ಫೇಸ್‌ಬುಕ್‌ನಿಂದ ಬಂದಿರುವುದು ಎಂದು ಹೇಳಿಕೊಳ್ಳುವ ಅನುಮಾನಾಸ್ಪದ ಇಮೇಲ್ ಅಥವಾ ಸಂದೇಶವನ್ನು ನೀವು ಪಡೆದರೆ, ಯಾವುದೇ ಲಿಂಕ್‌ಗಳು ಅಥವಾ ಲಗತ್ತುಗಳನ್ನು ಕ್ಲಿಕ್ ಮಾಡಬೇಡಿ. ನಿಮ್ಮ ಫೇಸ್‌ಬುಕ್‌ ಸೆಟ್ಟಿಂಗ್‌ಗಳಲ್ಲಿ ಫೇಸ್‌ಬುಕ್‌ನಿಂದ ಕಳುಹಿಸಲಾದ ಇತ್ತೀಚಿನ ಇಮೇಲ್‌ಗಳನ್ನು ಮೊದಲು ಪರೀಕ್ಷಿಸಿ.
  • ಸ್ಕ್ಯಾಮರ್‌ಗಳು ನಿಮ್ಮಿಂದ ಹಣ ದೋಚಲು ವಿವಿಧ ಮಾರ್ಗಗಗಳನ್ನು ಹುಡುಕುತ್ತಾರೆ. ನಿಮಗೆ ಬೆದರಿಕೆ ಹಾಕಬಹುದು. ಪರಿಚಿತ ವ್ಯಕ್ತಿಯಿಂದ ಮೆಸೇಜ್ ಬಂದರೂ ಮತ್ತೊಮ್ಮೆ ಪರಿಶೀಲಿಸಿ.
  • ಸ್ಕ್ಯಾಮರ್‌ಗಳು ಆಗಾಗ್ಗೆ ಮೆಸೇಜ್ ಮಡುತ್ತಲೆ ಇರುತ್ತಾರೆ. ಈ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ ಅಥವಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿ. ಹೀಗೆ ಮೆಸೇಜ್ ಬರುತ್ತಿರುತ್ತದೆ.
  • ಸ್ಕ್ಯಾಮರ್‌ಗಳು ಹೆಚ್ಚಾಗಿ ನಿಮಗೆ ಪರಿಚಿತರ ಫೋಟೋವನ್ನು ಬಳಸಬಹುದು. ನಂತರ ಹಣಕ್ಕೆ ಬೇಡಿಕೆ ಇಡಬಹುದು.
  • ನಿಮ್ಮ ಪಾಸ್‌ವರ್ಡ್, ಸಾಮಾಜಿಕ ಭದ್ರತೆ ಸಂಖ್ಯೆ, ಕ್ರೆಡಿಟ್ ಕಾರ್ಡ್ ಸಂಖ್ಯೆಗಳಂತಹ ಹಣಕಾಸಿನ ಮಾಹಿತಿ ಮತ್ತು ನಿಮ್ಮ ಆನ್‌ಲೈನ್ ಭದ್ರತೆಯನ್ನು ಬಲಪಡಿಸಲು ಕೇಳುವ ಸಂದೇಶಗಳಿಗೆ ಉತ್ತರಿಸಬೇಡಿ ಮತ್ತು ವರದಿ ಮಾಡಬೇಡಿ. ಟು-ಸ್ಟೆಪ್ ವೆರಿಫಿಕೇಷನ್ ಸಕ್ರಿಯಗೊಳಿಸಿ.
  • ವಿಶ್ವಾಸಾರ್ಹ ಆಂಟಿವೈರಸ್ ಸಾಫ್ಟ್‌ವೇರ್ ಬಳಸಿ. ಈ ಸಾಫ್ಟ್‌ವೇರ್ ಅನ್ನು ಅಪ್ಡೇಟ್ ಮಾಡುತ್ತಿರಿ.
  • ಲಾಗಿನ್ ಎಲರ್ಟ್ ಆನ್ ಮಾಡಿ. ಇದರಿಂದ ಯಾರಾದರೂ ನಿಮ್ಮ ಖಾತೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದರೆ ನಿಮಗೆ ಮೆಸೇಜ್ ಬರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ